Advertisement

Online Nikah: ಪಾಕ್‌ ಯುವತಿಯನ್ನು ಆನ್‌ಲೈನ್‌ನಲ್ಲಿ ವಿವಾಹವಾದ ಬಿಜೆಪಿ ಮುಖಂಡನ ಪುತ್ರ!

10:39 AM Oct 20, 2024 | Team Udayavani |

ಜೌನ್‌ಪುರ್: ಬಿಜೆಪಿ ನಾಯಕರೊಬ್ಬರ ಮಗ ಪಾಕಿಸ್ತಾನಿ ಹುಡುಗಿಯನ್ನು ಆನ್‌ಲೈನ್ “ನಿಕಾಹ್” (Online Nikah) ಮೂಲಕ ವಿವಾಹವಾದ ಘಟನೆ ಉತ್ತರ ಪ್ರದೇಶದ ಜೌನ್‌ ಪುರ್‌ ಜಿಲ್ಲೆಯಲ್ಲಿ ನಡೆದಿದೆ.

Advertisement

ಭಾರತೀಯ ಜನತಾ ಪಕ್ಷದ (BJP) ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರು ತಮ್ಮ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಮತ್ತು ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರೊಂದಿಗೆ ವಿವಾಹ ನಡೆದಿದೆ. ಎರಡು ನೆರೆಯ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ ವರನಿಗೆ ವೀಸಾಗೆ ಅರ್ಜಿ ಸಲ್ಲಿಸಿದರೂ ಅದನ್ನು ಪಡೆಯಲು ಸಾಧ್ಯವಾಗಲಿಲ್ಲ.

ವಧುವಿನ ತಾಯಿ ರಾಣಾ ಯಾಸ್ಮಿನ್ ಜೈದಿ ಅವರು ಅನಾರೋಗ್ಯಕ್ಕೆ ಒಳಗಾಗಿ ಪಾಕಿಸ್ತಾನದ ಐಸಿಯುಗೆ ಸೇರಿಸಿದ್ದು, ಪರಿಸ್ಥಿತಿ ಇನ್ನಷ್ಟು ಕಠಿಣವಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆ ಸಮಾರಂಭವನ್ನು ಆನ್‌ ಲೈನ್‌ನಲ್ಲಿ ನಡೆಸಲು ಶಾಹಿದ್ ನಿರ್ಧರಿಸಿದ್ದಾರೆ.

ಶುಕ್ರವಾರ (ಅ.18) ರಾತ್ರಿ, ಅಬ್ಬಾಸ್ ಹೈದರ್ ಅವರು ಆನ್‌ಲೈನ್ “ನಿಕಾಹ್” ನಲ್ಲಿ ಭಾಗವಹಿಸಿದರು. ಲಾಹೋರ್‌ ನ ವಧುವಿನ ಕುಟುಂಬದವರು ಸಮಾರಂಭದಲ್ಲಿ ಭಾಗವಹಿಸಿದ್ದರು.

Advertisement

ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಮಹ್ಫೂಜುಲ್ ಹಸನ್ ಖಾನ್ ಅವರು ಇಸ್ಲಾಂನಲ್ಲಿ, “ನಿಕಾಹ್” ಗೆ ಮಹಿಳೆಯ ಒಪ್ಪಿಗೆ ಅತ್ಯಗತ್ಯ ಎಂದು ವಿವರಿಸಿದರು. ಎರಡೂ ಕಡೆಯ ಮೌಲಾನಾಗಳು ಒಟ್ಟಾಗಿ ಸಮಾರಂಭವನ್ನು ನಡೆಸಿದಾಗ ಆನ್‌ಲೈನ್ ನಿಕಾಹ್ ಸಾಧ್ಯ ಎಂದು ಮೌಲ್ವಿ ಹೇಳಿದರು.

ಹೈದರ್ ತನ್ನ ಹೆಂಡತಿಗೆ ಯಾವುದೇ ತೊಂದರೆಯಿಲ್ಲದೆ ಭಾರತೀಯ ವೀಸಾ ಪಡೆಯಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next