Advertisement

ಬಿಜೆಪಿ ರೋಡ್‌ ಶೋ..ಬಿರುಸಿನ ಪ್ರಚಾರ..ಪಕ್ಷಕ್ಕೆ ಸೇರ್ಪಡೆ

09:27 AM Apr 30, 2018 | |

ದಾವಣಗೆರೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭರ್ಜರಿ ರೋಡ್‌ ಶೋ…, ಎಂದಿನಂತೆ ಪ್ರಚಾರ…, ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರ ಸೇರ್ಪಡೆ…, ಮಗನ ಪರವಾಗಿ ಮತಯಾಚನೆ ನಡೆಸಿದ ತಾಯಿ…, ಇವು ಓಟಿನ ಬೇಟೆಯಲ್ಲಿ ಭಾನುವಾರ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಚಟುವಟಿಕೆ.

Advertisement

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿಜಯಪುರದಿಂದ ಜಿಎಂಐಟಿ ಹೆಲಿಪ್ಯಾಡ್‌ ಗೆ ಆಗಮಿಸಿ ನೇರವಾಗಿ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ, ಪೂಜೆ ಸಲ್ಲಿಸಿದ ನಂತರ ಹೊಂಡದ ವೃತ್ತ, ಅರುಣಾ ಚಿತ್ರಮಂದಿರ ವೃತ್ತ, ರಾಂ ಅಂಡ್‌ ಕೋ ವೃತ್ತ, ಚರ್ಚ್‌ ರಸ್ತೆ, ರೆಡ್ಡಿ ಬಿಲ್ಡಿಂಗ್‌, ವಿನೋಬ ನಗರ 2ನೇ ಮುಖ್ಯ ರಸ್ತೆ ಇತರೆಡೆ ರೋಡ್‌ ಶೋ ಮೂಲಕ ಮತ ಯಾಚನೆ ನಡೆಸಿದರು. ಸಂಸದ ಜಿ.ಎಂ. ಸಿದ್ದೇಶ್ವರ್‌, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌, ದಕ್ಷಿಣ ಕ್ಷೇತ್ರದ ಅಭ್ಯರ್ಥಿ, ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಸಾಥ್‌ ನೀಡಿದರು. 

ಜಿಲ್ಲಾ ಉಸ್ತುವಾರಿ ಸಚಿವ, ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಎಸ್‌. ಮಲ್ಲಿಕಾರ್ಜುನ್‌, ವಾರ್ಡ್‌ ನಂಬರ್‌ 38 ಮತ್ತು 41ರ ವಿವಿಧ ಭಾಗದಲ್ಲಿ ಪ್ರಚಾರ ನಡೆಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಶಾಮನೂರು ಶಿವಶಂಕರಪ್ಪ ದಾವಣಗೆರೆ ಮಹಾನಗರ ಪಾಲಿಕೆಯ 1ನೇ ವಾರ್ಡ್‌ನ ಕರೂರು, ಯರಗುಂಟೆ, ಅಶೋಕನಗರ, ಎಸ್‌.ಎಂ.ಕೃಷ್ಣ ನಗರ, ಎಸ್‌.ಜೆ.ಎಂ.ನಗರ, ವಿಜಯನಗರ ಬಡಾವಣೆ, ಎಸ್‌.ಪಿ.ಎಸ್‌. ನಗರದ 1ನೇ ಹಂತ, ಎಸ್‌.ಪಿ.ಎಸ್‌. ನಗರದ 2ನೇ ಹಂತ, ಚೌಡೇಶ್ವರಿ ನಗರ, ಕುಂಬಾರ ಓಣಿ ಮತ್ತು ಕುರುಬರ ಕೇರಿಯಲ್ಲಿ ಪ್ರಚಾರ ನಡೆಸಿದರು. ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಮಗಳು ವರ್ಷಾ ತಂದೆ ಹಾಗೂ ಅಜ್ಜನ ಪರ ಮತಯಾಚಿಸಿದರು. ಡಾ| ಪ್ರಭಾ ಮಲ್ಲಿಕಾರ್ಜುನ, ಅಭಿಜೀತ್‌ ಜಿ. ಶಾಮನೂರು
ಸಾಥ್‌ ನೀಡಿದರು.

ಹರಿಹರ ಶಾಸಕ ಎಚ್‌.ಎಸ್‌. ಶಿವಶಂಕರ್‌ ದೇವರ ಬೆಳಕೆರೆ, ಬೂದಿಹಾಳ್‌, ಹರಳಹಳ್ಳಿಯಲ್ಲಿ ನಂತರ ಹರಿಹರ ಪಟ್ಟಣದಲ್ಲಿ
ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಬಿ.ಪಿ. ಹರೀಶ್‌, ಹೊಳೆಸಿರಿಗೆರೆ, ಮಲ್ಲನಾಯ್ಕನಹಳ್ಳಿ, ಕುಣಿಬೆಳಕೆರೆ, ಹರಿಹರದ ವಿದ್ಯಾನಗರದಲ್ಲಿ ಮತ ಯಾಚನೆ ನಡೆಸಿದರು. ಕಾಂಗ್ರೆಸ್‌ ಅಭ್ಯರ್ಥಿ ಎಸ್‌. ರಾಮಪ್ಪ ಬನ್ನಿಕೋಡು, ಷಂಶೀಪುರ, ಕೆ. ಬೇವಿನಹಳ್ಳಿ, ಕಡ್ಲೆಗೊಂದಿ, ಹರಿಹರ ನಗರದ ವಿವಿಧೆಡೆ ಪ್ರಚಾರ ನಡೆಸಿದರು.

