ಮಹಾರಾಷ್ಟ್ರ: ಜಬಲ್ಪುರದಲ್ಲಿ ಕಳೆದ ಹತ್ತು ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಹಾರಾಷ್ಟ್ರದ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥೆ ಸನಾ ಖಾನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಜಬಲ್ಪುರ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಪತಿ ಅಮಿತ್ ಅಲಿಯಾಸ್ ಪಪ್ಪುನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಾಗಪುರದ ಮನಕ್‌ಪುರ್ ಪ್ರದೇಶದ ಸನಾ ಖಾನ್ ಆರು ತಿಂಗಳ ಹಿಂದೆ ಬಿಲಹರಿಯ ಧಾಬಾ ನಿರ್ವಾಹಕ ಅಮಿತ್ (ಪಪ್ಪು) ಎಂಬಾತನನ್ನು ವಿವಾಹವಾಗಿದ್ದರು.
ಏನಿದು ಪ್ರಕರಣ: ಕಳೆದ ಹತ್ತು ದಿನಗಳ ಹಿಂದೆ ತನ್ನ ಪತಿಯನ್ನು ಭೇಟಿಯಾಗಲು ಜಬಲ್ಪುರಕ್ಕೆ ತೆರಳಿದ್ದ ಮಗಳು ಸನಾ ಖಾನ್ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪೋಷಕರು ನೀಡಿದ ದೂರಿನ ಅನ್ವಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತ್ತೆಗೆ ತಂಡ ರಚಿಸಿದ್ದರು. ಆದರೆ ಮಹಿಳೆಯ ಪತ್ತೆ ಮಾತ್ರ ಆಗಲಿಲ್ಲ, ಕೊನೆಗೆ ಪೊಲೀಸರಿಗೆ ನಾಪತ್ತೆಯಾದ ಮಹಿಳೆಯ ಪತಿಯ ಮೇಲೆ ಸಂಶಯ ಬಂದು ವಿಚಾರಣೆ ನಡೆಸಿದಾಗ ತಾನೇ ತನ್ನ ಪತ್ನಿಯನ್ನು ಕೊಂದಿರುವ ಆಘಾತಕಾರಿ ವಿಚಾರವನ್ನು ಒಪ್ಪಿಕೊಂಡಿದ್ದಾನೆ.
ಜಬಲ್‌ಪುರ ಮತ್ತು ನಾಗ್ಪುರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಸಂಪೂರ್ಣ ವಿಷಯ ಬಯಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅಮಿತ್ ಅಲಿಯಾಸ್ ಪಪ್ಪು ಸಾಹು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ ಸನಾ ಖಾನ್ ಕೊಲೆ ಮಾಡಿದ್ದನ್ನು ಅಮಿತ್ ಒಪ್ಪಿಕೊಂಡಿದ್ದಾನೆ. ಮೊದಲು ತನ್ನ ಮನೆಯಲ್ಲಿಯೇ ಸನಾಳನ್ನು ದೊಣ್ಣೆಯಿಂದ ಹೊಡೆದು ಕೊಂದಿರುವುದಾಗಿ ಅಮಿತ್ ಪೊಲೀಸರಿಗೆ ಹೇಳಿದ್ದಾನೆ. ಕೊಲೆಯ ನಂತರ, ಜಬಲ್ಪುರದಿಂದ ಸುಮಾರು 45 ಕಿಮೀ ದೂರದಲ್ಲಿರುವ ಹಿರಾನ್ ನದಿಯ ಸೇತುವೆಗೆ ಸನಾ ಶವವನ್ನು ಎಸೆದಿರುವುದಾಗಿ ಹೇಳಿಕೊಂಡಿದ್ದಾನೆ.
ತಾಯಿ ಮನೆಯಲ್ಲೇ ವಾಸವಿದ್ದ ಸನಾ :
ಮದುವೆಯಾಗಿ ಆರು ತಿಂಗಳು ಆಗಿದ್ದರು ಸನಾ ಮಾತ್ರ ನಾಗ್ಪುರದಲ್ಲಿ ತಾಯಿ ಜೊತೆಗೆ ಇದ್ದರು ಎನ್ನಲಾಗಿದೆ ಅಲ್ಲದೆ ಪತಿ ಜಬಲ್ಪುರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಹಣದ ವಿಚಾರಕ್ಕೆ ಕೊಲೆ:
ಅಮಿತ್ ಹಾಗೂ ಸನಾ ನಡುವೆ ಹಣದ ವಿಚಾರದಲ್ಲಿ ಆಗಾಗ ಜಗಳ ನಡೆಯುತ್ತಿದ್ದುದಾಗಿ ಅಮಿತ್ ಹೇಳಿಕೊಂಡಿದ್ದಾನೆ ಅದರಂತೆ ಸನಾ ಖಾನ್ ಆಗಸ್ಟ್ 2 ರಂದು ನಾಗ್ಪುರದಿಂದ ಜಬಲ್ಪುರಕ್ಕೆ ಬಂದವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು ಜಗಳ ಅತಿರೇಕಕ್ಕೆ ಹೋಗಿ ಅಮಿತ್ ಮನೆಯಲ್ಲಿದ್ದ ದೊಣ್ಣೆಯಿಂದ ಸನಾ ತಲೆಗೆ ಹೊಡೆದಿದ್ದಾನೆ ಈ ವೇಳೆ ಪ್ರಜ್ಞೆ ಕಳೆದುಕೊಂಡು ಬಿದ್ದ ಸನಾ ಅಲ್ಲೇ ಸಾವನ್ನಪ್ಪಿದ್ದಾಳೆ ಬಳಿಕ ಆಕೆಯ ಶವವನ್ನು ಸುಮಾರು 45 ಕಿಮೀ ದೂರದಲ್ಲಿರುವ ಹಿರಾನ್ ನದಿಗೆ ಎಸೆದಿರುವುದಾಗಿ ಹೇಳಿಕೊಂಡಿದ್ದಾನೆ.
ಇನ್ನೂ ಪತ್ತೆಯಾಗದ ಮೃತದೇಹ;
ಅಮಿತ್ ಹೇಳಿಕೆಯಂತೆ ಸನಾ ಮೃತ ದೇಹವನ್ನು ಹಿರಾನ್ ನದಿಗೆ ಎಸೆದಿರುವ ಹೇಳಿಕೆಯನ್ನು ಆಧರಿಸಿ ನದಿಯಲ್ಲಿ ಮಹಿಳೆಯ ದೇಹದ ಹುಡುಕಾಟ ನಡೆಸುತ್ತಿರುವ ಪೊಲೀಸರಿಗೆ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
ಇದನ್ನೂ ಓದಿ: Rudraprayag: ಭೂಕುಸಿತಕ್ಕೆ ಕೊಚ್ಚಿಹೋದ ರಸ್ತೆ: ಕೇದಾರನಾಥಕ್ಕೆ ತೆರಳುತ್ತಿದ್ದ ಐವರು ಸಾವು