Advertisement

‘ಡಬಲ್ ವಾಷಿಂಗ್ ಮೆಷಿನ್’ : ಬಿಜೆಪಿ ವಿರುದ್ಧ ಕಾಂಗ್ರೆಸ್ ವ್ಯಂಗ್ಯ ಟೀಕೆ

02:23 PM Mar 09, 2023 | Team Udayavani |

ನವದೆಹಲಿ: ಹಿಂದಿನ ವಾಷಿಂಗ್ ಪೌಡರ್ ಜಾಹೀರಾತಿನ ಉದಾಹರಣೆಯೊಂದಿಗೆ ಕಾಂಗ್ರೆಸ್ ಮಂಗಳವಾರ ಬಿಜೆಪಿ ವಿರುದ್ಧ ವ್ಯಂಗ್ಯವಾಗಿ ವಾಗ್ದಾಳಿ ನಾಡೆಸಿದ್ದು, ಬಿಜೆಪಿ ರಾಜ್ಯ ಸರಕಾರಗಳು ಹಿಂದಿನ ಪಾಪಗಳನ್ನು ಶುದ್ಧೀಕರಿಸುವ ಡಬಲ್ ವಾಷಿಂಗ್ ಮೆಷಿನ್ ಗಳಾಗಿವೆ ಎಂದು ಆರೋಪಿಸಿದೆ.

Advertisement

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ನಲ್ಲಿ ‘ಹಿಂದಿನ ವಾಷಿಂಗ್ ಪೌಡರ್ ಜಾಹೀರಾತಿನ ಗ್ರಾಫಿಕ್ ಅನ್ನು ಪೋಸ್ಟ್ ಮಾಡಿದ್ದು ”ಬಿಜೆಪಿ ಹಾಲಿನಂತಹ ಬಿಳಿಯನ್ನು ತರುತ್ತದೆ, ಕಳಂಕಿತ ನಾಯಕರೂ ಸಹ ಹೊಳೆಯುವಂತೆ ಕಾಣಿಸುತ್ತಾರೆ” ಎಂದು ವ್ಯಂಗ್ಯವಾಗಿ ಬರೆದಿದ್ದಾರೆ.

ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ ನೇತೃತ್ವದ ಮೇಘಾಲಯ ಸೇರಿದಂತೆ ಈಶಾನ್ಯದಲ್ಲಿ ಮೂರು ಸರಕಾರಗಳು ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೂಲಕ ಕಾಂಗ್ರೆಸ್‌ ಈ ಟೀಕೆ ಮಾಡಿದ್ದು, ಮೇಘಾಲಯದಲ್ಲಿ ಸಂಗ್ಮಾ ನೇತೃತ್ವದ ಸರಕಾರವನ್ನು ಬೆಂಬಲಿಸಿದ್ದಕ್ಕಾಗಿ ಕಾಂಗ್ರೆಸ್ ಬಿಜೆಪಿಯನ್ನು ಟೀಕಿಸಿದೆ. ಕೆಲವು ದಿನಗಳ ಹಿಂದೆ ಅವರ ಆಡಳಿತವನ್ನು ಬಿಜೆಪಿಯ ಉನ್ನತ ನಾಯಕತ್ವವು “ಅತ್ಯಂತ ಭ್ರಷ್ಟ” ಎಂದು ಪರಿಗಣಿಸಿತ್ತು ಮತ್ತು ಈಗ ಪಕ್ಷವು ಅವರೊಂದಿಗೆ ಕೈಜೋಡಿಸುತ್ತಿದೆ ಎಂದು ಟೀಕಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next