Advertisement

ಸುವೇಂದು ಅಧಿಕಾರಿ ಸಹೋದರನ ಕಾರಿನ ಮೇಲೆ ದಾಳಿ : ಟಿಎಂಸಿ ಮೇಲೆ ಆರೋಪ

03:00 PM Mar 27, 2021 | Team Udayavani |

ಕೊಲ್ಕತ್ತಾ : ಪಶ್ಚಿಮ ಬಾಂಗಾಳದಲ್ಲಿ ವಿಧಾನ ಸಭೆ ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಇದೇ ಹಿನ್ನೆಲೆಯಲ್ಲೇ ಸುವೇಂದು ಅಧಿಕಾರಿ ಸಹೋದರನ ಕಾರಿನ ಮೇಲೆ ದಾಳಿ ಮಾಡಲಾಗಿದೆ.

Advertisement

ಘಟನೆಯುವ ಸುಬಾಜ್ ಪುತ್ ಎಂಬಲ್ಲಿ ನಡೆದಿದ್ದು, ಕಾರು ಚಾಲಕನಿಗೆ ಗಾಯಗಳಾಗಿದ್ದು, ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಸಹೋದರ ಸೋಮೇಂದು ಅಧಿಕಾರಿ ಮೇಲೆ ಹಲ್ಲೆ ನಡೆದಿಲ್ಲ ಎಂದು ವರದಿಯಾಗಿದೆ.

ಟಿಎಂಸಿ ಬ್ಲಾಕ್ ಅಧ್ಯಕ್ಷ ರಾಮ್ ಗೋವಿಂದ್ ದಾಸ್ ನೇತೃತ್ವದಲ್ಲಿ ದಾಳಿ ನಡೆದಿರುವುದಾಗಿ ಸುವೇಂದು ಮತ್ತು ಆತನ ಸಹೋದರ ದಿಬಿಯಾಂದು ಅಧಿಕಾರಿ ಆರೋಪಿಸಿದ್ದಾರೆ.

ಈ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next