Advertisement

ಸಲಹಾ ಸಮಿತಿ ಸಭೆಗೆ ಬಿಜೆಪಿ ನಾಯಕರು ಗೈರು

11:42 PM Jul 12, 2019 | Lakshmi GovindaRaj |

ಬೆಂಗಳೂರು: ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ದಿನಾಂಕ ನಿಗದಿ ಮಾಡುವ ಕುರಿತಂತೆ ಚರ್ಚಿಸಲು ವಿಧಾನಸಭಾಧ್ಯಕ್ಷ ರಮೇಶ್‌ ಕುಮಾರ್‌ ಕರೆದಿದ್ದ ಸದನ ಸಲಹಾ ಸಮಿತಿ ಸಭೆಯಿಂದ ಬಿಜೆಪಿ ಸದಸ್ಯರು ದೂರ ಉಳಿದರು.

Advertisement

ಮುಂದಿನ ದಿನಗಳಲ್ಲಿ ಕಲಾಪದಲ್ಲಿ ತೆಗೆದುಕೊಳ್ಳಬೇಕಾದ ವಿಷಯಗಳು ಹಣಕಾಸು ವಿಧೇಯಕ ಮಂಡನೆ, ಇಲಾಖಾವಾರು ಚರ್ಚೆಗೆ ಮೀಸಲಿಡಬೇಕಾದ ಸಮಯದ ಕುರಿತು ಚರ್ಚಿಸಲು ರಮೇಶ್‌ ಕುಮಾರ್‌ ಕಲಾಪ ಸಲಹಾ ಸಮಿತಿ ಸಭೆ ಕರೆದಿದ್ದರು.

ಈ ಸಭೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿ ಆಡಳಿತ ಪಕ್ಷದ ಸದನ ನಾಯಕರು ಹಾಜರಾಗಿದ್ದರು. ಆದರೆ, ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಸೇರಿ ಯಾವ ನಾಯಕರೂ ಪಾಲ್ಗೊಳ್ಳದಿದ್ದರಿಂದ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗಿಲ್ಲ.

ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬುಧವಾರ ವಿಶ್ವಾಸ ಮತ ಯಾಚನೆಗೆ ಅವಕಾಶ ನೀಡಿ ಎಂದು ಸ್ಪೀಕರ್‌ಗೆ ಮನವಿ ಮಾಡಿದ್ದಾರೆ. ಆದರೆ, ಪ್ರತಿಪಕ್ಷದ ನಾಯಕರು ಸಭೆಯಲ್ಲಿ ಹಾಜರಿಲ್ಲದ ಕಾರಣ ಪ್ರತಿಪಕ್ಷದ ನಾಯಕರೊಂದಿಗೆ ಚರ್ಚಿಸಿ ವಿಶ್ವಾಸ ಮತ ಯಾಚನೆಗೆ ಸಮಯ ನೀಡುವುದಾಗಿ ರಮೇಶ್‌ ಕುಮಾರ್‌ ಮುಖ್ಯಮಂತ್ರಿಗೆ ತಿಳಿಸಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next