ಹೊಸದಿಲ್ಲಿ: ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಪಾಲಿಸುತ್ತಿರುವ ದೇಶದ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮ ವಾರ ಪ್ರತಿಪಾದಿಸಿದ್ದಾರೆ.
ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಮೊದಲ ಸದಸ್ಯತ್ವವನ್ನು ತಾವೇ ಪಡೆಯುವ ಮೂಲಕ ಬಿಜೆಪಿಯ “ಸಂಘಟನಾ ಪರ್ವ, ಸದಸ್ಯತ್ವ ಅಭಿಯಾನ 2024ಕ್ಕೆ’ ಪ್ರಧಾನಿ ಚಾಲನೆ ನೀಡಿದ್ದಾರೆ. ಇದೇ ವೇಳೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ “ಜನಸಂಘದಿಂದ ಈಗಿನವರೆಗೂ ದೇಶದಲ್ಲಿ ಹೊಸ ರಾಜಕೀಯ ಸಂಪ್ರ ದಾಯ ತರಲು, ಜನಸಾಮಾನ್ಯರ ಆಕಾಂಕ್ಷೆಗಳನ್ನು ಪೂರೈ ಸಲು ತನ್ನನ್ನು ತಾನು ಪಕ್ಷ ಸಮರ್ಥಗೊಳಿಸಿಕೊಳ್ಳುತ್ತಿದೆ.
ಸಂವಿಧಾನಾತ್ಮಕವಾಗಿ ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾ ಪಕ್ಷದ ಕಾರ್ಯಾಚರಣೆಗಳನ್ನು ವಿಸ್ತರಿಸಿರುವ ಏಕೈಕ ಪಕ್ಷ ನಮ್ಮದು’ ಎಂದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಸೇರಿ ಕೆಲವು ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲ ಎಂದು ಪರೋಕ್ಷವಾಗಿ ಆರೋಪಿಸಿದರು. ಜನಸಂಘದ ಅವಧಿಯಲ್ಲಿ ಕಾರ್ಯಕರ್ತರು ಗೋಡೆಗಳ ಮೇಲೆ ದೀಪ ಗಳ ಗುರುತನ್ನು ಚಿತ್ರಿಸುತ್ತಿದ್ದರು.
ಕೆಲವು ರಾಜಕಾರಣಿಗಳು ಅಧಿಕಾರದ ಅಂಚಿಗೂ ಬರಲಾಗದವರು ಚಿತ್ರ ಬರೆಯುತ್ತಾರೆ ಎಂದು ಟೀಕಿಸಿದ್ದರು. ನಾವು ಜನರ ಹೃದಯದಲ್ಲಿ ಕಮಲದ ಚಿತ್ರ ಬರೆದಿದ್ದೇವೆ. ಇದು ಬರೀ ಸದಸ್ಯತ್ವ ಅಭಿಯಾನದ ಸಂಪ್ರದಾಯವಲ್ಲ, ನಮ್ಮ ಕುಟುಂಬದ ವಿಸ್ತರಣೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
“ರಾಷ್ಟ್ರ ಮೊದಲು ಎಂಬ ಚಿಂತನೆಗ ಳೊಂದಿಗೆ ದೇಶದ ಪ್ರತಿಯೊಬ್ಬ ಪ್ರಜೆ ಯನ್ನು ಬೆಸೆಯುವ ಸದಸ್ಯತ್ವ ಅಭಿಯಾನ ಇದಾಗಿದೆ. ಪ್ರತಿಯೊಂದು ಮನೆ, ಪ್ರತಿ ಯೊಬ್ಬ ವ್ಯಕ್ತಿಯೂ ಸದಸ್ಯನಾಗುವುದನ್ನು ಕಾರ್ಯಕರ್ತರು ಖಾತರಿಪಡಿಸಿಕೊಳ್ಳಿ.”
-ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಸಿಎಂ