Advertisement
ಹಾಲಿ ಸಂಸದರಿಗೆ ಮತ್ತೆ ಟಿಕೆಟ್, ಅಭ್ಯರ್ಥಿ ಆಯ್ಕೆಗೆ ಶಿಫಾರಸು ಸೇರಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ನಾಯಕರು ಹಲವುವಿಚಾರಗಳಲ್ಲಿ ವರಿಷ್ಠರ ಮನವೊಲಿಸಿ ಮೇಲುಗೈ ಸಾಧಿಸಿರಬಹುದು. ಅದರಂತೆ ಈಗ ಹೆಚ್ಚು ಸಂಸದರನ್ನು ಗೆಲ್ಲಿಸುವ ಮೂಲಕ ತಾವು ವಹಿಸಿದ ವಕಾಲತ್ತು ಸಮರ್ಥವಾಗಿದೆ ಎಂಬುದನ್ನು ಸಾಬೀತುಪಡಿಸಬೇಕಿದೆ. ಇಲ್ಲದಿದ್ದರೆ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೂ ಬದಟಛಿವಾಗಿರಬೇಕಿದೆ.
ಹಲವು ಕೇಂದ್ರ ಸಚಿವರು ಪ್ರಚಾರ ಸಭೆ, ರೋಡ್ ಶೋ ನಡೆಸಿ ಮತದಾರರನ್ನು ಸೆಳೆಯುವ ಜತೆಗೆ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಕೇಂದ್ರ ನಾಯಕರಿಂದ ಅಗತ್ಯವಿರುವ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸಿದ್ದು, ರಾಜ್ಯ ನಾಯಕರು ಇದೀಗ ತಮ್ಮ ಸಾಮರ್ಥ್ಯಸಾಬೀತುಪಡಿಸಬೇಕಿದೆ ಎಂದೂ ಅವರು ಹೇಳಿದ್ದಾರೆ. ಬಿಜೆಪಿಯಲ್ಲಿ ರಾಜ್ಯ ಮಟ್ಟದ ಹಿರಿಯ ನಾಯಕರು ಈಗಾಗಲೇ ಲೋಕಸಭಾ ಚುನಾವಣೆ ಪ್ರಕ್ರಿಯೆ, ಪ್ರಚಾರದಲ್ಲಿ ಸಕ್ರಿಯರಾಗಿದ್ದಾರೆ. ಹಲವು ನಾಯಕರಿಗೆ ನಿರ್ದಿಷ್ಟ ಜವಾಬ್ದಾರಿಗಳನ್ನು ವಹಿಸಿದ್ದು,ಫಲಿತಾಂಶದ ಬಳಿಕ ಮೌಲ್ಯಮಾಪನವೂ ನಡೆಯಲಿದೆ. ಹಾಗಾಗಿ ಸಾಧ್ಯವಾದಷ್ಟು ಹೆಚ್ಚು ಸಂಖ್ಯೆಯಲ್ಲಿ ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ
ನಾಯಕರಿಗೂ ಅನಿವಾರ್ಯವಾಗಿದೆ.
Related Articles
ಗುರುತಿಸಲಿದ್ದಾರೆ. ಅಭ್ಯರ್ಥಿ ಗೆದ್ದರೂ ಕ್ಷೇತ್ರವಾರು, ಸಮುದಾಯವಾರು ನಿರೀಕ್ಷಿತ ಮಟ್ಟದಲ್ಲಿ ಮತಗಳು ಬಂದಿವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
Advertisement
ಹಾಲಿ ಸಂಸದರು ಪರಭಾವಗೊಂಡರೆಕಾರಣವಾಗುವ ಅಂಶಗಳು, ಆಡಳಿತ ವಿರೋಧಿ ಅಲೆಯನ್ನು ಮರೆ ಮಾಚಿರುವುದು, ನಾನಾ ಒತ್ತಡ,ಪ್ರಭಾವ ಬಳಸಿ ಟಿಕೆಟ್ ಕೊಡಿಸಲಾಗಿತ್ತೇ ಎಂಬುದನ್ನೂ ಸೂಕ್ಷ್ಮವಾಗಿ ಅವಲೋಕಿಸಲಿದ್ದಾರೆ.
ಒಂದೊಮ್ಮೆ ಇಂತಹ ಪ್ರಕರಣಗಳಾದರೆ ರಾಜ್ಯನಾಯಕರ ನಿರ್ಧಾರ, ಆಯ್ಕೆ ಪ್ರಕ್ರಿಯೆಯಲ್ಲೇ ಏನಾದರೂ ಲೋಪವಿದೆಯೆ ಎಂಬುದನ್ನು ವರಿಷ್ಠರು ಸೂಕ್ಷ್ಮವಾಗಿ ಅವಲೋಕಿಸುವ ಸಾಧ್ಯತೆ ಇರುತ್ತದೆ ಎಂದು ಮೂಲಗಳು ಹೇಳಿವೆ.
