Advertisement

BJP ನಾಯಕ ಕಿರಿಟ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ

09:28 PM Jul 18, 2023 | Team Udayavani |

ನವದೆಹಲಿ: ಮಹಾರಾಷ್ಟ್ರ ಬಿಜೆಪಿ ನಾಯಕ, ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದು ಹೆಸರು ಮಾಡಿರುವ ಕಿರಿಟ್‌ ಸೋಮಯ್ಯ ಗಂಭೀರ ಲೈಂಗಿಕ ಕಿರುಕುಳ ಆರೋಪಕ್ಕೊಳಗಾಗಿದ್ದಾರೆ.

Advertisement

ಸೋಮವಾರ ಸಂಜೆ ಅವರಿಗೆ ಸಂಬಂಧಿಸಿದ ಅಶ್ಲೀಲ ಭಂಗಿಯಲ್ಲಿರುವ ವಿಡಿಯೋವೊಂದನ್ನು ಲೋಕಶಾಹಿ ಎಂಬ ಮರಾಠಿ ಸುದ್ದಿವಾಹಿನಿ ಬಿಡುಗಡೆ ಮಾಡಿದೆ. ಇಂತಹ ಹಲವು ವಿಡಿಯೊಗಳು ತನ್ನ ಬಳಿ ಇವೆ, ಹಲವರು ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆಂದು ಟೀವಿ ವಾಹಿನಿ ಹೇಳಿಕೊಂಡಿದೆ.

ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಕಿರಿಟ್‌ ಸೋಮಯ್ಯ, ನಾನು ಯಾವುದೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿಲ್ಲ. ಮರಾಠಿ ವಾಹಿನಿ ನನ್ನ ಮೇಲೆ ಕಿರುಕುಳದ ಆರೋಪ ಮಾಡಿದೆ. ಈ ಬಗ್ಗೆ ತನಿಖೆ ಮಾಡಬೇಕೆಂದು ನಾನು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ರಲ್ಲಿ ಕೇಳಿಕೊಳ್ಳುತ್ತೇನೆಂದು ಹೇಳಿದ್ದಾರೆ. ಅದರಂತೆ, ಡಿಸಿಎಂ ಫ‌ಡ್ನವೀಸ್‌ ಅವರು ತನಿಖೆಗೆ ಆದೇಶಿಸಿದ್ದಾರೆ.

ಈ ವೇಳೆ ಎನ್‌ಸಿಪಿಯ ಶರದ್‌ ಪವಾರ್‌ ಬಣ ಹಾಗೂ ಶಿವಸೇನೆಯ ಉದ್ಧವ್‌ ಬಣ ಕಿರಿಟ್‌ ಸೋಮಯ್ಯ ವಿರುದ್ಧ ಕಿಡಿಕಾರಿದ್ದು, “ಚಪ್ಪಲಿಯಿಂದ ಹೊಡೆಯಿರಿ’ ಎಂಬ ಅಭಿಯಾನ ಆರಂಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next