Advertisement

BJP Protest: ಸಿದ್ದರಾಮಯ್ಯರದ್ದು ಲೂಟಿಕೋರ ಸರಕಾರ: ನಳಿನ್‌ ಕುಮಾರ್‌ ಕಟೀಲು

12:58 AM Jun 29, 2024 | Team Udayavani |

ಮಂಗಳೂರು: ಸಿದ್ದರಾಮಯ್ಯ ಅವರದು ಲೂಟಿಕೋರ ಸರಕಾರ. ಒಂದು ವರ್ಷದಲ್ಲಿ ಕಾಂಗ್ರೆಸ್‌ ಸರಕಾರ ವಾಲ್ಮೀಕಿ ಸಮುದಾಯ ಹಾಗೂ ಜನರ ಹಣ ಲೂಟಿ ಮಾಡಿದೆ. ಎಂದು ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ವಾಗ್ಧಾಳಿ ನಡೆಸಿದರು.

Advertisement

ವಾಲ್ಮೀಕಿ ನಿಗಮದ 187 ಕೋ.ರೂ. ಅನ್ನು ಅಕ್ರಮವಾಗಿ ವರ್ಗಾಯಿ ಸಲಾಗಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಬಿಜೆಪಿಯಿಂದ ಕ್ಲಾಕ್‌ಟವರ್‌ ಬಳಿ ನಡೆದ ಪ್ರತಿಭಟನೆ ಹಾಗೂ ಡಿಸಿ ಕಚೇರಿಗೆ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಸರಕಾರ ಶೇ.80 ಕಮಿಷನ್‌ ಸರಕಾರ ಎಂದು ಟೀಕಿಸಿದರು.

ಬೆಲೆ ಏರಿಕೆಯೇ ಕಾಂಗ್ರೆಸ್‌ ಸರ ಕಾರದ ಸಾಧನೆ ಯಾಗಿದ್ದು, ಈಗ ವಾಲ್ಮೀಕಿನಿಗಮದ ಹಣವನ್ನು ಪೂರ್ಣ ನುಂಗಿ
ನೀರು ಕುಡಿದಿದೆ. ಸರಕಾರದ ವಿರುದ್ಧ ಒಂದರ ಮೇಲೊಂದರಂತೆ ಪ್ರಕರಣ ಗಳು ಅಂಟಿಕೊಳ್ಳುತ್ತಿದ್ದು,ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾ ಮಯ್ಯ ರಾಜೀನಾಮೆ ನೀಡಬೇಕು ಎಂದು ಶಾಸಕ ವೇದವ್ಯಾಸ್‌ ಕಾಮತ್‌ ಆಗ್ರಹಿಸಿದ್ದಾರೆ.

ಇಲಾಖೆಯಲ್ಲಿ ಇಷ್ಟೊಂದು ದೊಡ್ಡ ಭ್ರಷ್ಟಾಚಾರ ನಡೆದು ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಿಎಂ ಏನೂ ಆಗಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ನಾಚಿಕೆಗೇಡು. ಬಡ ಜನರಿಗೆ 2 ಸಾವಿರ ರೂ. ನೀಡಿ ಅವರಿಂದ 10 ಸಾವಿರ ರೂ. ದೋಚುತ್ತಿದ್ದಾರೆ ಎಂದರು.

Advertisement

ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಸರಕಾರ ಹೈಕಮಾಂಡ್‌ನ‌ ಎಟಿಎಂ ಎಂದು ಹೇಳಿದರು.

ಇದು ಗೋಲ್‌ ಮಾಲ್‌ ಸರಕಾರ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಟೀಕಿಸಿದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಎಸ್‌ಟಿ ಮೋರ್ಚಾದ ಅಧ್ಯಕ್ಷ ಹರೀಶ್‌ ಬಿಜತ್ರೆ, ಎಸ್‌ಸಿ ಮೋರ್ಚಾದ ಅಧ್ಯಕ್ಷ ಜಗನ್ನಾಥ್‌ ಬೆಳ್ವಾಯಿ, ಉಪಮೇಯರ್‌ ಸುನೀತಾ, ಪ್ರಮುಖರಾದ ಮೋನಪ್ಪ ಭಂಡಾರಿ, ಹರಿಕೃಷ್ಣ ಬಂಟ್ವಾಳ್‌, ಸಂತೋಷ್‌ ಕುಮಾರ್‌ ಶೆಟ್ಟಿ ಬೋಳಿಯಾರ್‌, ರವೀಂದ್ರ ಶೆಟ್ಟಿ, ಯತೀಶ್‌, ಕಿಶೋರ್‌ ಕೊಟ್ಯಾಡಿ, ನಿತಿನ್‌ ಕುಮಾರ್‌, ಸುಲೋಚನ ಭಟ್‌, ದಿನೇಶ್‌ ಅಮೂrರು ಮತ್ತಿತರರು ಭಾಗವಹಿಸಿದ್ದರು.

