Advertisement

ವಲಸಿಗರ ಗುಂಪು ಛಿದ್ರ: ಬಿಜೆಪಿಗೆ ಅನುಕೂಲ?

11:10 PM Aug 11, 2021 | Team Udayavani |

ಬೆಂಗಳೂರು: ಹಿಂದಿನ ಮೈತ್ರಿ ಸರಕಾರವನ್ನು ಪತನಗೊಳಿಸಿ ಬಿಜೆಪಿ ಸರಕಾರ ರಚನೆಗೆ ಕಾರಣ ರಾಗಿದ್ದ ವಲಸಿಗರ ಬಳಗ ಈಗ ಛಿದ್ರವಾಗಿದ್ದು,  ಅಂತರ ಕಾಯ್ದುಕೊಳ್ಳುವ ಲೆಕ್ಕಾಚಾರ ಆರಂಭವಾಗಿದೆ. ಇದು ಬಿಜೆಪಿಗೆ ವರವಾದಂತಿದೆ.

Advertisement

ಜೆಡಿಎಸ್‌ ಮತ್ತು ಕಾಂಗ್ರೆಸ್‌ನ 15 ಶಾಸಕರು ಹಾಗೂ ಇಬ್ಬರು ಪಕ್ಷೇ ತರ ಶಾಸಕರು ಮೈತ್ರಿ ಸರಕಾರದ ಪತನ ಮತ್ತು ಅನಂತರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ ಒಟ್ಟಾ ಗಿಯೇ ಇದ್ದರು.  ತಂಡದಲ್ಲಿ ಯಾರಿಗೆ  ಅನ್ಯಾಯವಾದರೂ  ಒಟ್ಟಾಗಿ ಚರ್ಚಿಸುತ್ತಿದ್ದರು. ಈಗ ತಮ್ಮನ್ನು ಬಿಜೆಪಿಗೆ ಕರೆತಂದ ಯಡಿಯೂರಪ್ಪ ಅಧಿಕಾರದಲ್ಲಿಲ್ಲದ ಕಾರಣ ಮತ್ತು ಮಿತ್ರ ಮಂಡಳಿ ಸದಸ್ಯರ ನಡುವಿನ ವೈಯಕ್ತಿಕ ಪ್ರತಿಷ್ಠೆಯಿಂದಾಗಿ ಎಲ್ಲರೂ ತಮ್ಮ ರಾಜಕೀಯ ಭವಿಷ್ಯವನ್ನು

ಗಮನದಲ್ಲಿ ಇರಿಸಿಕೊಂಡು ಲೆಕ್ಕಾ ಚಾರದ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಜಾರಕಿಹೊಳಿಯಿಂದ ಅಂತರ :

ಮೈತ್ರಿ ಸರಕಾರದ ವಿರುದ್ಧ ಬಂಡಾಯ ಸಾರಿದ ಸಂದರ್ಭದಲ್ಲಿ ವಲಸಿಗರ ತಂಡದ ನಾಯಕತ್ವ ವಹಿಸಿದ್ದ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ ಬಳಿಕ ವಲಸಿಗರ ತಂಡ ವಿಭಜನೆಯತ್ತ ಸಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

ಕೆಲವರು ಬಿಜೆಪಿಯಲ್ಲೇ ಗಟ್ಟಿ :

ವಲಸಿಗರಲ್ಲಿ ಎಸ್‌.ಟಿ. ಸೋಮ ಶೇಖರ್‌, ಬಿ.ಸಿ. ಪಾಟೀಲ್‌, ಡಾ| ಸುಧಾಕರ್‌, ಬೈರತಿ ಬಸವರಾಜ್‌, ಡಾ| ನಾರಾಯಣ ಗೌಡ, ಮುನಿರತ್ನ ಬಿಜೆಪಿಯಲ್ಲೇ ಗಟ್ಟಿ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆನಂದ್‌ ಸಿಂಗ್‌ರಿಂದಲೂ ದೂರ :

ಮುಂಬಯಿ ಮಿತ್ರ ಮಂಡಳಿ ಸದಸ್ಯರು ಈಗ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ಆನಂದ್‌ ಸಿಂಗ್‌ಗೆ ಆಗಿದೆ ಎನ್ನಲಾದ  ಅನ್ಯಾಯದ ವಿಚಾರದಲ್ಲಿಯೂ ಇದೇ ಕಾರಣಕ್ಕೆ ಅಂತರ ಕಾಯ್ದು ಕೊಂಡಿದ್ದಾರೆ ಎನ್ನಲಾಗಿದೆ. ಇದೆಲ್ಲವೂ ಮಿತ್ರ ಮಂಡಳಿ ಹಿಂದಿನ ಒಗ್ಗಟ್ಟಿನಲ್ಲಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.

ಭವಿಷ್ಯ ಅಗೋಚರ, ಕೆಲವರಿಗೆ ಆತಂಕ :

ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವ ಮಹೇಶ್‌ ಕುಮಟಳ್ಳಿ, ಶ್ರೀಮಂತ ಪಾಟೀಲ್‌, ಆರ್‌. ಶಂಕರ್‌,  ರಮೇಶ್‌ ಜಾರಕಿಹೊಳಿ, ಚುನಾವಣೆಯಲ್ಲಿ ಸೋಲುಂಡಿರುವ ಎಂ.ಟಿ.ಬಿ. ನಾಗರಾಜ್‌, ಎಚ್‌. ವಿಶ್ವನಾಥ್‌ ಅವರಿಗೆ ಬಿಜೆಪಿಯಲ್ಲಿ ಭವಿಷ್ಯದ ಆತಂಕ ಆರಂಭವಾಗಿದೆ.

ನನ್ನ ಬಗ್ಗೆ ಎಲ್ಲರೂ ಅನುಕಂಪ ತೋರಿಸು ತ್ತಾರೆ. ಆದರೆ, ಆನಂದ್‌ ಸಿಂಗ್‌ಗೆ ಸೂಕ್ತ ಖಾತೆ ನೀಡಬೇಕಿತ್ತು. ವಲಸಿಗರಲ್ಲಿ ಒಗ್ಗಟ್ಟು ಇಲ್ಲದಿರುವುದಕ್ಕೆ ಹೀಗಾಗುತ್ತಿದೆ.ಪ್ರತಾಪ್‌ ಗೌಡ ಪಾಟೀಲ್‌, ವಲಸಿಗ ಮಾಜಿ ಶಾಸಕ

ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ನನ್ನನ್ನು ಎಂಎಲ್‌ಸಿ ಮಾಡಿ ಸಚಿವನನ್ನಾಗಿ ಮಾಡಿದ್ದಾರೆ. ಅಶೋಕ್‌ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ.ಎಂ.ಟಿ.ಬಿ. ನಾಗರಾಜ್‌,  ಪೌರಾಡಳಿತ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next