Advertisement

ಕೇಂದ್ರ ಸಚಿವ ಬಂಡಾರುಗೆ ಪುತ್ರ ವಿಯೋಗ; 21ರ ಹರೆಯದಲ್ಲೇ ಹೃದಯಾಘಾತ !

12:30 PM May 23, 2018 | |

ಸಿಕಂದರಾಬಾದ್‌: ಕೇಂದ್ರ ಸಚಿವ, ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯ ಅವರ 21 ರ ಹರೆಯದ ಪುತ್ರ ಬಂಡಾರು ವೈಷ್ಣವ್‌ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 

Advertisement

3 ನೇ ವರ್ಷದ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದ  ವೈಷ್ಣವ್‌ ಅವರು ಮಂಗಳವಾರ ರಾತ್ರಿ ಎದೆ ನೋವಿನ ಬಗ್ಗೆ ಹೇಳಿಕೊಂಡಿದ್ದು , ಕೂಡಲೆ ಅವರನ್ನು ಸಿಕಂದರಾಬಾದ್‌ನ ಆಸ್ಪತ್ರೆ ದಾಖಲಿಸಲಾಯಿತು. ಆದರೆ 12.30 ರ ವೇಳೆಗೆ ಅವರು ಕೊನೆಯುಸಿರೆಳಿದಿರುವುದು ಧೃಡವಾಯಿತು.

ವೈಷ್ಣವ್‌ ಅವರು ನಿಧನ ಹೊಂದಿದ ವಿಚಾರ ತಿಳಿದು ನೂರಾರು ಬಿಜೆಪಿ ನಾಯಕರು ಆಸ್ಪತ್ರೆಗೆ ದೌಡಾಯಿಸಿದ್ದು, ಬಂಡಾರು ಅವರು ಕುಟುಂಬ ಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಮಗನನ್ನು ಕಳೆದುಕೊಂಡು ಸಚಿವ ಬಂಡಾರು ಮತ್ತು ಕುಟುಂಬದವರು ತೀವ್ರ ದುಃಖೀತರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next