Advertisement
ಇವರನ್ನೆಲ್ಲ ಬಿಜೆಪಿ ಜಿಲ್ಲಾ ಘಟಕಗಳು ಶಿಫಾರಸು ಮಾಡಿಲ್ಲ, ಆದರೆ ಕೇಂದ್ರ ಸಂಸದೀಯ ಸಮಿತಿಯೇ ಕಣಕ್ಕಿಳಿಸಿದೆ. ಯಾವ ಆಧಾರದಲ್ಲಿ ಹೀಗೆ ಮಾಡಲಾಗಿದೆ? ಮುಂದಿನ ವರ್ಷ ಲೋಕಸಭಾ ಚುನಾವಣೆ ಇರುವಾಗ ಇವರನ್ನು ವಿಧಾನಸಭೆಯಲ್ಲಿ ಸ್ಪರ್ಧಿಸಲು ಕಳುಹಿಸಿರುವುದೇಕೆ ಎಂಬುದೆಲ್ಲ ದೊಡ್ಡ ಪ್ರಶ್ನೆಗಳು. ರಾಜಕೀಯ ವಿಶ್ಲೇಷಕರ ಪ್ರಕಾರ, ಇದರ ಹಿಂದೆ ಬಿಜೆಪಿಯ ಯಾವುದೇ ತಂತ್ರಗಳಿದ್ದರೂ, ವಿಶೇಷ ಪರಿಣಾಮ ಬೀರುವು ದಿಲ್ಲ. ಕೇವಲ ಅಭ್ಯರ್ಥಿಗಳನ್ನು ಬದಲಿಸಿದ ಮಾತ್ರಕ್ಕೆ, ಮತದಾರರ ಅಭಿಪ್ರಾಯ ಬದಲಾ ಗಲು ಸಾಧ್ಯವೇ? ಇದು ಬಿಜೆಪಿಯೊಳಗೆ ಒಳ ಜಗಳ ತಂದಿಡುತ್ತದೆ. ಎಲ್ಲಕ್ಕಿಂತ ಮುಖ್ಯಮಂತ್ರಿ ಸ್ಥಾನದಲ್ಲಿ ಭದ್ರ ವಾಗಿ ಕುಳಿತಿರುವ ಶಿವರಾಜ್ ಸಿಂಗ್ ಚೌಹಾಣ್‌ಗೆ ಹೊಸಬರು ಸವಾಲು ಹಾಕಿದರೆ, ಎಲ್ಲವೂ ಸುಗಮವಾಗಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.
ಚುನಾವಣೆಯ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ನೀತಿ ಸಂಹಿತೆ ಜಾರಿಯಾದ ಬಳಿಕ ಅಂದರೆ ಅ.9ರಿಂದ ಈವರೆಗೆ ಚುನಾವಣ ಅಕ್ರಮಕ್ಕೆ ಸಂಬಂಧಿಸಿ ಒಟ್ಟು 347 ಕೋಟಿ ರೂ.ಗಳ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 122.6 ಕೋಟಿ ರೂ. ನಗದು, 230.9 ಕೆ.ಜಿ. ಚಿನ್ನ, 1038.9 ಕೆ.ಜಿ. ಬೆಳ್ಳಿ ಹಾಗೂ 156.2 ಕೋಟಿ ರೂ. ಮೌಲ್ಯದ ಇತರ ಅಮೂಲ್ಯ ವಸ್ತುಗಳು, 20.7 ಕೋಟಿ ರೂ. ಮೌಲ್ಯದ ಮದ್ಯ, 17.18 ಕೋಟಿ ರೂ. ಮೌಲ್ಯದ ಗಾಂಜಾ ಮತ್ತು 30.4 ಕೋಟಿ ರೂ. ಮೌಲ್ಯದ ಉಡುಗೊರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಚುನಾವಣ ಆಯೋಗ ತಿಳಿಸಿದೆ. ನ.30ರಂದು ರಾಜ್ಯ ವಿಧಾನಸಭೆಗೆ ಮತದಾನ ನಡೆಯಲಿದೆ.