ಕಾರ್ಯ ನಿರ್ವಹಣೆ ಪರಿಶೀಲನೆ: ಲೋಕಸಭಾ ಕ್ಷೇತ್ರವಾರು ಪ್ರಭಾರಿಗಳು, ಸಹ ಪ್ರಭಾರಿಗಳು ಹಾಗೂ ಸಂಚಾಲಕರನ್ನು ನೇಮಕ ಮಾಡಲಾಗಿದ್ದು,ಅದರಂತೆ ಆಯಾ ಕ್ಷೇತ್ರಗಳಲ್ಲಿ ಜವಾಬ್ದಾರಿ ಹೊತ್ತವರ ಕಾರ್ಯ ನಿರ್ವಹಣೆಯನ್ನೂ ಪರಿಶೀಲಿಸಲಾಗುತ್ತದೆ.ಆ ಕ್ಷೇತ್ರಗಳಲ್ಲಿ ಸಂಘಟನೆ, ಪಕ್ಷ ಬಲವರ್ಧನೆ,ಮತದಾರರನ್ನು ಸೆಳೆಯಲು ನಡೆಸಿದ ಪ್ರಯತ್ನಗಳು, ಅದರ ಒಟ್ಟಾರೆ ಫಲಿತಾಂಶ, ಅಭ್ಯರ್ಥಿ ಸೋಲು, ಗೆಲುವಿಗೆ ಕಾರಣವಾದ ಅಂಶಗಳನ್ನೂ ವರಿಷ್ಠರು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಜರಡಿ ಹಿಡಿಯುವ ಚುನಾವಣೆ
ರಾಜ್ಯ ಬಿಜೆಪಿ ನಾಯಕರ ನಿರೀಕ್ಷೆಗಳಿಗೆಲ್ಲ ಬಹುತೇಕ ಸ್ಪಂದಿಸಿರುವ ವರಿಷ್ಠರು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದಾರೆ. ಹಾಗಾಗಿ ಇತಿಮಿತಿಗಳ ನಡುವೆಯೂ ರಾಜ್ಯ ನಾಯಕರು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಬೆವರು ಹರಿಸುತ್ತಿದ್ದಾರೆ. ನಿರೀಕ್ಷಿತ ಫಲಿತಾಂಶ ಬಾರದಿದ್ದರೆ ಸೂಕ್ತ ಸ್ಥಾನಮಾನ ನೀಡುವ ಬಾಗಿಲುಗಳು “ಬಂದ್’ಆಗುವುದೇ ಎಂಬ ಕುತೂಹಲವೂ ಮೂಡಿದೆ. ಹಾಗಾಗಿ ಲೋಕಸಭಾ ಚುನಾವಣೆ ಫಲಿತಾಂಶವು ರಾಜ್ಯ ಬಿಜೆಪಿ ನಾಯಕರ ಪದೋನ್ನತಿಗೆ ಜರಡಿ ಹಿಡಿಯುವ ಚುನಾವಣೆ ಎಂದೇ ಹೇಳಲಾಗುತ್ತಿದೆ. ಗೆಲ್ಲಲೇಬೇಕಾದ ಅನಿವಾರ್ಯತೆ
ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿಯೊಂದಿಗೆ ಚುನಾವಣೆಯಲ್ಲಿ ತೊಡಗಿಸಿಕೊಳ್ಳಲಾಗಿದೆ. ಚುನಾವಣಾ ಫಲಿತಾಂಶದ ಆಧಾರದ ಮೇಲೆಯೇ ನಾಯಕರ ಕಾರ್ಯ ಸಾಧನೆಯ ಮೌಲ್ಯಮಾಪನವೂ ಸಹಜ. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಹೊರತುಪಡಿಸಿ ಉಳಿದೆಡೆ ಗೆಲ್ಲಲೇಬೇಕಾದ ಅನಿವಾರ್ಯತೆಯಿದ್ದು, ಆ ಹಿನ್ನೆಲೆಯಲ್ಲಿ ಪ್ರಯತ್ನ ನಡೆದಿದೆ. ಪ್ರಯತ್ನ, ಶ್ರಮ ವಹಿಸಿ ಕಾರ್ಯ ನಿರ್ವಹಿಸಿದವರಿಗೆ ಯಾವುದೇ ಸಮಸ್ಯೆಯಾಗದು ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ. – ಎಂ. ಕೀರ್ತಿ ಪ್ರಸಾದ್