Advertisement

ಗ್ರಾಪಂ ಚುನಾವಣೆಗೆ ಬಿಜೆಪಿ ಸಿದ್ಧತೆ

06:44 PM Nov 27, 2020 | Suhan S |

ಚಿತ್ರದುರ್ಗ: ಪಂಚಾಯಿತಿಯಿಂದಪಾರ್ಲಿಮೆಂಟ್‌ವರೆಗೂ ಪಕ್ಷ ಅಧಿಕಾರದಲ್ಲಿರಬೇಕು ಎಂದು ವರಿಷ್ಠರು ತೀರ್ಮಾನಿಸಿದ್ದು, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಕಾರ್ಯಕರ್ತರ ಚುನಾವಣೆಯೆಂದು ಗಂಭೀರವಾಗಿಪರಿಗಣಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ತಿಳಿಸಿದರು.

Advertisement

ಪಕ್ಷದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಗ್ರಾಮ ಪಂಚಾಯಿತಿಚುನಾವಣೆ ಸಾಮಾನ್ಯ ಕಾರ್ಯಕರ್ತರ ಚುನಾವಣೆಯಾಗಿರುವುದರಿಂದ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಎರಡು ಕಡೆ ಸ್ವರಾಜ್ಯ ಸಮಾವೇಶ ನಡೆಸಲಾಗುವುದು. ಅದರಂತೆ ನ. 28 ರಂದು ಬೆಳಿಗ್ಗೆ 11ಕ್ಕೆ ಹೊಳಲ್ಕೆರೆಯ ಸ್ನೇಹ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.

ಅದೇ ದಿನ ಮಧ್ಯಾಹ್ನ ಚಳ್ಳಕೆರೆಯಲ್ಲಿಯೂ ಸ್ವರಾಜ್ಯ ಸಮಾವೇಶ ನಡೆಯಲಿದೆ. ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು, ವಿಧಾನ ಪರಿಷತ್‌ ಸದಸ್ಯರು, ಸಚಿವ ಆನಂದ್‌ ಸಿಂಗ್‌,ಸಂಸದರಾದ ಪ್ರತಾಪ್‌ ಸಿಂಹ, ಕರಡಿ ಸಂಗಣ್ಣ,ಸ್ವರಾಜ್ಯ ಸಮಾವೇಶದ ಸಂಚಾಲಕ ಕೆ.ಎಸ್‌.ನವೀನ್‌ ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಸಮಾವೇಶಕ್ಕೆ ಚಾಲನೆ ನೀಡಿದ್ದು, ಆರು ತಂಡಗಳು ಸಮಾವೇಶದನೇತೃತ್ವ ವಹಿಸಲಿವೆ. ಮಂಡಲ ಪದಾಧಿಕಾರಿಗಳು, ಮೋರ್ಚ ಶಕ್ತಿ ಕೇಂದ್ರದ ಪದಾಧಿಕಾರಿಗಳು, ಗ್ರಾಪಂ ಪ್ರಮುಖರು, ಜಿ.ಪಂ. ಕ್ಷೇತ್ರದ ಪ್ರಮುಖರು, ಚಿತ್ರದುರ್ಗ ಗ್ರಾಮಾಂತರ ಮಂಡಲ ಪದಾಧಿಕಾರಿಗಳು ಹಾಗೂ ಎಲ್ಲಾ ಸ್ತರದ ಚುನಾಯಿತ ಪ್ರತಿನಿಧಿಗಳು ಸ್ವರಾಜ್ಯ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. 350 ರಿಂದ 400 ಮಂದಿ ಆಯ್ದ ಕಾರ್ಯಕರ್ತರು, ಪದಾಧಿಕಾರಿಗಳನ್ನು ಗುರುತಿಸಿ ಸಮಾವೇಶಕ್ಕೆ ಕರೆಯಲಾಗಿದೆ. ಜಿಲ್ಲೆಯ 189 ಗ್ರಾಪಂಗಳನ್ನು ಬಿಜೆಪಿ ಗೆಲ್ಲಬೇಕಾಗಿರುವುದರಿಂದ ಪಂಚಸೂತ್ರ, ಪಂಚರತ್ನ ಸಮಿತಿ ರಚಿಸಲಾಗಿದೆ. ಪಂಚರತ್ನದಲ್ಲಿ ಪ್ರತಿ ಬೂತ್‌ನಲ್ಲಿ ಐದು ಮಂದಿ ನೇಮಕ ಹಾಗೂ ಪಂಚಸೂತ್ರದಡಿ ಜಿಲ್ಲೆಯ ಮಂಡಲ ಸ್ತರದಲ್ಲಿ ವಾರ್‌ರೂಂ, ಕಾಲ್‌ಸೆಂಟರ್‌ಗಳನ್ನು ತೆರೆಯಲಾಗುವುದು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್‌ ಸಿದ್ದಾಪುರ, ಉಪಾಧ್ಯಕ್ಷ ಸಂಪತ್‌ ಕುಮಾರ್‌, ವಕ್ತಾರ ನಾಗರಾಜ್‌ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್‌ ಸುದ್ದಿಗೋಷ್ಠಿಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next