Advertisement

ಪಶ್ಚಿಮ ಬಂಗಾಳ ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿಗೆ ಕೋವಿಡ್‌ ಸೋಂಕು ದೃಢ

09:01 PM Jul 03, 2020 | Sriram |

ಕೊಲ್ಕತ್ತ: ಪಶ್ಚಿಮ ಬಂಗಾಳ ಬಿಜೆಪಿ ಸಂಸದೆ ಲಾಕೆಟ್‌ ಚಟರ್ಜಿಗೆ ಕೋವಿಡ್‌ ಸೋಂಕು ದೃಢವಾಗಿದೆ. ಈ ಕುರಿತು ಅವರೇ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದ್ದಾರೆ.

Advertisement

ನನಗೆ ಶುಕ್ರವಾರ ಬೆಳಗ್ಗೆ ಕೋವಿಡ್‌ ಸೋಂಕು ದೃಢವಾಗಿದೆ. ನಾನು ಒಂದು ವಾರದಿಂದ ಪ್ರತ್ಯೇಕವಾಗಿ ಇದ್ದೇನೆ.

ಮುಂದಿನ ಬೆಳವಣಿಗೆಯನ್ನು ನಿಮಗೆ ತಿಳಿಸುತ್ತೇನೆ. ಸದ್ಯ ಯಾವುದೇ ಆತಂಕವಿಲ್ಲ ಎಂದು ಹೇಳಿದ್ದಾರೆ.

ಲಾಕೆಟ್‌ ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಪಕ್ಷ ಬಲಪಡಿಸುವುದರಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next