Advertisement

ಬಿಜೆಪಿ ಎಲ್‌ಇಡಿ ಪ್ರಚಾರ ವಾಹನಗಳಿಗೆ ಚಾಲನೆ

07:00 AM Apr 07, 2018 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸುವ ಜತೆಗೆ ಜನರ ಸಲಹೆ, ಅಭಿಪ್ರಾಯವನ್ನೂ ಸಂಗ್ರಹಿಸುವ ಹೈಟೆಕ್‌ ಎಲ್‌ಇಡಿ ಪ್ರಚಾರ ವಾಹನಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್‌.ಯಡಿಯೂರಪ್ಪ ಚಾಲನೆ
ನೀಡಿದರು. 

Advertisement

ಮಲ್ಲೇಶ್ವರದ ವೈಯಾಲಿಕಾವಲ್‌ ಮೈದಾನದಲ್ಲಿ ಎಲ್‌ಇಡಿ ಪ್ರಚಾರ ವಾಹನ ಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾ
ಡಿದ ಅವರು, ರಾಜ್ಯ 224 ವಿಧಾನಸಭಾ ಕ್ಷೇತ್ರಗಳಿಗೂ ಎಲ್‌ಇಡಿ ಪ್ರಚಾರ ವಾಹನಗಳು ತೆರಳಲಿದ್ದು, ನಿತ್ಯ 10 ಹಳ್ಳಿಗಳಲ್ಲಿ ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಲಿದೆ. ಏ.14ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವೇ ಮುಖ್ಯ. ಹಾಗಾಗಿ ಹೈಟೆಕ್‌ ವಿಡಿಯೋ ರಥಗಳಲ್ಲಿ ಮೂರು ವಿಡಿಯೋ ಪ್ರದರ್ಶನದ ಜತೆಗೆ ಸಲಹೆ ಸಂಗ್ರಹಕ್ಕೆ ಪೆಟ್ಟಿಗೆಗಳನ್ನು ಇಡಲಾಗಿದೆ. ವಾಟ್ಸ್‌ಅಪ್‌,
ವೆಬ್‌ಸೈಟ್‌ನಲ್ಲೂ ಸಲಹೆ, ಅಭಿಪ್ರಾಯ ತಿಳಿಸಬಹುದಾಗಿದೆ ಎಂದರು. ಈಗಾಗಲೇ 200 ವಿಧಾನಸಭಾ  ಕ್ಷೇತ್ರಗಳಲ್ಲಿಪ್ರಣಾಳಿಕೆಗೆಅಳವಡಿಸಬೇಕಾದ ಅಂಶಗಳ ಬಗ್ಗೆ ವ್ಯಾಪಕ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದೀಗ ಎಲ್‌ಇಡಿ ಪ್ರಚಾರ
ವಾಹನಗಳ ಮೂಲಕ “ನವಕರ್ನಾಟಕ ಜನಪರಶಕ್ತಿ’ ಅಭಿಯಾನದಡಿ ಸಲಹೆ ಪಡೆಯಲಾಗುವುದು ಎಂದು ತಿಳಿಸಿದರು. ಸಂಸದರಾದ ಪಿ.ಸಿ.ಮೋಹನ್‌, ಶೋಭಾ ಕರಂದ್ಲಾಜೆ, ಶಾಸಕ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ವಕ್ತಾರ ಡಾ.ವಾಮನಾಚಾರ್ಯ 
ಉಪಸ್ಥಿತರಿದ್ದರು.

ಹೈಟೆಕ್‌ ವಾಹನ
100ಕ್ಕೂ ಹೆಚ್ಚು ಎಲ್‌ಇಡಿ ಪ್ರಚಾರ ವಾಹನಗಳು ಶುಕ್ರವಾರದಿಂದಲೇ ಪ್ರಚಾರಕ್ಕೆ ನಿಯೋಜನೆಗೊಂಡಿವೆ. ಪ್ರತಿ ವಾಹನದ ಹೊರಭಾಗದಲ್ಲಿ ಬೃಹತ್‌ ಎಲ್‌ಇಡಿ ಪರದೆಯಿದ್ದು, ಬಿಜೆಪಿ ಕುರಿತು ವಿಡಿಯೋ ಪ್ರಸಾರವಾಗುತ್ತಿರುತ್ತದೆ. ಜತೆಗೆ ನವಕರ್ನಾಟಕ ಜನಪರಶಕ್ತಿ ಅಭಿಪ್ರಾಯದಡಿ ಇಡಲಾದ ಪೆಟ್ಟಿಗೆಗೆ ಜನರು ಅಭಿಪ್ರಾಯ, ಸಲಹೆ ಸಲ್ಲಿಸಬಹುದು. ಟೋಲ್‌ ಫ್ರಿ ಸಂಖ್ಯೆ 6359 150 150ಗೆ ಕರೆ ಮಾಡಿಯೂ ಸಲಹೆ ನೀಡಬಹುದು. 

Advertisement

Udayavani is now on Telegram. Click here to join our channel and stay updated with the latest news.

Next