Advertisement
ಅನರ್ಹರ ಪೈಕಿ ಯಾರು ಪಕ್ಷ ಸೇರುತ್ತಾರೆ ಎಂಬುದಕ್ಕಿಂತ ಗೆಲುವು ಸಾಧಿಸುವ ಗುರಿಯೊಂದಿಗೆ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದ ಬಳಿಕ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಶುಕ್ರವಾರ ನಡೆದ ಮೊದಲ ಕೋರ್ ಕಮಿಟಿ ಸಭೆಯಲ್ಲಿ 17 ಕ್ಷೇತ್ರಗಳ ಉಪಚುನಾವಣೆ, ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳ ಚುನಾವಣೆ ತಯಾರಿ, ಪಕ್ಷ ಸಂಘಟನೆ, ಸದಸ್ಯತ್ವ ನೋಂದಣಿ ಬಗ್ಗೆ ಸಭೆಯಲ್ಲಿಸುದೀರ್ಘ ಚರ್ಚೆ ನಡೆಯಿತು.
Related Articles
ಈ ಚುನಾವಣೆಗೆ ಮತದಾರರ ನೋಂದಣಿ ಪ್ರಕ್ರಿಯೆ ಅಕ್ಟೋಬರ್ 1ರಿಂದ ಶುರುವಾಗಲಿದ್ದು, ಈ ಬಗ್ಗೆಯೂ ಚರ್ಚೆಯಾಯಿತು ಎಂದು ಹೇಳಿದರು.
Advertisement
ಸಮನ್ವಯ: ಸರ್ಕಾರ ಮತ್ತು ಪಕ್ಷ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಜನೋಪಯೋಗಿ, ಜನಪರ ವಿಚಾರಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರಿಗೆ ಸ್ಪಂದಿಸುವ ಕಾರ್ಯದಲ್ಲಿ ಸರ್ಕಾರ ಹಾಗೂ ಪಕ್ಷ ತೊಡಗಿಸಿಕೊಂಡಿದೆ. ನೆರೆಪೀಡಿತ ಪ್ರದೇಶದ ಜನರ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರಕ್ಕೆ ಪಕ್ಷದಿಂದಲೂ ಪೂರ್ಣ ಸಹಕಾರ ನೀಡಬೇಕು. ರಾಜ್ಯದ ಅಭಿವೃದಿಟಛಿ ದೃಷ್ಟಿಯಿಂದ ಸರ್ಕಾರ ಹಾಗೂ ಪಕ್ಷ ಒಟ್ಟಿಗೆ ಸಮನ್ವಯದಿಂದ ಮುಂದುವರಿಯಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ರಾಜ್ಯದಲ್ಲಿ ಪಕ್ಷ ಸಂಘಟನಾ ಪರ್ವದ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯದಲ್ಲಿ 87 ಲಕ್ಷ ಬಿಜೆಪಿ ಸದಸ್ಯರಿದ್ದರು. ಇತ್ತೀಚೆಗೆ ನಡೆದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ 27 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದಾರೆ. 50 ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ ಎಮದು ಹೇಳಿದರು.
ಒಂದು ಲಕ್ಷ ಸಕ್ರಿಯ ಸದಸ್ಯರ ನೋಂದಣಿ ಗುರಿ: ಪ್ರತಿ ಮೂರು ವರ್ಷಕ್ಕೊಮ್ಮೆ ಸಕ್ರಿಯ ಸದಸ್ಯತ್ವ ಅಭಿಯಾನ ನಡೆಯಲಿದೆ. ಅದರಂತೆಸೆ.8ರಂದು ರಾಜ್ಯಾದ್ಯಂತ ಸಕ್ರಿಯ ಸದಸ್ಯರ ನೋಂದಣಿ ಅಭಿಯಾನ ನಡೆಯಲಿದ್ದು, ಈ ಕುರಿತು ಚರ್ಚಿಸಲಾಯಿತು. ಪಕ್ಷದಲ್ಲ ಕಾರ್ಯಕರ್ತರು ಸಕ್ರಿಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರತಿ ಮತಗಟ್ಟೆಗೆ ಇಬ್ಬರಂತೆ ರಾಜ್ಯಾದ್ಯಂತ ಒಂದು ಲಕ್ಷ ಸಕ್ರಿಯ ಸದಸ್ಯರನ್ನು ನೋಂದಣಿ ಮಾಡುವ ಗುರಿ ಇದೆ ಎಂದು ಹೇಳಿದರು. ಈ ಪ್ರಕ್ರಿಯೆ ಬಳಿಕ ಬೂತ್ ಸಮಿತಿ, ಮಂಡಲ ಸಮಿತಿ ರಚನೆ ಪ್ರಕ್ರಿಯೆ ಆರಂಭವಾಗಲಿದೆ. ಇದಕ್ಕೆ ಪೂರ್ವಭಾವಿಯಾಗಿ ಸೆ.9 ಹಾಗೂ 10ರಂದು ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲ ಪ್ರಧಾನ ಕಾರ್ಯದರ್ಶಿಗಳು ರಾಜ್ಯಾದ್ಯಂತ ಪ್ರವಾಸ ನಡೆಸಿ ಸಕ್ರಿಯ ಸದಸ್ಯತ್ವ ವರದಿಗಳ ಪರಾಮರ್ಶೆ ನಡೆಸಲಿದ್ದಾರೆ. ಈ ಕುರಿತೂ ಮಾತುಕತೆ ನಡೆಯಿತು ಎಂದು ತಿಳಿಸಿದರು.