Advertisement

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

08:50 PM Mar 28, 2024 | Team Udayavani |

ಮಧುಗಿರಿ(ತುಮಕೂರು):  ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ಚುನಾವಣ ಪ್ರಚಾರ ಸಭೆಯಲ್ಲಿ ಖುದ್ದು ಬಿಜೆಪಿ ಕಾರ್ಯಕರ್ತರೇ ಸಂಸದ ಜಿ.ಎಸ್‌.ಬಸವರಾಜು ವಿರುದ್ಧ  “ಗೋ ಬ್ಯಾಕ್‌’ ಘೋಷಣೆ ಕೂಗಿದರು.

Advertisement

ಬಸವರಾಜು ಅವರು ಕಾಂಗ್ರೆಸ್‌ನವರಿಂದಲೇ ನಾನು ಗೆದ್ದಿದ್ದು ಎಂದು ಹೇಳಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ. ಬಿಜೆಪಿ ಕಾರ್ಯಾಲಯಕ್ಕೆ ಕಾಲಿಡದೆ ಕಾಂಗ್ರೆಸ್‌ನವರ ಕೈಗೊಂಬೆಯಾಗಿದ್ದವರು ಈಗ ಯಾಕೆ ಕ್ಷೇತ್ರಕ್ಕೆ ಬರಬೇಕು ಎಂದು ಸಂಸದರ ವಿರುದ್ಧ ಸ್ವಪಕ್ಷದ ಕಾರ್ಯಕರ್ತರು ಪ್ರಶ್ನಿಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಂದಾದರು. ಅದಕ್ಕೂ ಕಾರ್ಯಕರ್ತರು ಸ್ಪಂದಿಸದಿದ್ದಾಗ ಬಸವರಾಜು ಅಲ್ಲಿಂದ ನಿರ್ಗಮಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next