ಬೆಂಗಳೂರು: ಈಶಾನ್ಯ ರಾಜ್ಯಗಳ ಪೈಕಿ ಅಸ್ಸಾಂ, ಮಣಿಪುರ, ಅರುಣಾಚಲ ಪ್ರದೇಶದಲ್ಲಿ ಜಯಭೇರಿ ಭಾರಿಸಿದ್ದ ಬಿಜೆಪಿ ಇದೀಗ ತ್ರಿಪುರ ಮತ್ತು ನಾಗಾಲ್ಯಾಂಡ್ ನಲ್ಲಿ ಪ್ರಭುತ್ವ ಸ್ಥಾಪಿಸಿರುವುದು ಕರ್ನಾಟಕದ ಬಿಜೆಪಿ ಮಟ್ಟಿಗಂತೂ ಭರ್ಜರಿ ಖುಷಿ ತಂದುಕೊಟ್ಟಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಹೋರಾಟದಲ್ಲಿರುವ ಬಿಜೆಪಿಗೆ ತ್ರಿಪುರ ಹಾಗೂ ನಾಗಾಲ್ಯಾಂಡ್ ಜಯ ಹುಮ್ಮಸ್ಸಿನ ಜತೆಗೆ ಹುರುಪು ತಂದುಕೊಟ್ಟು”ಟಾರ್ಗೆಟ್ ಕರ್ನಾಟಕ’ ಗುರಿ ಸಾಧಿಸಲು ಯಡಿಯೂರಪ್ಪ ಅನಂತ್‌ಕುಮಾರ್ ಸೇರಿದಂತೆ ರಾಜ್ಯ ನಾಯಕರು ಆತ್ಮವಿಶ್ವಾಸದೊಂದಿಗೆ ಅಖಾಡಕ್ಕಿಳಿಯಲು ಆನೆಬಲ ಬಂದಂತಾಗಿದೆ.
ಎಡಪಕ್ಷಗಳ ವಶದಲ್ಲಿದ್ಧ ಎಲ್ಲದಕ್ಕಿಂತ ಹೆಚ್ಚಾಗಿ 2013ರ ಚುನಾವಣೆಯಲ್ಲಿ ಶೂನ್ಯ ಸಂಪಾದ ನೆ ಮಾಡಿದ್ಧ ತ್ರಿಪುರದಲ್ಲಿ 44 ಸ್ಥಾನ ಗಳಿಸುವಷ್ಟು ಸಾಮರ್ಥ್ಯ ವೃ ದ್ಧಿಸಿಕೊಂಡು ಅಧಿಕಾರ ಹಿಡಿದಿರು ವುದು ಬಿಜೆಪಿಗೆ ದೊಡ್ಡ ಶಕ್ತಿ ಬಂದಂತಾಗಿದೆ. ಶ್ರಮ ಹಾಕಿದರೆ ನರೇಂದ್ರ ಮೋದಿ- ಅಮಿತ್ ಶಾ – ಯೋಗಿ ಆದಿತ್ಯನಾಥ್ ಜನಪ್ರಿಯತೆಯಡಿ ಕರ್ನಾಟಕದಲ್ಲಿಯೂ ಅಧಿಕಾರ ಹಿಡಿಯುವುದು ಕಷ್ಟವಲ್ಲ ಎಂಬ ವಿಶ್ವಾಸ ರಾಜ್ಯ ನಾಯಕರಿಗೆ ಬಂದಿರುವುದಂತೂ ಹೌದು.
