Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿ ‘ಮಹಾತ್ಮಗಾಂಧಿ ಯಾರೆಂದು ಗೊತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಆಡಿದ ಮಾತು ಸರಿಯಲ್ಲ.ಸೂರ್ಯಚಂದ್ರ ಇರುವವರೆಗೂ ಮಹಾತ್ಮಗಾಂಧಿಯವರ ಹೆಸರು ಸ್ಥಿರವಾಗಿರುತ್ತದೆ’ ಎಂದರು.
Related Articles
Advertisement
ಯದುವೀರ್ ಅವರಿಗೆ ಬಹಳ ಜವಬ್ದಾರಿ ಇದೆ. ಮೈಸೂರು ಪ್ರವಾಸೋದ್ಯಮದ ಬಗ್ಗೆ ಗಮನಹರಿಸಬೇಕು. ವಿಶ್ವವಿಖ್ಯಾತ ದಸರಾ ಕುಸಿದು ಹೋಗಿದೆ. ಅದನ್ನ ವಿಶ್ವವಿಖ್ಯಾತ ಮತ್ತೆ ಮಾಡಬೇಕು. ಕೇಂದ್ರ ಪ್ರವಾಸೋದ್ಯಮ ಇಲಾಖೆಯನ್ನ ಇಲ್ಲಿಗೆ ಕರೆತರಬೇಕು. ಯಾವುದೇ ಅಲೆಯಿಂದ ಯದವೀರ್ ಆಯ್ಕೆಯಾಗಿಲ್ಲ. ಜನರ ಅಲೆಯಿಂದ ಯದುವೀರ್ ಆಯ್ಕೆಯಾಗಿದ್ದಾರೆ.ರಾಜರ ಕೊಡುಗೆಗಳನ್ನು ನಾವು ಸ್ಮರಿಸಬೇಕು’ ಎಂದರು.
‘1 ರಿಂದ 9 ಕ್ಕೆ ಬಂದಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, 28 ಕ್ಕೆ 28 ಗೆಲ್ಲುತ್ತೇವೆ ಎನ್ನುತ್ತಿದ್ದರು, ಯಾಕೆ ಗೆಲ್ಲಲಿಲ್ಲ? ಮೈಸೂರಿನಲ್ಲಿ ಕಾಂಗ್ರೆಸ್ ಸೋಲು ರಾಜ್ಯ ಸರಕಾರದ ಮೇಲೆ ಜನರಿಗೆ ವಿಶ್ವಾಸವಿಲ್ಲ ಎಂಬುದರ ಧ್ಯೋತಕ’ ಎಂದರು.
‘ಸಂಸತ್ತಿಗೆ ಆಯ್ಕೆಯಾಗಿರುವ ರಾಜ್ಯದ 28 ಜನರಿಗೂ ಅಭಿನಂದನೆ ಸಲ್ಲಿಸುತ್ತೇನೆ. 28 ಜನ ಸಂಸದರೂ ಕೂಡ ಪಕ್ಷಾತೀತವಾಗಿ ಕೆಲಸ ಮಾಡಬೇಕು.ಕಳೆದ ಬಾರಿ ಆಯ್ಕೆಯಾದ ಸಂಸದರು ರಾಜ್ಯದ ನೆಲ, ಜಲ, ನಾಡಿನ ಸಮಸ್ಯೆಗಳ ಕುರಿತು ಪ್ರಶ್ನೆಯನ್ನೇ ಮಾಡಲಿಲ್ಲ.ನಮ್ಮ ಅವಧಿಯಲ್ಲಿ ಕರ್ನಾಟಕದ ಯಾವುದೇ ಸಮಸ್ಯೆಗಳಿಗೆ ಒಟ್ಟಾಗಿ ಹೋರಾಟ ಮಾಡುತ್ತಿದ್ದೆವು.ಇತ್ತೀಚಿನ ದಿನಗಳಲ್ಲಿ ಒಗ್ಗಟ್ಟಿನ ಕೊರತೆಯಿದೆ.ನಾಡಿನ ಸಮಸ್ಯೆಗಳು ಬಂದಾಗ ಈಗ ಆಯ್ಕೆಯಾಗಿರುವ ಸಂಸದರು ಆ ರೀತಿಯಾಗಬಾರದು.ಈ ಬಾರಿ ಮೂವರು ಮಾಜಿ ಸಿಎಂ ಗಳು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.ರಾಜ್ಯದ ಸಮಸ್ಯೆಗಳನ್ನು ಬಗಹರಿಸುವ ಕೆಲಸವನ್ನು ನೀವು ಮಾಡಬೇಕು. ಮುಖ್ಯಮಂತ್ರಿಗಳಾಗಿ ಸಾಕಷ್ಟು ಅನುಭವವಿದೆ. ಎಚ್.ಡಿ. ಕುಮಾರಸ್ವಾಮಿ, ಬಸವವಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರು ನೇತೃತ್ವ ವಹಿಸಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.