ಉತ್ತರಾಖಂಡ್ : ರಿಷಿಕೇಶ್ ನಲ್ಲಿರುವ ರೆಸಾರ್ಟ್ ನ ಸ್ವಾಗತಗಾರ್ತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹರಿದ್ವಾರದ ಬಿಜೆಪಿ ನಾಯಕನ ಮಗ ಸೇರಿದಂತೆ ಒಟ್ಟು ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿ ಕೆಲಸ ಮಾಡುತ್ತಿದ್ದ 19 ವರ್ಷದ ಅಂಕಿತಾ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದರು. ಅಲ್ಲದೆ ಅವರ ಮೃತದೇಹ ಕಾಲುವೆಯೊಂದರಲ್ಲಿ ಪತ್ತೆಯಾಗಿತ್ತು, ಪ್ರಕರಣದ ತನಿಖೆ ನಡೆಸಿದ ಪೊಲೀಸರು ರೆಸಾರ್ಟ್ ಸಿಬ್ಬಂದಿಗಳನ್ನು ವಿಚಾರಣೆ ನಡೆಸಿದ್ದಾರೆ ಈ ವೇಳೆ ತಾವೇ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಈ ರೆಸಾರ್ಟ್ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಮಗ ಪುಳಕಿತ್ ಆರ್ಯ ಅವರಿಗೆ ಸೇರಿದ್ದಾಗಿದ್ದು ವಿಚಾರಣೆ ವೇಳೆ ರೆಸಾರ್ಟ್ ಮಾಲೀಕ ಪುಳಕಿತ್ ಆರ್ಯ ಹಾಗೂ ವ್ಯವಸ್ಥಾಪಕ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬಂಧಿತರನ್ನು ಪೌಡೀಯ ಕೋಟ್‌ದ್ವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು. ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಇಸ್ರೋದಿಂದ ಕೃತಕ ಸ್ಮಾರ್ಟ್ ಕಾಲುಗಳ ಅಭಿವೃದ್ಧಿ: ಶೀಘ್ರವೇ ಮಾರುಕಟ್ಟೆಗೆ