60 ಸಂಖ್ಯಾಬಲದ ತ್ರಿಪುರದಲ್ಲಿ 44 ಹಾಗೂ ನಾಗಾಲ್ಯಾಂಡ್‌ನಲ್ಲಿ 28 ಸ್ಥಾನ ಗಳಿಸಿರುವ ಬಿಜೆಪಿಯ ಸಾಧನೆ ಕಡಿಮೆಯೇನಲ್ಲ. ಈಶಾನ್ಯ ರಾಜ್ಯಗಳು ಸುದೀರ್ಘ ಕಾಲ ಕಾಂಗ್ರೆಸ್ ಹಾಗೂ ಎಡಪಕ್ಷಗಳ ಆಡಳಿತದಲ್ಲಿದ್ದ ರಾಜ್ಯಗಳು. ಅಂತಹ ರಾಜ್ಯಗಳಲ್ಲೇ ಬಿಜೆಪಿ ಬಾವುಟ ಹಾರಿದೆ ಎಂದ ಮೇಲೆ ಕರ್ನಾಟಕದಲ್ಲಿ ಯಾಕೆ ಸಾಧ್ಯವಿಲ್ಲ ಎಂಬ ಪ್ರಶ್ನೆಯೂ ಇದೆ. ನರೇಂದ್ರಮೋ -ಅಮಿತ್ ಶಾ- ಯೋಗಿ ಆದಿತ್ಯನಾಥ್ ಕಾಲಿಟ್ಟ ಕಡೆ ಜಯ ಖಚಿತ ಎಂಬ ಸಂದೇಶವೂ ಈ ಚುನಾವಣೆಯಿಂ ದ ರವಾನೆಯಾಗಿದ್ದು, ತ್ರಿಮೂರ್ತಿ ಜೋಡಿಯ ಮುಂದಿನ ಚಿತ್ತ ಕರ್ನಾಟಕ ಎಂಬುದು ಸತ್ಯ.
ಮತ್ತೂಂದೆಡೆ ಕಾಂಗ್ರೆಸ್ ಎರಡೂ ರಾಜ್ಯಗಳಲ್ಲಿ ಶೂನ್ಯ ಸಂಪಾದನೆ ಮಾಡಿರುವುದು ಕಾಂಗ್ರೆಸ್‌ನ ಜನಪ್ರಿಯತೆ ಇಳಿಯುತ್ತಿರುವುದರ ಸಂಕೇತ. ಮೇಘಾಲ ಯ ದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ ಎಂದು ಹೇಳಿ ಸಮಾಧಾನಪಟ್ಟುಕೊಳ್ಳಬಹುದಾದರೂ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳ ಸಂಖ್ಯೆ ಕಡಿಮೆಯಾಗುತ್ತಿರುವುದಂತೂ ನಿಜ. ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಫಲಿತಾಂಶ ರಾಜ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರಾದರೂ ಒಳಗೊಳಗೆ ಅಳುಕು ಇರುವುದಂತೂ ಹೌದು.
ಪ್ರತಿ ರಾಜ್ಯದಲ್ಲೂ ಜನಾಭಿಪ್ರಾಯ ಬೇರೆಬೇರೆಯಾಗಿರುತ್ತವೆ. ಒಂದು ರಾಜ್ಯದ ಚುನಾವಣಾ ಫಲಿತಾಂಶವನ್ನು ಇನ್ನೊಂದು
ರಾಜ್ಯದೊಂದಿಗೆ ಹೋಲಿಸಲು ಸಾಧ್ಯವಿಲ್ಲ. ತ್ರಿಪುರ ಹಾಗೂ ನಾಗಾಲ್ಯಾಂಡ್‌ನಲ್ಲಿ ಗೆಲ್ಲುತ್ತೇವೆ ಎಂಬ ಭ್ರಮೆ ನಮಗಿರಲಿಲ್ಲ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಈಶಾನ್ಯ ರಾಜ್ಯಗಳ ಫಲಿತಾಂಶದ ನಂತರ ಕರ್ನಾಟಕದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಇನ್ನಷ್ಟು ಹುರುಪಿನಿಂದ ಕಾರ್ಯನಿರ್ವಹಿಸಲು ಪ್ರೇರಣೆ ಸಿಕ್ಕಿದೆ.
– ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