Advertisement
ಕೇರಳದ ಕಣ್ಣೂರಿನಲ್ಲಿ ಚುನಾವಣ ಸಭೆಯಲ್ಲಿ ಮಾತನಾಡಿ, ಬಿಜೆಪಿ - ಆರೆಸ್ಸೆಸ್ ವಿರುದ್ಧ ನಿತ್ಯ ಹೋರಾಡುತ್ತೇನೆ. ಪ್ರತೀ ದಿನ ಬೆಳಗ್ಗೆ ಎದ್ದಾಗ ನಾನು ಹೇಗೆ ಅವರಿಗೆ ಡಿಸ್ಟರ್ಬ್ ಮಾಡಲಿ ಎಂದು ಯೋಚಿಸುತ್ತೇನೆ. ಬಿಜೆಪಿಯ ಮಾಧ್ಯಮಗಳು 24 ಗಂಟೆಯೂ ನನ್ನನ್ನು ದೂಷಿಸುತ್ತವೆ. ದೇಶಾದ್ಯಂತ ನನ್ನ ಇಮೇಜ್ ಹಾಳು ಮಾಡಲೆತ್ನಿಸುತ್ತಿವೆ ಎಂದರು.
ಹೊಸದಿಲ್ಲಿ: ಇದು ಸಾಮಾನ್ಯ ಚುನಾವಣೆ ಅಲ್ಲ, ಸಂವಿ ಧಾನವನ್ನು ಹಾಗೂ ಭಾರತದ ಪ್ರಜಾಪ್ರಭುತ್ವ ವನ್ನು ಉಳಿಸಲು ನಡೆಯುತ್ತಿರುವ ಚುನಾವಣೆ. ಈ ನಿರ್ಣಾಯಕ ಘಟ್ಟದಲ್ಲಿ ಬಿಜೆಪಿ ಹೇಗೆ ದೇಶದ ಚಿಂತ ನೆಗಳನ್ನು ನಾಶ ಪಡಿಸುತ್ತಿದೆ ಎಂಬುದನ್ನು ಜನರಿಗೆ ತಿಳಿಸಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮೊದಲ ಹಂತದ ಲೋಕಸಭೆ ಚುನಾವಣೆಯ ಮುನ್ನಾ ದಿ ನ ಗುರು ವಾರ ವೀಡಿಯೋ ಸಂದೇಶದ ಮೂಲಕ ರಾಹುಲ್ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದು, ನೀವು ನಮ್ಮ ಪಕ್ಷದ ಬೆನ್ನೆಲುಬು. ಸಂವಿಧಾನದ ಉಳಿವಿಗಾಗಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ನಿಮ್ಮಂಥ ಕಾರ್ಯಕರ್ತರಿಗೆ ಜವಾಬ್ದಾರಿ ಹೆಚ್ಚು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಈ ದೇಶದ ಸಿದ್ಧಾಂತಗಳಿಗೆ ವಿರುದ್ಧವಾಗಿವೆ’ ಎಂದಿದ್ದಾರೆ. ಅಮೇಠಿಯಲ್ಲಿ ಸ್ಪರ್ಧೆಗೆ ರಾಗಾಗೆ ಧೈರ್ಯ ಇಲ್ಲ: ರಾಜನಾಥ್ ಸಿಂಗ್
2019ರಲ್ಲಿ ಸೋತ ಬಳಿಕ ಮತ್ತೆ ಅಮೇಠಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯವನ್ನು ರಾಹುಲ್ ಗಾಂಧಿ ಮಾಡುತ್ತಿಲ್ಲ. ಆದರೆ ಈ ಬಾರಿ ವಯ ನಾಡಿನಲ್ಲೂ ಅವರಿಗೆ ಸೋಲು ಎದುರಾಗಲಿದೆ ಎಂದು ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೇರಳದ ಪ್ರಚಾರ ಸಭೆಯಲ್ಲಿ ಹೇಳಿದರು.