Advertisement

ಜೂ.1ಕ್ಕೆ ಬಿಜೆಪಿ ಶಕ್ತಿ ಪ್ರದರ್ಶನ: ವಾಲ್ಮೀಕಿ

03:25 PM May 29, 2017 | Team Udayavani |

ವಾಡಿ: ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜೂ.1 ರಂದು ಚಿತ್ತಾಪುರಕ್ಕೆ ಆಗಮಿಸಲಿದ್ದು, ಅಂದು ತಾಲೂಕಿನಲ್ಲಿ ಬಿಜೆಪಿ ಶಕ್ತಿಪ್ರದರ್ಶನ ಮಾಡಲಿದೆ ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಹೇಳಿದರು. 

Advertisement

ಬಿಎಸ್‌ವೈ ಆಗಮನದ ಹಿನ್ನೆಲೆಯಲ್ಲಿ ಪಟ್ಟಣದ ಸೂರ್ಯ ವಸತಿಗೃಹ ಆವರಣದಲ್ಲಿ ಕರೆಯಲಾಗಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿಯ ಶಕ್ತಿಯಾಗಿ ಹೊರಹೊಮ್ಮಿರುವ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.

ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷದ ಸಂಘಟನೆ ಅಗತ್ಯವಾಗಿದ್ದು, ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಲು ಕಾರ್ಯಕರ್ತರು ಸೈನಿಕರಂತೆ ಸನ್ನದ್ಧರಾಗಬೇಕು ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಆಡಳಿತ ಸಂಪೂರ್ಣ ಜನವಿರೋಧಿ ಆಗಿದ್ದರಿಂದ ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಕೈಗೊಂಡು ಅಭಿವೃದ್ಧಿ ಕಾರ್ಯಗಳು ನಮಗೆ ಆತ್ಮಸ್ಥೆರ್ಯ ಹೆಚ್ಚಿಸಿವೆ. 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಬಿಜೆಪಿ ಹಿರಿಯ ಮುಖಂಡ ಬಸವರಾಜ ಪಂಚಾಳ ಮಾತನಾಡಿ, ಚಿತ್ತಾಪುರಕ್ಕೆ ಯಡಿಯೂರಪ್ಪ ಬರುತ್ತಿರುವುದು ನಮ್ಮೆಲ್ಲರಿಗೆ ಆನೆಬಲ ಬಂದಂತಾಗಿದೆ. ಪಕ್ಷದ ಕಾರ್ಯಕರ್ತರು ಹುಮ್ಮಸ್ಸಿನಿಂದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಿದೆ. ಅದಕ್ಕಾಗಿ ಶ್ರಮಿಸಲು ಮುಂದಾಗಬೇಕು ಎಂದರು. 

Advertisement

ಬಿಜೆಪಿ ತಾಲೂಕು ಪ್ರದಾನ ಕಾರ್ಯದರ್ಶಿ ಶರಣು ಜ್ಯೋತಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆ ಸದಸ್ಯರಾದ ಭೀಮಶಾ ಜಿರೋಳ್ಳಿ, ರಾಜೇಶ ಅಗರವಾಲ, ಪ್ರಕಾಶ ನಾಯಕ, ಮುಖಂಡರಾದ ರಾಮಚಂದ್ರರೆಡ್ಡಿ, ಪರುತಪ್ಪ ಕರದಳ್ಳಿ, ಯಮನಪ್ಪ ನವಲಹಳ್ಳಿ, ರಮೇಶ ಕಾರಬಾರಿ, ಶಿವುಕುಮಾರ ಹೂಗಾರ, 

-ಮಹಮದ ಮೌಲಾ, ವೀರಣ್ಣ ಯಾರಿ, ಮಲ್ಲಯ್ಯಸ್ವಾಮಿ ಮಠಪತಿ, ವಿಠuಲ ನಾಯಕ, ಶ್ರವಣಕುಮಾರ ಮೌಸಲಗಿ, ಆನಂದ ಇಂಗಳಗಿ, ರಿಚರ್ಡ್‌ ಮರೆಡ್ಡಿ, ಬಸವರಾಜ ಕೀರಣಗಿ, ದೌಲತ್ತರಾವ್‌ ಚಿತ್ತಾಪುರಕರ, ಅಂಬ್ರಿàಶ ಮಾಳಗಿ, ಜಗತ್‌ ಸಿಂಗ್‌ ರಾಠೊಡ, ವಿಶಾಲ ನಿಂಬರ್ಗಾ ಮತ್ತಿತರರು ಪಾಲ್ಗೊಂಡಿದ್ದರು. 

ಪುರಸಭೆ ಚುನಾವಣೆಯಲ್ಲಿ ಪಕ್ಷದ ಮುಖಂಡರ ವಿರುದ್ಧ ಅಸಮಾದಾನ ವ್ಯಕ್ತಪಡಿಸಿ ರಾಜೀನಾಮೆಗೆ ಮುಂದಾಗಿದ್ದ ಸ್ಥಳೀಯ ಶಕ್ತಿ ಕೇಂದ್ರದ ಅಧ್ಯಕ್ಷ ಹರಿ ಗಲಾಂಡೆ, ಪ್ರಧಾನ ಕಾರ್ಯದರ್ಶಿ ರಾಜೇಶ ಕಾಂಬಳೆ ಅನುಪಸ್ಥಿತಿ ಚರ್ಚೆಗೆ ಗ್ರಾಸವಾಯಿತು.  

Advertisement

Udayavani is now on Telegram. Click here to join our channel and stay updated with the latest news.

Next