Advertisement

D. K. Shivakumar ಕಂಪನಿಯಿಂದ ‘ಆಪರೇಷನ್ ಕಮಲ’ ನಾಟಕ: ರಮೇಶ್ ಜಾರಕಿಹೊಳಿ

05:21 PM Oct 30, 2023 | Team Udayavani |

ಬೆಂಗಳೂರು: ಸರಕಾರವನ್ನು ಉರುಳಿಸಲು ‘ಆಪರೇಷನ್ ಕಮಲ’ ನಡೆಸುತ್ತಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ  ತಳ್ಳಿಹಾಕಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ”‘ಆಪರೇಷನ್ ಕಮಲ’ದ ಬಗ್ಗೆ ಬಿಜೆಪಿ ಎಂದಿಗೂ ಮಾತನಾಡಿಲ್ಲ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಾಟಕ ಕಂಪನಿ 50 ಕೋಟಿ ರೂ. ಆಮಿಷ ನೀಡಿದ ಬಗ್ಗೆ ಮಾತನಾಡುತ್ತಿದೆ.

“2019 ರಲ್ಲಿ ಅಗತ್ಯವಿತ್ತು, ಆದ್ದರಿಂದ ನಾವು ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಸರಕಾರವನ್ನು ಉರುಳಿಸಬೇಕಾಯಿತು. ಅದೂ ಬಿಜೆಪಿಯವರಲ್ಲ, ಜಾರಕಿಹೊಳಿ ಅಂಡ್ ಕಂಪನಿ ಮಾಡಿದ್ದು. ಬಿಜೆಪಿಯವರು ನಮಗೆ ಹಣ ನೀಡಿಲ್ಲ ಅಥವಾ ಆಮಿಷವೊಡ್ಡಿಲ್ಲ” ಎಂದು ಹೇಳಿದರು.

ಡಿ.ಕೆ. ಶಿವಕುಮಾರ್ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ನಾವು ಬಂಡಾಯವೆದ್ದು ಸರಕಾರವನ್ನು ಉರುಳಿಸಿದೆವು. ನಾವು ಎಂದಿಗೂ ಸಿದ್ದರಾಮಯ್ಯ ಅಥವಾ ಮಲ್ಲಿಕಾರ್ಜುನ ಖರ್ಗೆ ವಿರುದ್ಧವಿರಲಿಲ್ಲ. ನಾವು ಡಿ.ಕೆ. ಶಿವಕುಮಾರ್ ಅವರನ್ನು ವಿರೋಧಿಸಿದ್ದೇವೆ. ಇಂದು ಡಿ.ಕೆ. ಶಿವಕುಮಾರ್ ಬೆಂಬಲಿಗರು ಏನೇನೋ ಹೇಳುತ್ತಿದ್ದಾರೆ ಆದರೆ ಅವರ ಹೇಳಿಕೆಗಳಲ್ಲಿ ಯಾವುದೇ ಆಧಾರವಿಲ್ಲ” ಎಂದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿ, ಕಳೆದ ತಿಂಗಳು ಬಿಜೆಪಿ- ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ನಂತರವೇ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅದಕ್ಕಿಂತ ಮೊದಲು ಅಲ್ಲ.ಸೀಟು ಹಂಚಿಕೆ ನಿರ್ಧಾರಕ್ಕೆ ನಾವು ಒಟ್ಟಿಗೆ ಕುಳಿತಿದ್ದೇವೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.

Advertisement

ವಿಧಾನಸಭೆ ಅಧಿವೇಶನದಲ್ಲಿ ಸರಕಾರ ಬೀಳಿಸುವ ಬಿಜೆಪಿ ಷಡ್ಯಂತ್ರವನ್ನು ಬಯಲಿಗೆಳೆಯುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ, ಅದನ್ನು ಸ್ವಾಗತಿಸುವುದಾಗಿ ಹೇಳಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಮತ್ತು ನಾವು ಕೂಡ ಅದಕ್ಕೆ ಬೆಂಬಲ ನೀಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.