ನಾಂದೇಡ್: ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯ ಮಹಾ ವಿಕಾಸ್ ಆಘಾಡಿಯ ಸರಕಾರ ಸ್ಥಾಪನೆಯಾಗಿ ಎರಡು ತಿಂಗಳುಗಳು ಕಳೆದಿದೆ. ಆದರೂ ಕೂಡ ಬಿಜೆಪಿ ವತಿಯಿಂದ ಮತ್ತೆ ಅಧಿಕಾರಕ್ಕೆ ಬರುವ ಭರವಸೆ ವ್ಯಕ್ತವಾಗುತ್ತಿದೆ. ಶಿವಸೇನೆ ಪ್ರಸ್ತಾಪಿಸಿದರೆ ಬಿಜೆಪಿ ಇಂದಿಗೂ ಸರಕಾರ ರಚನೆಗೆ ಸಿದ್ಧವಾಗಿದೆ ಎಂದು ಬಿಜೆಪಿಯ ನಾಯಕ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.
ಮಾಜಿ ಹಣಕಾಸು ಸಚಿವ ಸುಧೀರ್ ಮುಂಗಂತಿವಾರ್ ಅವರು, ನಾಂದೇಡ್‌ನಲ್ಲಿ ನಡೆದ ವಿವಾಹದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಮಾಧ್ಯಮಗಳ ಜತೆ ಸುಧೀರ್ ಮುಂಗಂತಿವಾರ್ ಅವರು ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಈಗಲೂ ಕೂಡ ಎಂಎನ್‌ಎಸ್ ಅನ್ನು ಸೇರಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಹಾಗೆಯೇ ಶಿವಸೇನೆಯನ್ನು ಟೀಕಿಸುವ ಅವಕಾಶವನ್ನು ಅವರು ಕಳೆದುಕೊಳ್ಳಲಿಲ್ಲ. ಮುಂಬಯಿಯ ಶಕ್ತಿಶಾಲಿಯಾಗಿದ್ದ ಮಾತೋಶ್ರೀಯು ಶಕ್ತಿಯನ್ನು ಕಳೆದುಕೊಂಡಿದೆ. ಈಗ ಈ ಶಕ್ತಿಯು ದಿಲ್ಲಿಯ ಮಾತೋಶ್ರಿ ನೀಡಿದ್ದು, ಶಕ್ತಿಶಾಲಿಯಾಗುವಂತೆ ಮಾಡಿದೆ. ಅದಲ್ಲದೆ ಶಿವಸೇನೆ ಕಾಂಗ್ರೆಸ್‌ಗೆ ಬೆಂಬಲ ನೀಡುವುದು ಎಂದರೆ ಇಪ್ಪತ್ತೋಂದನೇ ಶತಕದಲ್ಲಿ ಆಶ್ಚರ್ಯವೇ ಆಗುತ್ತದೆ ಎಂದು ಮುಂಗಂತಿವಾರ್ ಹೇಳಿದ್ದಾರೆ.
ಶಿವಸೇನೆ ಪ್ರಸ್ತಾಪಿಸಿದರೆ ಅಧಿಕಾರ ಸ್ಥಾಪಿಸುವಲ್ಲಿ ಯಾವುದೇ ತೊಂದರೆ ಇಲ್ಲ
ಶಿವಸೇನೆ ಜೊತೆ ಅಧಿಕಾರ ಸ್ಥಾಪನೆಯ ಬಗ್ಗೆ ಸುಧೀರ ಮುಂಗಂತಿವಾರ್, ಶಿವಸೇನೆ ನಮ್ಮ ನೈಸರ್ಗಿಕ ಸ್ನೇಹಿತ. ಅವರು ಇನ್ನೂ ಪ್ರಸ್ತಾಪಿಸಿದರೆ, ಬಿಜೆಪಿಗೆ ಸರಕಾರ ಸ್ಥಾಪಿಸಲು ಯಾವುದೇ ತೊಂದರೆ ಇಲ್ಲ. ಹಾಗೆಯೇ ನಮಗೆ ಎಂಎನ್‌ಎಸ್‌ನೊಂದಿಗೆ ಹೋಗಬೇಕಾದ ಅಗತ್ಯವಿಲ್ಲ ಮತ್ತು ಎಂಎನ್‌ಎಸ್‌ನಿಂದ ಪ್ರಸ್ತಾಪ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಹಾವಿಕಾಸ್ ಆಘಾಡಿಯ ವಿರುದ್ಧ ಟೀಕೆ ವ್ಯಕ್ತಪಡಿಸಿದ ಮುಂಗಂತಿವಾರ್ ಅವರು, ವೆಂಟಿಲೇಟರ್‌ನಲ್ಲಿ ರೋಗಿಯಂತೆ ಸರಕಾರದ ಪರಿಸ್ಥಿತಿಯಾಗಿದೆ. ಸರಕಾರವು ಎಷ್ಟು ಕಾಲ ಉಳಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವ ಸರಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂಬ ಇತಿಹಾಸವಿದೆ. ಈ ಮೂರು ಪಕ್ಷಗಳ ಪರಿಸ್ಥಿತಿಯು ಹಾಗಾಗಿದೆ, ಆದ್ದರಿಂದ ಮುಂದೆ ಏನಾಗುತ್ತದೆ ಎನ್ನುವುದು ಅಸಾಧ್ಯ ಎಂದು ಮುಂಗಂತಿವಾರ್ ಹೇಳಿದರು.