Advertisement

ನಾಯಕತ್ವ ಬದಲಾವಣೆ ಹಾದಿ ಬೀದಿಯ ಚರ್ಚೆ ವಿಷಯವಲ್ಲ: ಯತ್ನಾಳ್ ಗೆ ಕಟೀಲ್ ತಿರುಗೇಟು

03:01 PM Jul 05, 2021 | Team Udayavani |

ಹಾವೇರಿ: ನಾಯಕತ್ವ ಬದಲಾವಣೆ ಚರ್ಚೆಯು ಹಾದಿ ಬೀದಿಯಲ್ಲಿ ಮಾಡುವ ವಿಷಯವಲ್ಲ. ಈ ಬಗ್ಗೆ ಚರ್ಚೆ ಮಾಡಲು ಪಕ್ಷ, ಶಾಸಕಾಂಗ ಸಭೆ ಇದೆ. ಆ ಸಂದರ್ಭದಲ್ಲಿ ಮಾತಾಡಬೇಕು. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಗೊಂದಲಗಳು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ಹೇಳಿದರು.

Advertisement

ಹಿರೇಕೇರೂರಿನಲ್ಲಿ ಮಾತನಾಡಿದ ಅವರು. ಕಾಂಗ್ರೆಸ್ ಮುಳುಗುವ ಹಡಗು. ಕಾಂಗ್ರೆಸ್ ಹಡಗಿಗೆ ತೂತು ಬಿದ್ದಿದೆ. ಯಾವಾಗ ಮುಳುಗುತ್ತೋ ಗೊತ್ತಿಲ್ಲ. ಯಾರಾದರೂ ಬಂದು ರಕ್ಷಿಸಲಿ ಎಂದು ಡಿ ಕೆ ಶಿವಕುಮಾರ್ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಮುಳುಗುವ ಹಡಗನ್ನು ಹತ್ತುವ ಜನ ಇಲ್ಲ. ಹೀಗಾಗಿ ಯಾವ ಪಕ್ಷದವರಾದರೂ ನಮ್ಮ ಹಡಗು ಹತ್ತಲಿ ಎಂದು ಬಾಂಬೆ ಟೀಂ ಶಾಸಕರಿಗೆ ಡಿ.ಕೆ ಶಿವಕುಮಾರ್ ಮತ್ತ ಕಾಂಗ್ರೆಸ್ ಪಕ್ಷ ಸೇರಿ ಎಂಬ ಆಫರ್ ನೀಡಿದೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ನವರನ್ನು ಜನ ಮರೆತು ಬಿಟ್ಟಿದ್ದಾರೆ‌ : ಬಿ.ಸಿ. ಪಾಟೀಲ್

ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಏನು ಬೇಕೋ ಅದು ಮಾಡುತಿದ್ದಾರೆ. ರಾಜ್ಯ ಸರ್ಕಾರ ಏನು ಧೋರಣೆ ಬೇಕೋ ಅದನ್ನು ತೋರಲಿದೆ ಎಂದರು.

Advertisement

ಸಿ‌.ಪಿ. ಯೋಗೇಶ್ವರ್ ಸಿಎಂ ಬಗ್ಗೆ ಅಂಬಾರಿ ಆನೆಗೆ ಹೋಲಿಸಿ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ನಳಿನ್ ಕುಮಾರ್ ಕಟೀಲ್, ಅವರು ಯಾವ ರೀತಿ ಭಾವನೆ ವ್ಯಕ್ತಪಡಿಸಿದ್ದಾರೋ ಗೊತ್ತಿಲ್ಲ. ನಾನು ಇದರ ವಿವರಣೆ ಪಡೆಯುವೆ. ನಮ್ಮ ಮಂತ್ರಿಗಳು, ಶಾಸಕರು ಮಾಧ್ಯಮಗಳ ಮುಂದೆ ಅನಗತ್ಯ ಮಾತಾಡಬಾರದು. ಕೋವಿಡ್ ಸಂದರ್ಭದಲ್ಲಿ ಜನರ ಪ್ರಾಣ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಾನು ಸಿ.ಪಿ ಯೋಗೇಶ್ವರ್ ಅವರಿಂದ ವಿವರಣೆ ಪಡೆಯುತ್ತೇನೆ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next