Advertisement

ಈಗಲೇ ಹೀಗಾದರೆ, ಮುಂದೆ ಹೇಗೆ ಸಿದ್ದರಾಮಯ್ಯ?: ಬಿಜೆಪಿ ಪ್ರಶ್ನೆ

12:43 PM Oct 14, 2022 | Team Udayavani |

ಬೆಂಗಳೂರು: ನಮ್ಮ ಮಾರ್ಗದರ್ಶಕರಾದ ಬಿಎಸ್ ಯಡಿಯೂರಪ್ಪ ಅವರು ಪ್ರಚಾರವನ್ನು ಈಗಷ್ಟೇ ಆರಂಭಿಸಿದ್ದಾರೆ. ಅದಾಗಲೇ ಕಾಂಗ್ರೆಸ್ ಕಕ್ಕಾಬಿಕ್ಕಿಯಾಗಿದೆ, ಸಿದ್ದರಾಮಯ್ಯ ಬೆದರಿದ್ದಾರೆ. ಜನ ಸಂಕಲ್ಪ ಯಾತ್ರೆಯ ಆರಂಭದಲ್ಲೇ ಹೀಗಾದರೆ, ಮುಂದೆ ಹೇಗೆ ಸಿದ್ದರಾಮಯ್ಯ? ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ.

Advertisement

ಸಿದ್ದರಾಮಯ್ಯ ವಿರುದ್ಧ ಸರಣಿ ಟ್ವೀಟ್ ಮಾಡಿದ್ದು, ಬಿಜೆಪಿ ಸರ್ಕಾರ ಪರಿಶಿಷ್ಟ ವರ್ಗದ ಮೀಸಲಾತಿಯನ್ನು ಹೆಚ್ಚಳ ಮಾಡಿದ್ದೇ ತಡ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಿಗೆ ಬೆವರಿಳಿಯತೊಡಗಿದೆ. ಸಿದ್ದರಾಮಯ್ಯ ಅವರೇ, ತಾವು ಓಟ್‌‌ ಬ್ಯಾಂಕ್ ಆಗಿ ಬಳಸಿದ್ದ ದಲಿತ ಸಮುದಾಯ ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸುತ್ತಿರುವುದು ಸಹಿಸಿಕೊಳ್ಳಲಾಗುತ್ತಿಲ್ಲವೇ? ಅಧಿಕಾರವಿದ್ದಾಗ ಪರಿಶಿಷ್ಟ ವರ್ಗದ ಬೇಡಿಕೆಯನ್ನು ಮನ್ನಿಸದೆ ಕಾಲಹರಣ ಮಾಡಿದ್ದ ಸಿದ್ದರಾಮಯ್ಯ ಅವರಿಗೆ ಈಗ ಬೊಮ್ಮಾಯಿ ಸರ್ಕಾರ ಮಾಡಿದ ಮೀಸಲಾತಿ ಹೆಚ್ಚಳ ಬಿಸಿತುಪ್ಪವಾಗಿ ಪರಿಣಮಿಸಿದೆ. ಪರಿಶಿಷ್ಟ ವರ್ಗದವರ ಏಳಿಗೆ ಸಹಿಸದ ಕಾಂಗ್ರೆಸ್ ಮೀಸಲಾತಿ ಹೆಚ್ಚಳವನ್ನು ವಿರೋಧಿಸುತ್ತಿತ್ತು. ಏಕೆ ಈ ದಲಿತ ವಿರೋಧಿ ಮನೋಸ್ಥಿತಿ ಎಂದಿದೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕಂದಕ ಸೃಷ್ಟಿಯಾಗಿದೆ. ಸಿಎಲ್‌ಪಿ ನಾಯಕರಿಗೂ ಹೇಳದೆ ಟಿಕೆಟ್ ಫೈನಲ್ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಅಬ್ಬರಿಸಿದ್ದರು. ಸಿದ್ದರಾಮಯ್ಯನವರಿಗೆ ಒಮ್ಮೆ ಅವಕಾಶ ನೀಡಿ, ಅವರ ನೇತೃತ್ವದಲ್ಲಿ ಚುನಾವಣೆ ಸೋತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದು ಮರೆತು ಹೋಯಿತೇ ಎಂದು ಬಿಜೆಪಿ ಹೇಳಿದೆ.

ದಶಕಗಳಿಂದ ವಿದೂಷಕನಾಗಿ ದೇಶದ ಜನರನ್ನು “ಅಪ್ರಬುದ್ಧ ಬಾಲಕ” ನಗಿಸುತ್ತಿದ್ದಾನೆ. ಸಿದ್ದರಾಮಯ್ಯನವರೇ, ಬಟಾಟೆಯಿಂದ ಚಿನ್ನ ತೆಗೆಯುವವ ವಿದೂಷಕನಲ್ಲದೆ ಮತ್ತೇನು ಎಂದು ತಿರುಗೇಟು ನೀಡಿದೆ.

ಭಯ ಎನ್ನುವುದು ಮೋದಿ ಸರ್ಕಾರಕ್ಕೆ ಇರುತ್ತಿದ್ದರೆ, ಆರ್ಟಿಕಲ್ 370 ರದ್ದು, ಸಿಎಎ ಕಾನೂನು, ರಾಮಮಂದಿರ ನಿರ್ಮಾಣ, ಟ್ರಿಪಲ್ ತಲಾಕ್ ರದ್ದು, ಸರ್ಜಿಕಲ್ ಸ್ಟ್ರೈಕ್ ಸಾಧ್ಯವಾಗುತ್ತಿರಲಿಲ್ಲ. ಸಿದ್ದರಾಮಯ್ಯನವರೇ, ಇವೆಲ್ಲವನ್ನೂ ವಿರೋಧಿಸಿದ ದೇಶದೊಳಗಿನ ದ್ರೋಹಿಗಳಿಂದ ನಮಗೆ ಭಯ ಕಾಡುತ್ತಿರುವುದು ನಿಜ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next