Advertisement

ಬಂಟ್ವಾಳ ಗಲಭೆಗೆ ಬಿಜೆಪಿ –ಎಸ್‌ಡಿಪಿಐ ನೇರ ಹೊಣೆ: ಐವನ್‌ ಡಿ’ಸೋಜಾ

03:45 AM Jul 11, 2017 | Team Udayavani |

ಕಾಪು: ಬಂಟ್ವಾಳದಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಬಿಜೆಪಿ ಮತ್ತು ಎಸ್‌ಡಿಪಿಐ ಸಂಘಟನೆ ಗಳೇ ನೇರ ಹೊಣೆ. ಬಿಜೆಪಿ ಮತ್ತು ಎಸ್‌ಡಿಪಿಐ ಪೋಷಿಸುತ್ತಿರುವ ಹಿಂದೂ – ಮುಸ್ಲಿಂ ಮೂಲಭೂತವಾದಿಗಳ ತಿಕ್ಕಾಟದ ಪರಿಣಾಮ ಜನಸಾಮಾನ್ಯರು ತೊಂದರೆಗೆ ಸಿಲುಕುವಂತಾಗಿದೆ ಎಂದು ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದ್ದಾರೆ.

Advertisement

ಕಾಪುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಎದುರಿಸಲು ಯಾವುದಾದರೂ ಒಂದು ಅಜೆಂಡಾ ಬೇಕಿತ್ತು. ಜನರ ಮುಂದೆ ನೇರವಾಗಿ ಹೋಗಲು ಮುಖವಿಲ್ಲದ ಬಿಜೆಪಿ ಜನರ ನಡುವೆ ಮತ್ತು ಜಾತಿ-ಜಾತಿಗಳ ನಡುವೆ ಕಂದಕ ಸೃಷ್ಟಿಸಿ ಆ ಮೂಲಕ ಮತಬೇಟೆಗೆ ತೆರಳಲು ಸಿದ್ಧಗೊಂಡಿದೆ ಎಂದರು.

ಕ್ರಮಕ್ಕೆ  ಆಗ್ರಹ
ದ.ಕ. ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಗೆ ಕಾರಣ ರಾದವ ರನ್ನು ಬಂಧಿಸುವಂತೆ ಮುಖ್ಯಮಂತ್ರಿಗಳು ಈಗಾಗಲೇ ಆದೇಶ ನೀಡಿದ್ದಾರೆ. ಅದರ ಜತೆಗೆ ನಿಷೇಧಾಜ್ಞೆ ಯನ್ನು ಧಿಕ್ಕರಿಸಿ ಬಿ.ಸಿ.ರೋಡ್‌ನ‌ಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಮುಖಂಡರು ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನಪ್ರತಿನಿಧಿಗಳ ಮೇಲೂ ಕಠಿನ ಕ್ರಮ ಜಾರಿ ಯಾಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಸರಕಾರಕ್ಕೆ ಅಶ್ರಫ್‌ – ಶರತ್‌ ಇಬ್ಬರೂ ಒಂದೇ
ಅಶ್ರಫ್‌ ಕೊಲೆ ಪ್ರಕರಣದ ತನಿಖೆಗೆ ನೀಡಿದಷ್ಟೇ ಮಹತ್ವ ವನ್ನು ಶರತ್‌ ಮಡಿವಾಳ ಹತ್ಯೆ ಪ್ರಕರಣದ ಆರೋಪಿ ಗಳ ಪತ್ತೆಗೂ ನೀಡಲಾಗಿದೆ.  ಯಾವುದೇ ಕಾರಣಕ್ಕೂ ಎಲ್ಲಿಯೂ ಜಾತಿ ಆಧಾರಿತ, ಪಕ್ಷ ಆಧಾರಿತ ಒತ್ತಡಗಳು ಕಾಣಿಸಿಕೊಳ್ಳದಂತೆ ನೋಡಿಕೊಳ್ಳಲಾಗುತ್ತಿದೆ. ಆರೋಪಿಗಳನ್ನು ರಕ್ಷಿಸುವ ಇರಾದೆ ಸರಕಾರಕ್ಕಿಲ್ಲ. ಅತೀ ಶೀಘ್ರದಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯೆಯ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next