Advertisement

Puttur: ಖಾಸಗಿ ಸಂಸ್ಥೆಯ ಗೋದಾಮಿನಲ್ಲಿ ಬೆಂಕಿ ಅವಘಡ: 2 ಕೋ.ರೂ.ನಷ್ಟ ಸಾಧ್ಯತೆ

08:38 PM Apr 02, 2024 | Team Udayavani |

ಪುತ್ತೂರು: ಪ್ರತಿಷ್ಠಿತ ಗೃಹೋಪಯೋಗಿ ಹಾಗೂ ಎಲೆಕ್ಟ್ರಾನಿಕ್ಸ್‌ ನ ಖಾಸಗಿ ಸಂಸ್ಥೆಯೊಂದರ ಪುತ್ತೂರಿನ ದರ್ಬೆ ಗೋದಾಮಿನಲ್ಲಿ ಅಗ್ನಿ ಆಕಸ್ಮಿಕದಿಂದ ಸುಮಾರು 2 ಕೋಟಿ ಮೌಲ್ಯದ ವಸ್ತುಗಳ ಬೆಂಕಿಗೆ ಆಹುತಿಯಾದ ಘಟನೆ ಎ.2 ರಂದು ಸಂಭವಿಸಿದೆ.

Advertisement

ದರ್ಬೆಯ ಸಂತೃಪ್ತಿ ಹೊಟೇಲ್‌ ಹಿಂಭಾಗದಲ್ಲಿ ಇರುವ ಗೋದಾಮಿನಲ್ಲಿ ನಸುಕಿನ 3 ಗಂಟೆಯ ಹೊತ್ತಿಗೆ ಬೆಂಕಿ ಅವಘಡ ಸಂಭವಿಸಿದೆ. ವಿದ್ಯುತ್‌ ಶಾರ್ಟ್‌ ಸಕ್ಯೂರ್ಟ್‌ ನಿಂದ ಈ ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಮುಂಜಾನೆ ನಾಲ್ಕು ಗಂಟೆ ಹೊತ್ತಿಗಾಗಲೇ ಮಾಹಿತಿ ಪಡೆದ ಸಿಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ತತ್‌ ಕ್ಷಣ ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಲು ಮುಂದಾಯಿತು. ಅದಾಗಲೇ ಗೋದಾಮಿನಲ್ಲಿದ್ದ ಎಲ್ಲ ಎಲೆಕ್ಟ್ರಾನಿಕ್ಸ್ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ವಾಷಿಂಗ್‌ ಮಿಶನ್‌, ಪ್ರಿಡ್ಜ್ ಮೊದಲಾದ ಪರಿಕರಗಳು ಗೋದಾಮಿನಲ್ಲಿ ಇತ್ತು. ‌

ಅವೆಲ್ಲವೂ ಬೆಂಕಿಯ ಕೆನ್ನಲಾಗೆ ಸುಟ್ಟು ಕರಕಲಾಗಿತ್ತು. ಅಂದಾಜು ಎರಡು ಕೋಟಿ ರೂ.ನಷ್ಟ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next