Advertisement

ಕಾಂಗ್ರೆಸ್‌ ಶಾಸಕರ ಕಚೇರಿಗೆ ಬಿಜೆಪಿ ಮುತ್ತಿಗೆ

01:15 PM Dec 29, 2017 | Team Udayavani |

ಕುಂದಗೋಳ: ಮಹದಾಯಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆಂದು ತಾಲೂಕು ಬಿಜೆಪಿ ಮುಖಂಡರು, ಪಟ್ಟಣದ ತಾಪಂನಲ್ಲಿರುವ  ಕಾಂಗ್ರೆಸ್‌ ಪಕ್ಷದ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟಿಸಿದರು. 

Advertisement

ಈ ವೇಳೆ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ ಮಾತನಾಡಿ, ಬಿ.ಎಸ್‌. ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ 100 ಕೋಟಿ ರೂ. ಗಳನ್ನು ಕಳಸಾ-ಬಂಡೂರಿ ಯೋಜನೆಗೆ ಬಿಡುಗಡೆ ಮಾಡಿದ್ದರು.

ಆದರೆ, ಈಗ ಮಹದಾಯಿ ವಿಷಯದಲ್ಲಿ ಕಾಂಗ್ರೆಸ್‌ನವರು ಯಡಿಯೂರಪ್ಪನವರ ಹೆಸರಿಗೆ ಧಕ್ಕೆ ತರುವಂತಹ ಪಿತೂರಿ ನಡೆಸಿದ್ದಾರೆಂದು ಕಿಡಿಕಾರಿದರು. ಬಿಜೆಪಿ  ಮುಖಂಡ ಎಂ.ಆರ್‌. ಪಾಟೀಲ ಮತ್ತು ಬಿಜೆಪಿ ತಾಲೂಕಾಧ್ಯಕ್ಷ ಮಾಂತೇಶ ಶ್ಯಾಗೋಟಿ ಮಾತನಾಡಿದರು.

ಜಿಪಂ ಸದಸ್ಯ ಎನ್‌.ಎನ್‌. ಪಾಟೀಲ್‌, ಭರಮಣ್ಣ ಮುಗಳಿ, ಮಲ್ಲಿಕಾರ್ಜುನ ಬಾಳಿಕಾಯಿ, ಬಾಬುಗೌಡ ಪಾಟೀಲ್‌, ಮುತ್ತು ಚಕಾರಿ, ಮಾರುತಿ ಕಲಘಟಗಿ, ಹನಮಂತಗೌಡ ಪಾಟೀಲ್‌, ಪೃಥ್ವಿ ಕಾಳೆ, ಬಸವರಾಜ ಕೊಪ್ಪದ, ಆರ್‌. ಎನ್‌. ಪಾಟೀಲ್‌, ಈಶ್ವರಪ್ಪ ಗಂಗಾಯಿ, ಗದಿಗೆಪ್ಪ ಕಳ್ಳಿಮನಿ, ಹನಮಂತ ಮೇಲಿನಮನಿ, ನಾಗರಾಜ ಸುಬರಗಟ್ಟಿ  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next