Advertisement

ಮಸ್ಕಿಗೆ ನಾಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್

08:30 PM Apr 02, 2021 | Team Udayavani |

ಮಸ್ಕಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ ಕಟೀಲ್‌ ಪಟ್ಟಣಕ್ಕೆ ಆಗಮಿಸಲಿದ್ದು, 300ಕ್ಕೂ ಹೆಚ್ಚು ಬೂತ್‌ ಅಧ್ಯಕ್ಷರು ಹಾಗೂ 2,500 ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸುವರು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ ಹೇಳಿದರು.

Advertisement

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈಗಾಗಲೇ ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರ್ಯ ಕಾರ್ಯ ನಡೆಸಿದ್ದಾರೆ. ಎರಡು ತಂಡಗಳಲ್ಲಿ ಮುಖಂಡರು ಪ್ರಚಾರ್ಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಬೂತ್‌ ಅಧ್ಯಕ್ಷರ ಸಮಾವೇಶವನ್ನು ಬಿಜೆಪಿ ಕಚೇರಿ ಆವರಣದಲ್ಲಿ ನಡೆಸಲಾಗುವುದು ಎಂದರು.

ಏ.6ರಂದು ಬಿಜೆಪಿಯ ಸಂಸ್ಥಾಪನ ದಿನವಾಗಿದ್ದು, ಬೂತ್‌ ಮಟ್ಟದ ಅಧ್ಯಕ್ಷರು, 47 ಶಕ್ತಿ ಕೇಂದ್ರದ ಅಧ್ಯಕ್ಷರು, 16 ಮಹಾಶಕ್ತಿ ಕೇಂದ್ರದ ಅಧ್ಯಕ್ಷರ ಮನೆ ಮೇಲೆ ಬಿಜೆಪಿಯ ಧ್ವಜ ಹಾರಲಿದೆ. ಪ್ರತಿ ಅಧ್ಯಕ್ಷರ ಮನೆ ಮೇಲೆ ಧ್ವಜಹಾರಿಸುವಾಗ 50 ರಿಂದ 100 ಜನ ಕಾರ್ಯಕರ್ತರು ಭಾಗವಹಿಸುವರು. ಮಸ್ಕಿ ಕ್ಷೇತ್ರದಲ್ಲಿ 2 ಲಕ್ಷ 7 ಸಾವಿರ ಮತದಾರರಿದ್ದು, 50 ಸಾವಿರ ಕುಟುಂಬಗಳಿವೆ. ಚುನಾವಣೆ ಮುಗಿಯುವುದರೊಳಗಾಗಿ ಬಿಜೆಪಿ ಕಾರ್ಯಕರ್ತರು 3 ಬಾರಿ ಮನೆಗಳಿಗೆ ಭೇಟಿ ನೀಡಿ ಬಿಜೆಪಿ ಸಾಧನೆಗಳನ್ನು ತಿಳಿಸುವರು ಎಂದರು.

ಸಿಎಂ ಬಿ.ಎಸ್‌. ಯಡಿಯೂರಪ್ಪ ಮಸ್ಕಿ ಕ್ಷೇತ್ರದಲ್ಲಿ ಏ.11, 12ರಂದು ವಾಸ್ತವ್ಯ ಹೂಡಲಿದ್ದು, 5 ಜಿಪಂಗಳಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಏ.5-6ರಂದು ಮಸ್ಕಿಗೆ ಆಗಮಿಸಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವರು ಎಂದರು. ಕುರಿ ಮತ್ತು ಹುಣ್ಣಿ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಕೆಪಿಟಿಸಿಎಲ್‌ ಅಧ್ಯಕ್ಷ, ತಮ್ಮೇಶಗೌಡ, ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಪ್ರಾಣೇಶ ದೇಶಪಾಂಡೆ, ಶರಣಬಸವ ಎಸ್‌.ಸಿ. ಜಿಲ್ಲಾ ಅಧ್ಯಕ್ಷ, ಮಂಡಲ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಮಲ್ಲು ಯಾದವ್‌, ನಾಗರಾಜ ಯಂಬಲದ, ಮಲ್ಲಪ್ಪ ಅಂಕುಶದೊಡ್ಡಿ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next