Advertisement
ಸೆ.23ರಂದು ಬಿಜೆಪಿ ಬಂಟ್ವಾಳದ ವತಿಯಿಂದ ಅನಂತಾಡಿ ಗ್ರಾ.ಪಂ. ವ್ಯಾಪ್ತಿಯ ಕರಿಂಕ ಜೋಗೊಟ್ಟು ಮನೆ ಯಲ್ಲಿ ಬೂತ್ ನಂ. 208ಗೆ ನೂತನ ಬೂತ್ ಸಮಿತಿ ಪದಾಧಿಕಾರಿಗಳ ನೂತನ ಆಯ್ಕೆ ಪ್ರಕ್ರಿಯೆಯನ್ನು ಅವರು ಮತ್ತು ಉಳಿ ಗ್ರಾ.ಪಂ. ಸದಸ್ಯ ಚಿದಾನಂದ ರೈ ನೆರವೇರಿಸಿ ಬಳಿಕ ಮಾತನಾಡಿದರು.
ಬೂತ್ ಮಟ್ಟದ ಕಾರ್ಯಕರ್ತನೂ ಪ್ರಾಮಾಣಿಕ ಸೇವೆಯಿಂದ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂಬುವುದಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಗೊಂಡ ಸಂಸದ ನಳಿನ್‌ಕುಮಾರ್ ಕಟೀಲು ಮಾದರಿ ಯಾಗಿದ್ದಾರೆ ಎಂದರು. ಬೂತ್‌ನ ನೂತನ ಅಧ್ಯಕ್ಷರಾಗಿ ನಾಗೇಶ್ ಭಂಡಾರಿ ಕರಿಂಕ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಪೂಜಾರಿ ಗೋಳಿಕಟ್ಟೆ, ಕಾರ್ಯದರ್ಶಿಗಳಾಗಿ ಶಿವ ಕುಮಾರ್ ಮಣಿಯಾಣಿ ದೇವಿನಗರ, ಕೇಶವ ಆಚಾರ್ಯ ಸಂಕೇಶ ಆಯ್ಕೆ ಯಾದರು. ಸಮಿತಿ ಸದಸ್ಯರಾಗಿ ಸುರೇಶ್ ವಿ.ಎಂ., ಕೃಷ್ಣಪ್ಪ ಗೌಡ, ಬಾಲಕೃಷ್ಣ ಪೂಜಾರಿ, ಆನಂದ ಭಂಡಾರಿ, ವೆಂಕಟೇಶ ಕೋಟ್ಯಾನ್, ಉಮೇಶ್ ನಿಡ್ಯಾರ, ಸಂಕಪ್ಪ ಕೂಡು ರಸ್ತೆ, ಪ್ರಖ್ಯಾತ್ ಹೆಗ್ಡೆ, ವಸಂತಿ, ಗೀತಾ ಚಂದ್ರಶೇಖರ, ಸುಜಾತಾ ಬಾಕಿಲ, ಸಂಧ್ಯಾ ಆಚಾರ್ಯ, ಶಶಿಕಲಾ, ಧನಂಜಯ ಗೌಡ, ಹರೀಶ್ ಗೌಡ ಪುಳಿತ್ತಡಿ, ಮೋಹನ್ ಗೋಳಿಕಟ್ಟೆ, ಜನಾರ್ದನ ಆಚಾರ್ಯ ಸಂಕೇಶ, ಅಶೋಕ ಜಿ., ಕಿರಣ್ ಭಂಡಾರಿ, ಚಂದ್ರಿಕಾ ಭಂಡಾರಿ, ರವೀಶ್ ಸಂಕೇಶ, ರವಿ ದೇವಿನಗರ, ಚಂದ್ರಶೇಖರ್ ಬಾಬನಕಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.
Related Articles
ನಾಗೇಶ್ ಭಂಡಾರಿ ಸ್ವಾಗತಿಸಿ, ಜಯರಾಮ ಆಚಾರ್ಯ ವಂದಿಸಿದರು.
Advertisement
ಪಕ್ಷಕ್ಕಾಗಿ ಸೇವೆಕ್ಷೇತ್ರದ ಅಭಿವೃದ್ಧಿ ಯೋಜನೆಯಲ್ಲಿ ವಿವಿಧ ಇಲಾಖೆಗಳಿಂದ ಬಿಡುಗಡೆಯಾದ ವಿವಿಧ ಅನುದಾನವನ್ನು ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಅವರು ಯಾವುದೇ ತಾರತಮ್ಯವಿಲ್ಲದೆ ಪ್ರತೀ ಗ್ರಾಮ ಮತ್ತು ಬೂತ್‌ಗಳಿಗೆ ತನ್ನ ಇತಿಮಿತಿಯಲ್ಲಿ ಹಂಚಿಕೆ ಮಾಡಿರುತ್ತಾರೆ. ಕಾರ್ಯಕರ್ತರು ಯಾವುದೇ ಗೊಂದಲ ಮಾಡದೆ ಪಕ್ಷಕ್ಕಾಗಿ ಸೇವೆ ಮಾಡುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆಶಯವನ್ನು ಸಾಕಾರಗೊಳಿಸೋಣ.
-ಪ್ರಭಾಕರ ಪ್ರಭು, ತಾ.ಪಂ. ಸದಸ್ಯರು