Advertisement

BJP ಪಟ್ಟಿ ನಾಳೆ ಬಿಡುಗಡೆ, ಕೊನೆ ಕ್ಷಣದಲ್ಲಿ.. .; ಪ್ರಹ್ಲಾದ್ ಜೋಶಿ ಹೇಳಿದ್ದೇನು?

10:01 PM Apr 10, 2023 | Team Udayavani |

ನವದೆಹಲಿ : ಎಲ್ಲರೂ ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಗಜಪ್ರಸವದಂತೆ ಆಗುತ್ತಿದ್ದು,’ಮಂಗಳವಾರ ಯಾವುದೇ ಕ್ಷಣದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇವೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೋಮವಾರ ರಾತ್ರಿ ಹೇಳಿಕೆ ನೀಡಿದ್ದಾರೆ.

Advertisement

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಹಂತಕ್ಕೆ ಬಂದಿದೆ. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ದೆಹಲಿಯಲ್ಲಿ ಇಲ್ಲದೆ ಇರುವುದರಿಂದ ಅವರ ಜತೆ ಸಮಾಲೋಚನೆ ಮಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅನುಮತಿ ಪಡೆದು ಆದಷ್ಟು ಬೇಗ ಮೊದಲ ಪಟ್ಟಿ ಬಿಡುಗಡೆ ಮಾಡುತ್ತೇವೆ” ಎಂದು ಹೇಳಿದ್ದಾರೆ.

”ಗೊಂದಲ ಅನ್ನುವ ಶಬ್ದವೇ ಇಲ್ಲ 13 ಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತದೆ.ಒಂದು ದಿವಸ ಮುಂಚೆ ನಾವು ಬಿಡುಗಡೆ ಮಾಡುತ್ತೇವೆ. ನಾಳೆ(ಮಂಗಳವಾರ) ಯಾವುದೇ ಕ್ಷಣದಲ್ಲಿ ನಾವು ಬಿಡುಗಡೆ ಮಾಡುತ್ತೇವೆ. ಲಿಸ್ಟ್ ಬಂದ ನಂತರ ಅಚ್ಚರಿ ಏನು ಎಂಬುದು ನಿಮಗೆ ಗೊತ್ತಾಗುತ್ತದೆ ಎಂದರು.

ಬಹಳ ದೊಡ್ಡ ಮಟ್ಟದಲ್ಲಿ ನಾವು ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ. ಕೊನೆಯ ಕ್ಷಣದಲ್ಲಿ ಕೆಲವ ಬದಲಾವಣೆ ಆಗುತ್ತದೆ. ಎಚ್ಚರಿಕೆಯ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದರು.

ಪಾರ್ಲಿಮೆಂಟ್ ಬೋರ್ಡ್ ಸಭೆಯೂ ಆಗಿದೆ. ನಮ್ಮ ರಾಜ್ಯದ ಎಲ್ಲ ಪ್ರಮುಖರು ಭಾಗವಹಿಸಿದ್ದರು. ನಮ್ಮ ಸಮಗ್ರ 224 ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ. ಕೆಲವು ಮಾಹಿತಿ ಮತ್ತು ಸ್ಪಷ್ಟೀಕರಣ ಬೇಕಾಗಿತ್ತು. ಅದನ್ನೂ ನಾವು ಮಾಡಿ ಕೊಟ್ಟಿದ್ದೇವೆ. ಪ್ರಚಾರದ ರೋಡ್ ಮ್ಯಾಪ್, ಎಷ್ಟು ರ‍್ಯಾಲಿಗಳನ್ನು ಮಾಡಬೇಕು. ವೈಯಕ್ತಿಕವಾಗಿ ಅಭ್ಯರ್ಥಿಗಳು ಏನು ಮಾಡಬೇಕು, ರಾಷ್ಟ್ರೀಯ ನಾಯಕರು ಯಾರ್ಯಾರು ಬರಬೇಕು. ಪ್ರಧಾನ ಮಂತ್ರಿಗಳ ಪ್ರವಾಸ , ಗ್ರಹ ಸಚಿವರು, ರಕ್ಷಣ ಮಂತ್ರಿ , ಕೇಂದ್ರ ಸಚಿವರು, ರಾಷ್ಟ್ರೀಯ ಪದಾಧಿಕಾರಿಗಳ ಪವಾಸ ಎಲ್ಲೆಲ್ಲಿ ಆಗಬೇಕು ಎನ್ನುವ ಸಮಗ್ರ ಚರ್ಚೆ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಮಾಡಿದ್ದೇವೆ ಎಂದರು.

Advertisement

ಯಡಿಯೂರಪ್ಪ ಅವರು ಪ್ರಚಾರಕ್ಕೆ ಸಂಬಂಧಿಸಿದಂತೆ, ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ತಮ್ಮ ಸಲಹೆ ಕೊಟ್ಟು ಅನಿವಾರ್ಯವಾಗಿ ಬೆಂಗಳೂರಿಗೆ ಹೋಗಬೇಕಾದುದ್ದರಿಂದ ಹೋಗಿದ್ದಾರೆ ಎಂದರು.

ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ ಅವರು ದೆಹಲಿಯಲ್ಲಿ ಸೋಮವಾರ ಬೆಳಗ್ಗೆ 170 ರಿಂದ 180 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದರು. ಆ ಬಳಿಕ ಎಲ್ಲರ ಚಿತ್ತ ಪಟ್ಟಿ ಬಿಡುಗಡೆಯಾಗುವ ಕ್ಷಣದತ್ತ ನೆಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next