Advertisement
ಬುಧವಾರ ರಾತ್ರಿ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ಸೋಲಿಗೆ ಸಿದ್ಧರಾಗಬೇಕಿದೆ. ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿ ಗೆಲುವು ಲಭಿಸುತ್ತದೆ. ಕರಾವಳಿ ಯುವಕರ ಉದ್ಯೋಗಕ್ಕೆ ಪರಿಸರ ಸಹ್ಯ ಕಾರ್ಖಾನೆಗಳ ಸ್ಥಾಪನೆಗೆ ಚಿಂತಿಸಲಾಗಿದೆ ಎಂದರು.
ಜಾತಿ ಹೆಸರಿನಲ್ಲಿ ನಾನು ರಾಜಕಾರಣ ಮಾಡುವುದಿಲ್ಲ. ಮಂಡ್ಯದಲ್ಲಿ ಯಾರು ಏನೇ ಪ್ರಚಾರ ಮಾಡಿದರೂ ನಿಖೀಲ್ ಗೆಲುವು ನಿಶ್ಚಿತ. ಇಡೀ ದೇಶದಲ್ಲಿ ಮಂಡ್ಯದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಏನೇ ಅಪಪ್ರಚಾರ ನಡೆದರೂ ಮಂಡ್ಯದಲ್ಲಿ ಸಮ್ಮಿಶ್ರ ಅಭ್ಯರ್ಥಿಯದ್ದೇ ಗೆಲುವು. ರಾಜ್ಯದಲ್ಲಿ 20ಕ್ಕೆ ಕಡಿಮೆಯಾಗದಷ್ಟು ಸ್ಥಾನಗಳನ್ನು ಗೆಲ್ಲಲಿದ್ದೇವೆ ಎಂದರು. ಪ್ರಮೋದ್ ಮಧ್ವರಾಜ್, ಡಾ| ಜಯಮಾಲಾ, ಎಸ್.ಎಲ್. ಭೋಜೇಗೌಡ, ಕೆ. ಗೋಪಾಲ ಪೂಜಾರಿ. ಯು.ಆರ್. ಸಭಾಪತಿ ಉಪಸ್ಥಿತರಿದ್ದರು.
Related Articles
ಒಂದು ವಾರದಿಂದ ಸತತ ಪ್ರಯತ್ನ ಮಾಡುತ್ತಿದ್ದರೂ ಹೆಲಿಕಾಪ್ಟರ್ ದೊರೆಯಲಿಲ್ಲ. ಆದ್ದರಿಂದ ಮುಂಜಾನೆ ಬೆಂಗಳೂರಿನಿಂದ ಕಾರಿನಲ್ಲಿ ಶಿವಮೊಗ್ಗ, ಕುಂದಾಪುರ, ಉ.ಕ. ಪ್ರಯಾಣದಲ್ಲಿದ್ದೇನೆ. ತಲುಪುವುದು ವಿಳಂಬವಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
Advertisement
ಎ. 7ರಂದು ಉಡುಪಿ, ದ.ಕ.ಕ್ಕೆಚಿಕ್ಕಮಗಳೂರಿನಲ್ಲಿ ಎ. 5ರಂದು, ಉಡುಪಿಯಲ್ಲಿ ಮೂರು ಕಡೆ ಎ. 7ರಂದು, ಅದೇ ದಿನ ಸುಳ್ಯ, ಪುತ್ತೂರು ಭಾಗದಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಲಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದರು.