Advertisement
ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಬಹಳ ಗಂಭೀರವಾಗಿ ಕೆಲಸ ಮಾಡಬೇಕು. ಆದರೆ ವಿಜಯೇಂದ್ರಗೆ ಇನ್ನೂ ಹುಡುಗಾಟದ ಬುದ್ಧಿ ಇದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಲ್ಲ. ಯಡಿಯೂರಪ್ಪ ಬಹಳಷ್ಟು ಹೋರಾಟ ಮಾಡಿದ ಬಳಿಕ ಮಹತ್ವದ ಹಾಗೂ ಬಹಳ ದೊಡ್ಡ ಸ್ಥಾನಕ್ಕೆ ತಲುಪಿದ್ದಾರೆ. ಈಗ ಅವರಿಂದ ಯಡಿಯೂರಪ್ಪ ಹೋರಾಟ ಮತ್ತು ತ್ಯಾಗ ಮಂಕಾಗುತ್ತಿದೆ ಎಂದರು.
ಕಾಂಗ್ರೆಸ್‌ನಲ್ಲಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆಗೆ ಬರುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗಿದ್ದಾರೆ. ಅವರ ಮಾತುಗಳು ಬದಲಾಗುತ್ತಿವೆ. ಒಂದು ವಾರದಿಂದ ಮೊದಲಿನ ಸಿದ್ದರಾಮಯ್ಯ ಆಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಅವರಿಗೆ ಧನ್ಯವಾದಗಳು ಎಂದರು. ಸಮುದ್ರದ ರಭಸದ ಅಲೆಯಂತೆ ಬಂದು ಫಡ್ನವೀಸ್ ಅಧಿಕಾರ ಸ್ವೀಕಾರ:
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅವರಿಗೂ ಹಾಗೂ ಮಹಾರಾಷ್ಟ್ರ ಜನತೆಗೆ ಧನ್ಯವಾದ ಹೇಳುತ್ತೇನೆ. ಈ ಹಿಂದೆ ಫಡ್ನವೀಸ್ ರನ್ನು ಅಪಮಾನ ಮಾಡಿ ಕೆಳಗೆ ಇಳಿಸಿದ್ದರು. ಆಗ ಫಡ್ನವೀಸ್ ಅವರು ನಾನು ಸಮುದ್ರ ಇದ್ದ ಹಾಗೆ, ವಾಪಸ್ ಹೋಗುವುದು ಗೊತ್ತು, ರಭಸದಿಂದ ಬರೋದು ಗೊತ್ತು. ಸಮುದ್ರದ ಬಳಿ ಮನೆ ಕಟ್ಟಬೇಡಿ ಎಂದು ಹೇಳಿದ್ದರು. ಈಗ ಅದೇ ರೀತಿಯಲ್ಲಿ ಬಂದು ಫಡ್ನವೀಸ್ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎಂದು ಹೇಳಿದರು.