Advertisement

 ಬಿಜೆಪಿ ನಾಯಕಿ ಸೊನಾಲಿ ಫೋಗಟ್‌ ಸಾವು: ಸಿಬಿಐ ತನಿಖೆಗೆ ಕುಟುಂಬಸ್ಥರ ಒತ್ತಾಯ

10:17 PM Aug 24, 2022 | Team Udayavani |

ನವದೆಹಲಿ: ಬಿಜೆಪಿ ನಾಯಕಿ ಸೊನಾಲಿ ಫೋಗಟ್‌ ಅವರದ್ದು ಹೃದಯಾಘಾತವಲ್ಲ ಬದಲಾಗಿ ಕೊಲೆ ಎಂದು ಅವರ ತಮ್ಮ ರಿಂಕು ಢಾಕಾ ದೂರಿದ್ದಾರೆ.

Advertisement

ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. ಸುಧೀರ್‌ ಸಂಗ್ವಾನ್‌ ಎಂಬಾತ ತಮ್ಮ ಸಹೋದರಿಗೆ ಆಪ್ತ ಸಹಾಯಕನಾಗಿದ್ದ. ಮೂರು ವರ್ಷಗಳ ಹಿಂದೆ ಆತ ಸೊನಾಲಿಗೆ ಊಟದಲ್ಲಿ ಮತ್ತು ಬರುವ ಔಷಧ ಹಾಕಿ ಅತ್ಯಾಚಾರ ಮಾಡಿದ್ದ. ಅದರ ವಿಡಿಯೋ ಇಟ್ಟುಕೊಂಡು ಮೂರು ವರ್ಷಗಳಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದ ಎಂದು ಆರೋಪಿಸಿ, ಪೊಲೀಸರಿಗೆ ದೂರು ನೀಡಿದ್ದಾರೆ.

ಆ.22ರಂದು ಸೊನಾಲಿ ಮೈದುನ ಅಮನ್‌ಗೆ ಕರೆ ಮಾಡಿ, “ಸುಧೀರ್‌ ಊಟದಲ್ಲಿ ಏನೋ ಬೆರೆಸಿ ಕೊಟ್ಟಿದ್ದಾನೆ. ಅದರಿಂದಾಗಿ ನನಗೆ ಆರೋಗ್ಯ ಹದಗೆಟ್ಟಿದೆ’ ಎಂದೂ ಹೇಳಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಂಗಳವಾರ ಸೋನಾಲಿ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next