Advertisement

ಬಿಜೆಪಿಗೆ ಟಾಟಾದಿಂದ ಶೇ.75 ದೇಣಿಗೆ

11:54 AM Nov 14, 2019 | Sriram |

ಮುಂಬಯಿ: ಬಿಜೆಪಿ ದೇಶದಲ್ಲಿ ಅತೀ ಹೆಚ್ಚು ದೇಣಿಗೆ ಪಡೆದುಕೊಂಡ ರಾಜಕೀಯ ಪಕ್ಷವಾಗಿದೆ. 2018-19ರ ಹಣಕಾಸು ವರ್ಷದಲ್ಲಿ ಪಕ್ಷ 356 ಕೋಟಿ ರೂ.ಗಳನ್ನು ಕೇವಲ ದೇಣಿಗೆ ಆಧಾರದಲ್ಲಿ ಸಂಗ್ರಹಿಸಿದೆ.

Advertisement

ಚುನಾವಣೆ ಆಯೋಗ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ಈ ಅಂಶ ಬಹಿರಂಗವಾಗಿದೆ. 2018 ಮತ್ತು 2019ರಲ್ಲಿ ಬಿಜೆಪಿ 473 ಕೋಟಿ ರೂ.ಗಳನ್ನು ಬೇರೆ ಬೇರೆ ಕಾರ್ಪೋರೇಟ್ ಸಂಸ್ಥೆಗಳಿಂದ ಸಂಗ್ರಹಿಸಿದೆ. ಇದರಲ್ಲಿ ಟಾಟಾ ಗ್ರೂಪ್ ಶೇ. 75ರಷ್ಟು ದೇಣಿಗೆಯನ್ನು ನೀಡಿದೆ. 2017 -18ರಲ್ಲಿ ಪಕ್ಷ ಕೇವಲ 167 ಕೋಟಿ ರೂ. ದೇಣಿಗೆಯನ್ನು ಸಂಗ್ರಹಿಸಿಕೊಂಡಿತ್ತು.

ಒಂದು ರಾಜಕೀಯ ಪಕ್ಷಗಳಿಗೆ ಕಾಪೋರೇಟ್ ಸಂಸ್ಥೆಗಳು ಹಣಕಾಸಿನ ನೆರವನ್ನು ನೀಡಲಾಗುತ್ತಿದೆ. ಈ ಪದ್ದತಿ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಇತ್ತೀಚಿನ ವರ್ಷದಲ್ಲಿ ಇದಕ್ಕೆ ಬಾಂಡ್‌ ಗಳನ್ನು ನಗದಿ ಪಡಿಸಲಾಗಿದ್ದು, ಯಾವ ಸಂಸ್ಥೆ ಎಷ್ಟು ಬಾಂಡ್ ಅನ್ನು ನೀಡಿದೆ ಎಂಬ ಮಾಹಿತಿ ಸುಲಭವಾಗಿ ಲಭಿಸುತ್ತಿದೆ. ಇದು ಚುನಾವಣೆಯಲ್ಲಿ ಕಪ್ಪು ಹಣದ ಬಳಕೆಯನ್ನು ತಡೆಗಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next