ತಾಕತ್ತಿದ್ದರೆ ವಕ್ಫ್ ಬೋರ್ಡ್‌ ಹಣ ವರ್ಗಾಯಿಸಲಿ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ವಾಲ್ಮೀಕಿ ನಿಗಮದ ಹಣವನ್ನು ಬೇನಾಮಿಗೆ ವರ್ಗಾಯಿಸಲಾಗಿದೆ. ಸಿದ್ದರಾಮಯ್ಯಗೆ ತಾಕತ್ತಿದ್ದರೆ ವಕ್ಫ್ ಬೋರ್ಡ್‌ ಹಾಗೂ ಕುರುಬ ನಿಗಮದ ಹಣ ವರ್ಗಾಯಿಸಲಿ ಎಂದು ಸವಾಲು ಹಾಕಿದರು. ಸಮಾನ ನ್ಯಾಯ ಕೊಡುವುದಾಗಿ ಸಿಎಂ ಬಿಟ್ಟಿ ಭಾಗ್ಯಕ್ಕೆ ಎಸ್ಸಿ ನಿಗಮದ ಹಣ ವರ್ಗಾಯಿಸಲಾಗಿದೆ. ಈಗ ಎಸ್ಟಿ ನಿಗಮದ ಹಣ ವರ್ಗಾಯಿಸಿದ್ದು, ವಾಪಸ್‌ ತರಬೇಕು ಎಂದು ಆಗ್ರಹಿಸಿದರು.

ಮಾತಿನ ಚಕಮಕಿ; ವಾಗ್ವಾದ
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತೆಯರನ್ನು ತಡೆದು ವಶಕ್ಕೆ ಪಡೆಯುವ ವೇಳೆ ಪೊಲೀಸ್‌ ಮಹಿಳಾ ಸಿಬಂದಿ ಸೀರೆ ಎಳೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಪೊರೇಟರ್‌ ರೂಪಶ್ರೀ ಪೂಜಾರಿ, ಪೂರ್ಣಿಮಾ ಹಾಗೂ ಇತರ ಕಾರ್ಯಕರ್ತೆಯರು ರಸ್ತೆಯಲ್ಲಿ ಕುಳಿತು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು. ಬಳಿಕ ಹಿರಿಯ ಮಹಿಳಾ ಅಧಿಕಾರಿಗಳು ಅವರ ಮನವೊಲಿಕೆ ಮಾಡಿದರು.

ಮುತ್ತಿಗೆಗೆ ಯತ್ನ; ಪೊಲೀಸ್‌ ವಶಕ್ಕೆ
ಕ್ಲಾಕ್‌ ಟವರ್‌ ಬಳಿ ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಪ್ರತಿಭಟನಕಾರರು ಮುಂದಾದರು. ಕ್ಲಾಕ್‌
ಟವರ್‌ ನಿಂದ ಮೆರವಣಿಗೆ ಆರಂಭಿ ಸಿದ ವೇಳೆಯೇ ಪೊಲೀಸರು ಎರಡೂ ಕಡೆ ಬ್ಯಾರಿಕೇಡ್‌ಗಳನ್ನು ಇಟ್ಟು ಪ್ರತಿಭಟನೆ ನಿರತರನ್ನು ತಡೆದರು. ಆದರೆ ಬ್ಯಾರಿಕೇಡ್‌ ತಳ್ಳಿ ಮುನ್ನುಗಿದರು. ಈ ವೇಳೆ ನಾಯ ಕರು ಹಾಗೂ ಕಾರ್ಯಕರ್ತರನ್ನು ಪೊಲೀ ಸರು ವಶಕ್ಕೆ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next