Advertisement

BJP: ಯತ್ನಾಳ ಅನಾವಶ್ಯಕ ಟೀಕೆ ನಿಲ್ಲಿಸಲಿ: ಎಂ.ಪಿ.ರೇಣುಕಾಚಾರ್ಯ

11:13 PM Dec 03, 2023 | Team Udayavani |

ಹೊನ್ನಾಳಿ: ಬಿ.ವೈ.ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ನೇಮಕ ಮಾಡಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಗಳಿಸಲು ಬಿಜೆಪಿಗೆ ಉತ್ತಮ ಅವಕಾಶ ಇರುವುದರಿಂದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅನಾವಶ್ಯಕವಾಗಿ ಟೀಕಿಸುವುದನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಾಕೀತು ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್‌ ಹಿರಿಯರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಕೇಂದ್ರ ಸಚಿವರಾಗಿದ್ದವರು. ಈಗಾಗಲೇ ರಾಜ್ಯಾಧ್ಯಕ್ಷರ ಆಯ್ಕೆಯಾಗಿದೆ. ಸುಮ್ಮನೆ ಟೀಕಿಸುವುದರಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಯತ್ನಾಳ್‌ ಹಿಂದೆ ಜೆಡಿಎಸ್‌ಗೆ ಹೋಗಿದ್ದರು. ಅವರನ್ನು ಮಾಜಿ ಸಿಎಂ ಬಿಎಸ್‌ವೈ ಗೌರವಯುತವಾಗಿ ಪಕ್ಷಕ್ಕೆ ಕರೆತಂದಿದ್ದಾರೆ. ಇದನ್ನು ಯತ್ನಾಳ್‌ ಅರ್ಥ ಮಾಡಿಕೊಳ್ಳಬೇಕು. 70-80ರ ದಶಕದಲ್ಲಿ ಪಕ್ಷ ಕಟ್ಟುವವರಿಲ್ಲದ ಸಮಯದಲ್ಲಿ ಯಡಿಯೂರಪ್ಪ ಸೈಕಲ್‌ನಲ್ಲಿ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದಾರೆ. ಪಕ್ಷ ಬೆಳೆದ ಮೇಲೆ ಪಕ್ಷಕ್ಕೆ ಅವರು, ಇವರು ಅನಿವಾರ್ಯವಲ್ಲ ಎಂದು ಶಾಸಕರಾಗಿ ಮಾತನಾಡುವುದು ಬಹು ಸುಲಭ. ಬಿಎಸ್‌ವೈ ಹಾಗೂ ಬಿವೈವಿ ರೆಡಿಮೇಡ್‌ ಫುಡ್‌ ಅಲ್ಲ ಎಂಬುದನ್ನು ಟೀಕಾಕಾರರು ಅರ್ಥೈಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next