ಮಾಯಕೊಂಡ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಸ್‌. ಬಸವರಾಜ್‌ ರಾಂಪುರ, ಹುಚ್ಚವ್ವನಹಳ್ಳಿ, ವಡ್ಡರಹಳ್ಳಿ, ಎಚ್‌. ಬಸವಾಪುರ, ಇತರೆಡೆ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಪ್ರೊ| ಎನ್‌. ಲಿಂಗಣ್ಣ ಹೊನ್ನಮರಡಿ, ಆಂಜನೇಯ ನಗರ, ಗೋಣಿವಾಡ ಕ್ಯಾಂಪ್‌, ಗೋಣಿವಾಡ, ಹೂವಿನಮಡು ಇತರೆ ಪ್ರಚಾರ ಕೈಗೊಂಡರು. ಪಕ್ಷೇತರ ಅಭ್ಯರ್ಥಿ ಎಚ್‌. ಆನಂದಪ್ಪ ಮಾಯಕೊಂಡ ಹೋಬಳಿಯ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಹರಪನಹಳ್ಳಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಎಂ.ಪಿ. ರವೀಂದ್ರ ಸೇವಾನಗರ, ಸೇವಾನಗರ ತಾಂಡಾ, ಈಶಾಪುರ ಇತರೆಡೆ ಪ್ರಚಾರ ನಡೆಸಿದರು. ಎಂ.ಪಿ. ರವೀಂದ್ರ ಪರ ತಾಯಿ ರುದ್ರಾಂಬ, ಸಹೋದರಿ ವೀಣಾ ಕಾನೇಹಳ್ಳಿ,
ಬಂಡ್ರಿ, ಬಂಡ್ರಿ ತಾಂಡಾ ವಿವಿಧೆಡೆ ಮತಯಾಚನೆ ಮಾಡಿದರು.

Advertisement

ಜೆಡಿಎಸ್‌ ಅಭ್ಯರ್ಥಿ ಎನ್‌. ಕೊಟ್ರೇಶ್‌ ರಾಗಿಮಸಲವಾಡ, ತುಂಬಿಗೆರೆ, ನಾಗಲಾಪುರ ತಾಂಡಾ, ಎಡೇಹಳ್ಳಿ, ಕಂಭತ್ತಹಳ್ಳಿಯಲ್ಲಿ ಪ್ರಚಾರ ನಡೆಸಿದರು. ವಿವಿಧ ಪಕ್ಷದ ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಜಿ. ಕರುಣಾಕರ ರೆಡ್ಡಿ ಹರಪನಹಳ್ಳಿ ಪಟ್ಟಣದ ಪಕ್ಷದ ಕಚೇರಿಯಲ್ಲಿ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿದರು. 

ಹೊನ್ನಾಳಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಡಿ.ಜಿ.ಶಾಂತನಗೌಡ, ದಾನಿಹಳ್ಳಿ, ಅರಬಗಟ್ಟೆ, ಮಾದನಬಾವಿ, ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬೆಳಗುತ್ತಿ ಹೋಬಳಿಯ ವಿವಿಧ ಗ್ರಾಮದಲ್ಲಿ ಪ್ರಚಾರ ನಡೆಸಿದರು. ಜೆಡಿಎಸ್‌-ಬಿಎಸ್ಪಿ ಅಭ್ಯರ್ಥಿ
ಸತ್ಯನಾರಾಯಣರಾವ್‌ ಕಠಾರೆ, ಹೊನ್ನಾಳಿ ಪಟ್ಟಣದಲ್ಲಿ ಪ್ರಚಾರ ಕೈಗೊಂಡರು. ಜಗಳೂರು ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಪಿ. ರಾಜೇಶ್‌, ತೋರಣಗಟ್ಟೆ ಸುತ್ತಮುತ್ತ ಗ್ರಾಮದಲ್ಲಿ ಪ್ರಚಾರ ನಡೆಸಿದರು. 

ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಎಸ್‌.ವಿ. ರಾಮಚಂದ್ರ, ಚಿಕ್ಕ ಉಜ್ಜನಿ, ಪಕ್ಷೇತರ ಅಭ್ಯರ್ಥಿ ಪುಷ್ಪಾ ಲಕ್ಷ್ಮಣಸ್ವಾಮಿ. ಅಣಬೂರು, ಕ್ಯಾಸೇನಹಳ್ಳಿಯಲ್ಲಿ ಪ್ರಚಾರ ನಡೆಸಿದರು. ಚನ್ನಗಿರಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ವಡ್ನಾಳ್‌ ರಾಜಣ್ಣ, ಸಂತೇಬೆನ್ನೂರು, ಉಪ್ಪನಾಯಕನಹಳ್ಳಿಯಲ್ಲಿ ರೋಡ್‌ ಶೋ ಮೂಲಕ ಮತ ಯಾಚನೆ ಮಾಡಿದರು. 

ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿ ಮಾಡಾಳ್‌ ವಿರುಪಾಕ್ಷಪ್ಪ ಸುಣಿಗೆರೆಯಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರನ್ನ ಪಕ್ಷಕ್ಕೆ ಬರಮಾಡಿಕೊಂಡರು. ಜೆಡಿಎಸ್‌ ಅಭ್ಯರ್ಥಿ ಹೊದಿಗೆರೆ ರಮೇಶ್‌, ಚನ್ನಗಿರಿ ಪಟ್ಟಣದ ದುರ್ಗಾಂಬಿಕಾ ಬಡಾವಣೆಯಲ್ಲಿ ಪ್ರಚಾರ ನಡೆಸಿ, ವಿವಿಧ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಜೆಡಿಯು ಅಭ್ಯರ್ಥಿ, ಮಾಜಿ ಶಾಸಕ ಮಹಿಮ ಪಟೇಲ್‌, ಚನ್ನಗಿರಿ ಪಟ್ಟಣದಲ್ಲಿ ಪ್ರಚಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next