Advertisement

ಆಳಂದದಲ್ಲಿ ಬಿಜೆಪಿ ಮುಖಂಡ ಮಹಾಂತಪ್ಪ ಆಲೂರೆ ಹತ್ಯೆ

07:45 PM Feb 29, 2024 | Team Udayavani |

ಆಳಂದ(ಕಲಬುರಗಿ): ಬಿಜೆಪಿ ಮುಖಂಡ ಮಹಾಂತಪ್ಪ ಎಸ್‌. ಆಲೂರೆ (47) ಅವರನ್ನು ದುಷ್ಕರ್ಮಿಗಳು ಗುರುವಾರ ಬೆಳಗಿನ ಜಾವ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ ಘಟನೆ ಮಾದನಹಿಪ್ಪರಗಾ ಠಾಣೆ ವ್ಯಾಪ್ತಿಯ ಸ್ವಗ್ರಾಮ ಸರಸಂಬಾದ ಬಳಿ ನಡೆದಿದೆ.

Advertisement

ಬೆಳಗಿನ ಜಾವ ಹೊಲಕ್ಕೆ ತೆರಳಿದ್ದಾಗ ಕಾರಿನಲ್ಲಿ ಬಂದ ಆಗಂತುಕರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆಲೂರೆ ಅವರನ್ನು ಆಳಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಸೊಲ್ಲಾಪುರ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ.

ಸರಸಂಬಾ ಗ್ರಾಮದ ಧನಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದ ಆಲೂರೆ, ನಾಲ್ಕು ಬಾರಿ ಸರಸಂಬಾ ಗ್ರಾಪಂ ಸದಸ್ಯರಾಗಿದ್ದರು. ಮಾಜಿ ಶಾಸಕ ಸುಭಾಷ ಗುತ್ತೇದಾರ ಪ್ರಬಲ ಬೆಂಬಲಿಗರಾಗಿದ್ದರು. ಮಾದನಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next