Advertisement

BJP Meeting ಆ.17ಕ್ಕೆ: ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಗ್ಗೆ ನಿರ್ಧಾರ?

01:29 AM Aug 14, 2024 | Team Udayavani |

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಆ.17ರಂದು ಜರಗಲಿದ್ದು, ಪಕ್ಷದ ಸದಸ್ಯತ್ವ ಅಭಿಯಾನದ ಪ್ರಾರಂಭ ಮತ್ತು ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಚುನಾವಣೆಯ ದಿನಾಂಕಗಳು ಘೋಷಣೆ ಯಾಗುವ ಸಾಧ್ಯತೆಗಳಿವೆ.

Advertisement

ಸದ್ಯ ಪಕ್ಷದ ನೂತನ ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆ ಅಂತಿಮಗೊಳ್ಳುವ ವರೆಗೂ ಹಂಗಾಮಿಯಾಗಿ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ಬಿಜೆಪಿ ಯೋಜಿ ಸಿದೆ ಎಂದು ತಿಳಿದುಬಂದಿದೆ.ಹಾಲಿ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಇದೀಗ ಕೇಂದ್ರ ಸಚಿವ ರಾಗಿ ನೇಮಕಗೊಂಡಿರುವ ಕಾರಣ, ಬಿಜೆಪಿಯ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಸಿದ್ಧಾಂತದಂತೆ ನೂತನ ಅಧ್ಯಕ್ಷರನ್ನು ನೇಮಿಸಲು ಬಿಜೆಪಿ ಮುಂದಾಗಿದೆ.

ಈ ಸಭೆಗೂ ಮುನ್ನ ಬಿಜೆಪಿ ನಾಯಕರು ಆರ್‌ಎಸ್‌ಎಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸ ಬಾಳೆಯವರೊಂದಿಗೆ ರವಿವಾರ ಸಭೆ ನಡೆಸಿದ್ದರು. ಈ ವೇಳೆ ಆರ್‌ಎಸ್‌ಎಸ್‌ ಜತೆಗೆ ಸಮಾಲೋಚನೆ ನಡೆ ಸಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಾಗ ಬೇಕು ಹಾಗೂ ಈ ಕಾರ್ಯ ಶೀಘ್ರವೇ ಆಗಬೇಕು ಎಂಬ ಅಭಿಪ್ರಾಯ ಸಂಘದಿಂದ ವ್ಯಕ್ತವಾಗಿದೆ. ಬಿಜೆಪಿ ಬಣ ಮಹಾರಾಷ್ಟ್ರ, ಹರಿಯಾಣ, ಝಾರ್ಖಂಡ್‌ ಚುನಾವಣೆ ಬಳಿಕ ರಾಷ್ಟ್ರೀಯ ಅಧ್ಯಕ್ಷರ ನೇಮಕ ಸರಿ ಎಂದು ವಾದಿಸಿದೆ ಎಂದು ಮೂಲಗಳು ತಿಳಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next