Advertisement

ಇಂದಿನಿಂದ ಬಿಜೆಪಿ ಸದಸ್ಯತ್ವ ಅಭಿಯಾನ

06:46 AM Jul 06, 2019 | Lakshmi GovindaRaj |

ಮೈಸೂರು: ಬಿಜೆಪಿ ರಾಷ್ಟ್ರಾದ್ಯಂತ ಸಂಘಟನಾ ಪರ್ವ ಸದಸ್ಯತ್ವ ಅಭಿಯಾನವನ್ನು ಜು.6 ರಿಂದ ಆ.11ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ 3ವರ್ಷಗಳಿಗೆ ಅನ್ವಯವಾಗುವಂತೆ ಸಾಥ್‌ ಆಯೇ, ದೇಶ್‌ ಬನಾಯೇ ಯೋಜನೆಯಡಿ ಮೊಬೈಲ್‌ನಿಂದ ಶುಲ್ಕ ರಹಿತ ಕರೆ ಮಾಡಿ ಸದಸ್ಯತ್ವ ಪಡೆಯುವ ಯೋಜನೆಯನ್ನು ಜು.6 ರಂದು ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ತೆಲಂಗಾಣದಲ್ಲಿ ಚಾಲನೆ ನೀಡಲಿದ್ದಾರೆಂದರು.

ಮೈಸೂರು ನಗರದಲ್ಲಿ ಅದೇ ದಿನ ಸಂಜೆ 4.30ಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರು ಚಾಲನೆ ನೀಡುವರು ಎಂದು ಮಾಹಿತಿ ನೀಡಿದರು.
ಸದಸ್ಯತ್ವ ಅಭಿಯಾನಕ್ಕೆ ಚಾಲನೆ ದೊರೆತ ಬಳಿಕ ಪಕ್ಷದ ಮುಖಂಡರು, ಕಾರ್ಯಕರ್ತರು ಮನೆ, ಮನೆಗೂ ತೆರಳಿ ಪಕ್ಷಕ್ಕೆ ಸದಸ್ಯರನ್ನಾಗಿಸಿಕೊಳ್ಳಲಿದ್ದಾರೆ. ಅಲ್ಲದೇ, ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಲಾಗುವುದೆಂದರು.

ಸದಸ್ಯತ್ವ ಅಭಿಯಾನದಲ್ಲಿ ಬೂತ್‌ಮಟ್ಟದಲ್ಲಿ ಸಸಿ ನೆಡುವುದು. ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಅವರನ್ನು ಸದಸ್ಯರನ್ನಾಗಿಸುವುದು, ಹಿರಿಯ ಬಿಜೆಪಿ ಕಾರ್ಯಕರ್ತರಿಗೆ ಸನ್ಮಾನ, ಆಟೋ, ಟ್ರಕ್‌ ಡ್ರೆçವರ್‌ ಹಾಗೂ ಕೊಳಚೆ ಪ್ರದೇಶಗಳಲ್ಲಿ ಕಾರ್ಯಕ್ರಮ ಮಾಡಲಾಗುವುದು. ಕಳೆದ ಬಾರಿ ನಗರದಲ್ಲಿ 3.65 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದು, ಈ ವರ್ಷ 2 ಲಕ್ಷ ಮಂದಿಯನ್ನು ಸದಸ್ಯತ್ವಕ್ಕೆ ಸೇರಿಸಬೇಕೆಂದು ಗುರಿ ಹೊಂದಿರುವುದಾಗಿ ತಿಳಿಸಿದರು.

ಸದಸ್ಯತ್ವ ಪಡೆಯಲು ಸ್ಮಾರ್ಟ್‌ಫೋನ್‌ ಹೊಂದಿರುವವರು ದೂ.89808 08080ಗೆ ಹಾಗೂ ಬೇಸಿಕ್‌ ಫೋನ್‌ ಹೊಂದಿರುವವರು 89807 89807ಗೆ ಮಿಸ್‌ ಕಾಲ್‌ ನೀಡಿ ಸದಸ್ಯರಾಗಬಹುದು ಎಂದು ತಿಳಿಸಿದರು.

Advertisement

ಶಾಸಕ ಎಸ್‌.ಎ.ರಾಮದಾಸ್‌ ಕೇಂದ್ರ ಬಜೆಟ್‌ ಕುರಿತು ಮಾತನಾಡಿ, ವಿಶ್ವ ಆರ್ಥಿಕತೆಯೇ ಈಗ ಸಮಸ್ಯೆಯಲ್ಲಿರುವ ವೇಳೆ ದೇಶದ ಆರ್ಥಿಕ ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ ವಿತ್ತೀಯ ಕೊರತೆ ಕಡಿಮೆ ಮಾಡುವ, ಉದ್ಯೋಗ ಸೃಷ್ಟಿಸುವ ಮೂಲಕ ನಿರುದ್ಯೋಗ ನಿವಾರಣೆ ಮಾಡುವ, ಮಹಿಳಾ ಸಬಲೀಕರಣ ಗುರಿಯನ್ನು ಈ ಬಾರಿಯ ಬಜೆಟ್‌ ಹೊಂದಿದೆ ಎಂದು ಶ್ಲಾ ಸಿದರು. ಶಾಸಕ ಎಲ್‌.ನಾಗೇಂದ್ರ, ಫ‌ಣೀಶ್‌, ಪ್ರಭಾಕರ್‌ ಶಿಂಧೆ, ಸತೀಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next