Advertisement
ಬಳಿಕ ಮಾತನಾಡಿದ ಅವರು, ಅತಿವೃಷ್ಟಿ ಹಾಗೂ ಪ್ರವಾಹದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದು, ಅಲ್ಪಸಂಖ್ಯಾತರ ಮೋರ್ಚಾದಿಂದ ನೆರವಿಗೆಧಾವಿಸಲು ತಿಳಿಸಿದರು. ಪಕ್ಷದ ತತ್ವ ಸಿದ್ಧಾಂತಗಳು ಎಲ್ಲ ಜನರಿಗೆ ಅನುಕೂಲವಾಗಿದ್ದು, ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಅವರ ಆಡಳಿತ ಜನಪರವಾಗಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣ ಭೂಪಾಲರೆಡ್ಡಿ ನಾಯ್ಕಲ್ ಮಾತನಾಡಿ, ಬಿಜೆಪಿ ಪಕ್ಷದ ತತ್ವ ಸಿದ್ಧಾಂತಗಳು, ಪ್ರಧಾನಿ ಮೋದಿ ಅವರ ಕೆಲಸಗಳು ವಿಶೇಷವಾಗಿ ಅಲ್ಪಸಂಖ್ಯಾತರಮಹಿಳೆಯರಿಗೆ ಅಣ್ಣನಾಗಿ ತ್ರಿವಳಿ ತಲಾಖ್ ರದ್ದುಸೇರಿದಂತೆ ಅನೇಕ ಅತ್ಯತ್ತಮ ಕಾರ್ಯಗಳನ್ನುಮಾಡಿರುವುದನ್ನು ಅಲ್ಪಸಂಖ್ಯಾತರಿಗೆ ತಿಳಿಸುವಮೂಲಕ ಅವರೆಲ್ಲರಿಗೂ ಪಕ್ಷಕ್ಕೆ ಕರೆ ತರಬೇಕು ಎಂದರು.
Related Articles
Advertisement
ಯಾದಗಿರಿ: ತಿಮ್ಮಯ್ಯ ಪುರ್ಲೆ ಅವರು ಶಿಕ್ಷಣ ಕ್ಷೇತ್ರ ಮತ್ತು ಶಿಕ್ಷರಕ ಸಮಸ್ಯೆಗಳ ವಿರುದ್ಧ ಹೋರಾಟಮಾಡಿದ್ದಾರೆ. ಪ್ರಜ್ಞಾವಂತ ಮತದಾರರು ಅವರನ್ನು ಚುನಾವಣೆಯಲ್ಲಿ ಬೆಂಬಲಿಸಿ ಶಕ್ತಿ ತುಂಬ ಬೇಕು ಎಂದು ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ಹೇಳಿದರು.
ನಗರದ ಎನ್.ವಿ.ಎಂ.ಸಭಾಂಗಣದಲ್ಲಿ ಈಶಾನ್ಯ ಶಿಕ್ಷಕರ ಮತಕೇತ್ರದ ಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಪರ ಚುನಾವಣಾ ಪ್ರಚಾರಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಕರ ವೇತನ ತಾರತಮ್ಯ ನಿವಾರಣೆಗೆ ಆಗ್ರಹಿಸಿ ಹೋರಾಟ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡಿದ್ದಾರೆ ಎಂದರು. ರಾಜ್ಯದಲ್ಲಿ ಜಾತ್ಯತೀತ ಸರಕಾರವಿದ್ದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶಿಕ್ಷಕರ ಹಿತ ಕಾಪಾಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಶಿಕ್ಷಕ ಸಮುದಾಯದಲ್ಲಿ ಮನವಿ ಮಾಡಿದರು. ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬೀರನಕಲ್, ನಗರ ಘಟಕ ಅಧ್ಯಕ್ಷ ವಿಶ್ವನಾಥ ಶಿರವಾರ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಅನಪೂರ, ಹಿರಿಯ ಮುಖಂಡ ಚನ್ನಪ್ಪಗೌಡ ಮೋಸಂಬಿ, ತಿಮ್ಮಣ್ಣಗೌಡ ದಾಸನಕೇರಿ, ನಿವೃತ್ತ ಶಿಕ್ಷಕ ಎಂ.ಕೆ. ಬೀರನೂರು,
ಶರಣಪ್ಪ ಸಾತನೂರಕರ, ಸಾಹಿತಿ ಡಾ.ಗಾಳೆಪ್ಪ ಪೂಜಾರಿ, ಪ್ರಾಂಶುಪಾಲ ಎಸ್.ಎಸ್.ನಾಯಕ, ಶ್ರೀಶೈಲ ಹೊಸ್ಮನಿ, ಭೀಮರಾಯ ಲಿಂಗೇರಿ, ಪ್ರದೀಪ ಪುರ್ಲೆ, ತಾಯಪ್ಪ ಯಾದವ ಸೇರಿದಂತೆ ಉಪಸ್ಥಿತರಿದ್ದರು.