Advertisement

ನಾಳೆಯಿಂದ ಬಿಜೆಪಿ ಮುಖಂಡರ ಒಗ್ಗಟಿನ ಯಾತ್ರೆ

02:21 PM Feb 07, 2023 | Team Udayavani |

ಬಂಗಾರಪೇಟೆ: ಫೆ. 8ರಿಂದ ಬಿಜೆಪಿ ಒಗ್ಗಟ್ಟಿನ ಯಾತ್ರೆ ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಬಲವರ್ಧನೆಗೆ ಎಲ್ಲಾ ಮುಖಂಡರು ಒಂದಾಗಿ ಈ ಯಾತ್ರೆಯನ್ನು ಆಯೋಜಿಸಲಾಗಿದ್ದು, ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದು, ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಬಿಜೆಪಿ ಪಕ್ಷದ ಬೂತ್‌ ಅಭಿಯಾನದ ಜಿಲ್ಲಾ ಸಂಚಾಲಕ ಕೆ.ಚಂದ್ರಾರೆಡ್ಡಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಆಕಾಂಕ್ಷಿತ ಅಭ್ಯರ್ಥಿಗಳು ಒಳಗೊಂಡಂತೆ ಮುಖಂಡರು, ಕಾರ್ಯಕರ್ತರು ಫೆ.8 ರಂದು ಬುಧವಾರ ಹುತ್ತೂರು, ಫೆ. 10 ರಂದು ಶುಕ್ರವಾರ ಬೂದಿಕೋಟೆ, ಫೆ.11 ರಂದು ಶನಿವಾರ ಕಾಮಸಮುದ್ರ, ಫೆ.12 ರಂದು ಭಾನುವಾರ ಡಿಕೆ ಹಳ್ಳಿ ಆಲದಮರ, 13 ರಂದು ಸೋಮವಾರ ಸೂಲಿಕುಂಟೆ ಸೇರಿದಂತೆ ಎಲ್ಲಾ ಹೋಬಳಿ ಕೇಂದ್ರ ಸ್ಥಾನಗಳಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನತೆಗೆ ಉಡುಗೊರೆಯಾಗಿ ಕಂಬಳಿ ನೀಡುವುದರೊಂದಿಗೆ ಕೇಂದ್ರ, ರಾಜ್ಯ ಸರ್ಕಾರದ ಜನಪರ ಯೋಜನೆಗಳ ಕರಪತ್ರವನ್ನು ವಿತರಣೆ ಮಾಡುವುದರ ಮೂಲಕ ಪ್ರಚಾರ ನಡೆಸಲಾಗುವುದು. ಅನಂತರ ಪ್ರತಿ ಗ್ರಾಪಂ, ಪ್ರತಿಯೊಂದು ಗ್ರಾಮಕ್ಕೂ ಹಾಗೂ ಪ್ರತಿಯೊಂದು ಮನೆಗೆ ತೆರಳಿ ಬಿಜೆಪಿ ಪರ ಮತಯಾಚನೆ ಮಾಡಲಾಗುವುದೆಂದರು.

ಬಿಜೆಪಿಯಲ್ಲಿ 6 ಮಂದಿ ಟಿಕೆಟ್‌ ಆಕಾಂಕ್ಷಿಗಳಿರುವ ಹಿನ್ನೆಲೆಯಲ್ಲಿ ಗೊಂದಲ ಸಹಜ. ಈಗ ಎಲ್ಲಾಆರು ಮಂದಿ ಆಕಾಂಕ್ಷಿಗಳು ಟಿಕೆಟ್‌ ಯಾರಿಗೇ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಪಕ್ಷಕ್ಕಾಗಿ ಶ್ರಮಿಸಲು ಸಂಸದ ಎಸ್‌. ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವ ಮುನಿರತ್ನರ ಸೂಚನೆ ಮೇರೆಗೆ ಸಚಿವರ ಸೂಚನೆಯಂತೆ ನಡೆಯಲು ಸಂಕಲ್ಪ ಮಾಡಿದ್ದಾರೆಂದು ಹೇಳಿದರು.

ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ದಶಕದ ಕಾಲ ಶಾಸಕರಾಗಿದ್ದ ಕಾಂಗ್ರೆಸ್‌ನ ಎಸ್‌.ಎನ್‌.ನಾರಾಯಣಸ್ವಾಮಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ಅಭಿವೃದ್ಧಿಯನ್ನು ಮೂಲೆಗುಂಪು ಮಾಡಿದ್ದಾರೆ. ಇದರ ಪರಿಣಾಮ ಕ್ಷೇತ್ರಾದ್ಯಂತ ಅವರ ವಿರೋಧಿ ಅಲೆ ಇರುವುದರಿಂದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದರು.

ಮಾಜಿ ಶಾಸಕ ಟಿಕೆಟ್‌ಆಕಾಂಕ್ಷಿ ಎಂ.ನಾರಾಯಣ ಸ್ವಾಮಿ ಮಾತನಾಡಿ, ಬರುವ ವಿಧಾನಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಸಲು ನಾವು ಟಿಕೆಟ್‌ ಆಕಾಂಕ್ಷಿಗಳು ಈಗಾಗಲೇ ಶಕ್ತಿ ದೇವತೆ ಕೋಲಾರಮ್ಮ ಮೇಲೆ ಪ್ರಮಾಣ ಮಾಡಲಾಗಿದೆ. ಅದರಂತೆ ನಡೆದುಕೊಳ್ಳುವೆವು, ಟಿಕೆಟ್‌ ಗೊಂದ ಲವಿಲ್ಲ ಹೈಕಮಾಂಡ್‌ ಯಾರಿಗೆ ಕೊಟ್ಟರೂ ಎಲ್ಲರೂ ಸೇರಿ ಚುನಾವಣೆ ಎದುರಿಸಲು ಸಜ್ಜಾಗಿದ್ದೇವೆ ಎಂದರು.

Advertisement

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಹೇಶ್‌ ಮಾತ ನಾಡಿ, ಸ್ಥಳೀಯ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾ ಯಣಸ್ವಾಮಿ ಬಿಜೆಪಿ ಕಾರ್ಯಕರ್ತರ ಮೇಲೆ ವಿನಾಕಾರಣ ಪೊಲೀಸ್‌ ಇಲಾಖೆಯಲ್ಲಿ ಎಫ್ಐಆರ್‌ ದೂರುಗಳನ್ನು ದಾಖಲಿಸುವುದರ ಮೂಲಕ ತೊಂದರೆಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಜೆಪಿ ಮುಖಂಡ ವಿ.ಶೇಷು ಮಾತನಾಡಿದರು.

ತಾಲೂಕು ಅಧ್ಯಕ್ಷ ಎಂ.ನಾಗೇಶ್‌, ಜಿಲ್ಲಾ ಉಪಾಧ್ಯಕ್ಷ ಬಿ.ಹೊಸರಾಯಪ್ಪ. ಟಿಎಪಿಸಿಎಂಎಸ್‌ ಅಧ್ಯಕ್ಷ ಜಿ. ರಾಜಾರೆಡ್ಡಿ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಪಿ. ಅಮರೇಶ್‌, ಜುಂಜನಹಳ್ಳಿ ನಾರಾಯಣಸ್ವಾಮಿ, ಬೋಡಗುರಿR ಪಾರ್ಥಸಾರಥಿ, ಚಿಕ್ಕವಲಗಮಾದಿ ಚೌಡಪ್ಪ, ವಿಸ್ತಾರಕ ಆನಂದ್‌, ಅಬಕಾರಿ ಸುಬ್ಬರಾಯಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next