ಎ.2ರಂದು ನಿವೃತ್ತಿಯಾಗಲಿರುವ ರಾಜ್ಯ ಸಭೆಯ 56 ಸಂಸದರ ಸ್ಥಾನಗಳಿಗೆ ಫೆ.27ರಂದು ಚುನಾವಣೆ ನಡೆಸುವ ಬಗ್ಗೆ ಚುನಾವಣ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಸರಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತ ಪ್ರಾಪ್ತಿ ಯಾದೀತೇ ಎಂಬ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ.
Advertisement
ಬಿಹಾರದಲ್ಲಿ ಜೆಡಿಯು ಎನ್‌ಡಿಎ ತೆಕ್ಕೆಗೆ ಸೇರ್ಪಡೆ ಆದ ಬಳಿಕ ಆ ಪಕ್ಷದ 5 ಸದಸ್ಯರ ಬೆಂಬಲ ಸರಕಾರಕ್ಕೆ ಹೆಚ್ಚುವರಿಯಾಗಿ ಸಿಕ್ಕಿದಂತಾ ಗಲಿದೆ. ಇದು ತಮಿಳುನಾಡಿನ ಎಐಎಡಿಎಂಕೆಯ 3 ಮಂದಿ ರಾಜ್ಯಸಭೆಯ ಸದಸ್ಯರು ಇಲ್ಲದೇ ಇರುವ ನಷ್ಟವನ್ನು ಭರ್ತಿ ಮಾಡಿಕೊಡಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಎನ್‌ಡಿಎಗೆ 114 ಸದಸ್ಯರ ಬೆಂಬಲ ಇದೆ. ಈ ಪೈಕಿ ಬಿಜೆಪಿಗೆ ತನ್ನದೇ ಆಗಿರುವ 93 ಸಂಸದರ ಬೆಂಬಲ ಇದೆ.
Related Articles
Advertisement
ಹಿಮಾಚಲ ಪ್ರದೇಶ, ತೆಲಂಗಾಣ, ಕರ್ನಾಟಕ ಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಆ ಪಕ್ಷಕ್ಕೆ ರಾಜ್ಯಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳು ಗೆಲ್ಲುವ ಸಾಧ್ಯತೆ ಅಧಿಕವಾಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸದ್ಯ ಹಿಮಾಚಲ ಪ್ರದೇಶ ದಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಹೀಗಾಗಿ ಅವರು ಬೇರೆ ರಾಜ್ಯದಿಂದ ಸ್ಪರ್ಧಿಸಬೇ ಕಾಗಬಹುದು.
ಈ ವರ್ಷದ ಜುಲೈಯಲ್ಲಿ ನಾಮನಿರ್ದೇಶನ ಗೊಂಡ ಬಿಜೆಪಿಯ ಮಹೇಶ್ ಜೇಠ್ಮಲಾನಿ, ಸೋನಲ್ ಮಾನ್ ಸಿಂಗ್, ರಾಮ್ ಶಕಾಲ್, ರಾಕೇಶ್ ಸಿನ್ಹಾ ನಿವೃತ್ತಿಯಾಗಲಿದ್ದಾರೆ.
ಯಾವ ರಾಜ್ಯಗಳಲ್ಲಿ ಎಷ್ಟು?ಉತ್ತರ ಪ್ರದೇಶ-10, ಮಹಾರಾಷ್ಟ್ರ ಮತ್ತು ಬಿಹಾರ ತಲಾ 6, ಮಧ್ಯಪ್ರದೇಶ ಮತ್ತು ಪಶ್ಚಿಮ ಬಂಗಾಲ- ತಲಾ 5, ಗುಜರಾತ್ ಮತ್ತು ಕರ್ನಾಟಕ- ತಲಾ 4, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಮತ್ತು ಒಡಿಶಾ- ತಲಾ 3, ಉತ್ತರಾಖಂಡ, ಹರಿಯಾಣ, ಛತ್ತೀಸ್‌ಗಢ- ತಲಾ 1 ನಿವೃತ್ತರಾಗಲಿರುವ ಪ್ರಮುಖರು
ಸುಶೀಲ್ ಮೋದಿ, ಅನಿಲ್ ಪ್ರಸಾದ್ ಹೆಗ್ಡೆ (ಬಿಹಾರ), ಜೆ.ಪಿ.ನಡ್ಡಾ, ಅಭಿಷೇಕ್ ಮನು ಸಿಂ Ì (ಕಾಂಗ್ರೆಸ್)