Advertisement

ಕೊಟ್ಟ ಕುದುರೆ ಏರಲಾರದವ ಮತ್ತೊಂದು ಕುದುರೆ ಬಯಸುವವ ವೀರನಲ್ಲ: ಡಿಕೆಶಿ ಗೆ ಬಿಜೆಪಿ ಟಾಂಗ್

02:39 PM Jan 03, 2022 | Team Udayavani |

ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಸಂಬಂಧಪಟ್ಟಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಈಗ ಬಿಜೆಪಿಯೂ ತಿರುಗಿ ಬಿದ್ದಿದ್ದು ಕೊಟ್ಟ ಕುದುರೆ ಏರಲರಿಯದ ಧೀರ ಎಂದು ಟೀಕಿಸಿದೆ.

Advertisement

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಯ ಮಹತ್ವ ಅರ್ಥ ಮಾಡಿಕೊಳ್ಳದೇ ಇದ್ದರೆ ಹೇಗೆ ಎಂದು ಪ್ರಶ್ನೆ ಮಾಡಿದೆ.  ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಿಂದೂ ದೇವಾಲಯಗಳ ವಿಚಾರದಲ್ಲಿ ನಮಗೆ ಯಾರೂ ಪಾಠ ಹೇಳಿಕೊಡುವುದು ಬೇಡ: ಪ್ರತಾಪ್ ಸಿಂಹ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳದೆ ಇದ್ದರೆ ಹೇಗೆ? ಟೀಕೆ ಹಾಗೂ ಅಭಿಪ್ರಾಯಗಳೇ ಮನುಷ್ಯನ ವ್ಯಕ್ತಿತ್ವ ರೂಪಿಸುವುದು ಎಂಬುದನ್ನು ಕಾಂಗ್ರೆಸ್‌ ಅಧ್ಯಕ್ಷರು ಮೊದಲು ಅರ್ಥ ಮಾಡಿಕೊಳ್ಳಲಿ. ಮೇಕೆದಾಟುಗಾಗಿ ಪಾದಯಾತ್ರೆ ನಡೆಸಲು ಮುಂದಾಗಿರುವ ಕಾಂಗ್ರೆಸ್‌ ಮೊದಲು ಸತ್ಯ ಏನೆಂಬುದನ್ನು ತಿಳಿಸಲಿ. ಡಿಪಿಆರ್ ಸಿದ್ಧಪಡಿಸುವಲ್ಲಿ ಕಾಂಗ್ರೆಸ್ ಪಾತ್ರ ಏನೂ ಇರಲಿಲ್ಲ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ, ನಿಜವಲ್ಲವೇ? ಡಿಕೆಶಿಯವರೇ, ನೀವು ಅಧಿಕಾರದಲ್ಲಿದ್ದಾಗ ಕೇವಲ ಪರ್ಸಂಟೇಜ್ ಯೋಜನೆಗಳಿಗೆ ಮಾತ್ರ ಆದ್ಯತೆ ನೀಡಿದ್ದಿರಾ?  ಕೊಟ್ಟ ಕುದುರೆ ಏರಲರಿಯದೇ ಮತ್ತೊಂದು ಕುದುರೆ ಬಯಸುವವ ವೀರನೂ ಅಲ್ಲ, ಧೀರನೂ ಅಲ್ಲ. ಜಲಸಂಪನ್ಮೂಲ ಸಚಿವರಾಗಿದ್ದಾಗ ಮೇಕೆದಾಟು ಯೋಜನೆಗಾಗಿ ಏನು ಮಾಡದ ಶಿವಕುಮಾರ್ ಅವರು ಈಗ ಸುಳ್ಳಿನ ಜಾತ್ರೆ ಆರಂಭಿಸಿದ್ದಾರೆ. ಜಲಸಂಪನ್ಮೂಲ ಇಲಾಖೆಯಲ್ಲಿ ಭ್ರಷ್ಟಾಚಾರ ಸಾಂಸ್ಥಿಕರಿಸಿ ಹೋದವರಿಂದ ಇನ್ನೇನು‌‌ ನಿರೀಕ್ಷಿಸಲು ಸಾಧ್ಯ? ಎಂದು ಬಿಜೆಪಿ ವ್ಯಂಗ್ಯವಾಡಿದೆ.

Koo App

Advertisement

Udayavani is now on Telegram. Click here to join our channel and stay updated with the latest news.

Next