Advertisement
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರಾದ ಜೆ.ಆರ್. ಲೋಬೊ ಅವರ ವಿಶೇಷ ಕಾಳಜಿ ಮೇರೆಗೆ ಮಂಗಳೂರು ನಗರಕ್ಕೆ ನೀರಿನ ಅಭಾವ ಸರಿಪಡಿಸಲು ಸುಮಾರು 7 ಮೀ. ಎತ್ತರದಲ್ಲಿ ವೆಂಟೆಡ್ ಡ್ಯಾಂ ಅನ್ನು ಕಾಂಗ್ರೆಸ್ ಪಕ್ಷ ಸರಕಾರದ ಅನುಮೋದನೆ ದೊರಕಿಸಿ ಕೊಡಲು ಯಶಸ್ವಿಯಾಗಿತ್ತು. ಈಗ 6 ಮೀಟರ್ ನೀರು ನಿಲುಗಡೆಯಾಗುತ್ತಿದೆ. ನಗರಕ್ಕೆ ಕುಡಿಯುವ ನೀರು ಪರಿಸ್ಥಿತಿಯನ್ನು ಅಂದಾಜಿಸಿ ಡಿಸೆಂಬರ್ ತಿಂಗಳಿನಿಂದ ಕಾರ್ಯಯೋಜನೆ ರೂಪಿಸಬೇಕಾಗಿತ್ತು. ಆದರೆ ಪಾಲಿಕೆಯಲ್ಲಿ ಆಡಳಿತದಲ್ಲಿರುವ ಬಿಜೆಪಿ ಈ ಬಗ್ಗೆ ತೀರಾ ನಿರ್ಲಕ್ಷ್ಯ ವಹಿಸಿತ್ತು. ಇದರಿಂದಾಗಿ ನಗರದ ಜನತೆ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಅಂದಾಜು ವೆಚ್ಚ 760 ಕೋ.ವೆಚ್ಚದಲ್ಲಿ ಜಲಸಿರಿ ಯೋಜನೆಯನ್ನು ಅಂದಿನ ಶಾಸಕರಾದ ಜೆ.ಆರ್.ಲೋಬೊ ಹಾಗೂ ನಗರಾಭಿವೃದ್ಧಿ ಸಚಿವರಾದ ವಿನಯ್ ಕುಮಾರ್ ಸೊರಕೆ ಅವರ ಮೂಲಕ ಸರಕಾರದಿಂದ ಮಂಜೂರಾತಿ ದೊರಕಿಸಲು ಯಶಸ್ವಿಯಾಗಿದ್ದು, ಈಗ ಅದರ ಕಾಮಗಾರಿಗಳು ನಡೆಯುತ್ತಿವೆ. ಸುಮಾರು ಸುಮಾರು 20 ಓವರ್ ಹೆಡ್ ಟ್ಯಾಂಕ್, ಅಂಡರ್ ಗ್ರೌಂಡ್, ವಾಟರ್ ಸ್ಟೋರೇಜ್, ಬೂಸ್ಟರ್ ಪೈಪ್ ಮೂಲಕ ಓವರ್‌ಹೆಡ್ ಟ್ಯಾಂಕ್‌ಗೆ ನೀರನ್ನು ಶೇಖರಿಸಲು ಕ್ರಮ. ಈ ಯೋಜನೆ ಮುಖಾಂತರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಭರ ನೀಗಿಸಲು ಕ್ರಮ ಕೈಗೊಳ್ಳಲಾಗಿದೆ. ಆದರೆ, ಈಗಿನ ಶಾಸಕರು ತಾನೇ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
Related Articles
Advertisement
ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲೂ ಭಾರೀ ಮಾಡಲಾಗಿದೆ. ಖಾಲಿ ನಿವೇಶನಕ್ಕೆ ಅತೀ ಹೆಚ್ಚು ಅಂದರೆ ಶೇ. 0.2, ಗೈಡೆನ್ಸ್ ವ್ಯಾಲ್ಯೂ ಶೇ.25 ರಷ್ಟು ಕೂಡಿಸಿ ಎಸ್‌ಎಎಸ್ ನಲ್ಲಿ ಸೇರಿಸಲಾಗಿದೆ. ಇದನ್ನು ಕೂಡಾ ಕಾಂಗ್ರೆಸ್ ವಿರೋಧಿಸಿದೆ. ಸಾರ್ವಜನಿಕರು ಇದರಿಂದ ಎಚ್ಚೆತ್ತು ಬಿಜೆಪಿಯ ಸುಳ್ಳು ಆಶ್ವಾಸನೆಗೆ ಮರಳಾಗಬಾರದು ಎಂದು ನವೀನ್ ಡಿ’ಸೋಜ ಹೇಳಿದರು.
ನಗರದ ಅಭಿವೃದ್ಧಿಗೆ ಕಾಂಗ್ರೆಸ್ ಅತ್ಯಗತ್ಯನಗರದ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಬೇಕು. ಹಾಗಾಗಿ ಜೆ.ಆರ್. ಲೋಬೋ ಅವರನ್ನು ಅಧಿಕ ಮತಗಳಿಂದ ಶಾಸಕರಾಗಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.