Advertisement

ಪೊಲೀಸರೇ ಸರಕಾರದ ಕೈಗೊಂಬೆಗಳಾಗದಿರಿ: ಕರಂದ್ಲಾಜೆ

06:20 AM Mar 08, 2018 | Team Udayavani |

ಕಾಪು: ಪೊಲೀಸರು ಸರಕಾರದ ಕೈಗೊಂಬೆಗಳಾಗಿ, ಮಂತ್ರಿಗಳ ಮತ್ತು ಶಾಸಕರ ಚೇಲಾಗಳಾಗಿ ಕೆಲಸ ಮಾಡಬಾರದು. ಸರಕಾರ ಅಶಾಶ್ವತ. ಆದರೆ ನೀವು ಮಾತ್ರ ಇಲ್ಲಿ ಶಾಶ್ವತ. ಇನ್ನಾದರೂ ಸರಕಾರದ ಕೈಗೊಂಬೆಗಳಾಗಿರದೇ ಜನಪರವಾಗಿ ಕಾರ್ಯ ನಿರ್ವಹಿಸಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಕರೆ ನೀಡಿದರು.

Advertisement

ಕಾಪು ಕ್ಷೇತ್ರ ಬಿಜೆಪಿಯ ನೇತೃತ್ವದಲ್ಲಿ ಪಾಂಗಾಳದಿಂದ ಕಾಪುವಿನವರೆಗೆ ಜರಗಿದ ಬಿಜೆಪಿ ಜನಸುರಕ್ಷಾ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ, ಸಿದ್ಧರಾಮಯ್ಯ ಸರಕಾರದ ಕುಮ್ಮಕ್ಕಿನಿಂದಾಗಿ ಬೆಳಗ್ಗೆ ಮನೆ ಬಿಟ್ಟ ಯುವಕರು ಸಂಜೆ ವಾಪಸ್‌ ಮನೆಗೆ ಬರೋದು ಗ್ಯಾರೆಂಟಿ ಇಲ್ಲ ಎಂಬಂತಾಗಿದೆ. ಕೇಸರಿ ಶಾಲು ಧರಿಸಿದ್ರೆ ಅವರ ಹತ್ಯೆಯಾಗುತ್ತದೆ. ಯುವಕರಿಗೆ ರಕ್ಷಣೆ ನೀಡುವ ಗƒಹ ಇಲಾಖೆ ಕೂಡಾ ಮೌನವಾಗಿದೆ ಎಂದರು.

ಕಾಪುವಿನಲ್ಲೂ ಕಾಂಗ್ರೆಸ್‌ನ್ನು ಕಿತ್ತೂಗೆಯಿರಿ
ಕಾಪುವಿನಲ್ಲೂ ಬಿಜೆಪಿ ಕಾರ್ಯಕರ್ತರಿಗೆ, ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಶಾಸಕರ ಬೆಂಬಲಿಗರು ಹಲ್ಲೆ ನಡೆಸುತ್ತ ಇದ್ದಾರೆ. ಕೇಸರಿ ಶಾಲು ಧರಿಸಿದ್ರೆ, ಭಾರತ್‌ ಮಾತಾಕೀ ಜೈ ಅಂದ್ರೆ ಗೂಂಡಾ ಕಾಯ್ದೆ ಹಾಕ್ತಾರೆ. ತಲವಾರು ಹಿಡ್ಕೊಂಡು ರೌಡಿಸಂ ಮಾಡುವವರಿಗೆ ಏನೂ ಮಾಡೋದಿಲ್ಲ. ಸರ್ಕಾರದಿಂದಲೇ ಈ ಕೆಲಸ ಆಗುತ್ತಿದ್ದು, ಕಾಪುವಿನಿಂದಲೂ ಕಾಂಗ್ರೆಸ್‌ನ್ನು ಕಿತ್ತೂಗೆಯುವ ಕಾರ್ಯಕ್ಕೆ ಕಾರ್ಯಕರ್ತರು ಮುಂದಾಗಬೇಕಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ್‌ ಪೂಜಾರಿ, ಮಾಜಿ ಶಾಸಕರಾದ ಲಾಲಾಜಿ ಆರ್‌. ಮೆಂಡನ್‌, ರಘುಪತಿ ಭಟ್‌, ಬಿಜೆಪಿ ದ.ಕ. ಜಿಲ್ಲಾ ಪ್ರಭಾರಿ ಉದಯ್‌ಕುಮಾರ್‌ ಶೆಟ್ಟಿ, ಕಾಪು ಕ್ಷೇತ್ರ ಪ್ರಭಾರಿ ಸುರೇಶ್‌ ಶೆಟ್ಟಿ ಗುರ್ಮೆ, ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಕಾಪು ಪುರಸಭೆ ವಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು, ಬಿಜೆಪಿ ಜಿಲ್ಲಾ ವಕ್ತಾರ ಕಟಪಾಡಿ ಶಂಕರ ಪೂಜಾರಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್‌, ಜಿಲ್ಲಾ ಕಾರ್ಯದರ್ಶಿಗಳಾದ ಯಶ್‌ಪಾಲ್‌ ಸುವರ್ಣ, ಕುತ್ಯಾರು ನವೀನ್‌ ಶೆಟ್ಟಿ, ಕುಯಿಲಾಡಿ ಸುರೇಶ್‌ ನಾಯಕ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಶ ನಾಯಕ್‌, ಬಿಜೆಪಿ ಪುರಸಭಾ ಸಮಿತಿಯ ಅಧ್ಯಕ್ಷ ಸಂದೀಪ್‌ ಶೆಟ್ಟಿ ಕಲ್ಯ, ಕ್ಷೇತ್ರ ಕಾರ್ಯದರ್ಶಿ ಜಿತೇಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಸ್ತಾವನೆಗೈದರು. ಬಿಜೆಪಿ ಕಾಪು ಕ್ಷೇತ್ರಾಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು ಸ್ವಾಗತಿಸಿದರು. ಕ್ಷೇತ್ರ ಕಾರ್ಯದರ್ಶಿ ಮುರಳೀಧರ ಪೈ ವಂದಿಸಿದರು. ಕುತ್ಯಾರು ಪ್ರಸಾದ್‌ ಶೆಟ್ಟಿ  ಕಾರ್ಯಕ್ರಮ ನಿರೂಪಿಸಿದರು.

ಕ್ರಿಮಿನಲ್‌ ಚಟುವಟಿಕೆಯಲ್ಲಿ ರಾಜ್ಯ ಸರಕಾರ ನಂ.1: ಶೆಟ್ಟರ್‌
ಕರ್ನಾಟಕ ರಾಜ್ಯ ಕಂಡಿರುವ ಮುಖ್ಯಮಂತ್ರಿಗಳ ಪೈಕಿ ಸಿದ್ದರಾಮಯ್ಯ ಅತ್ಯಂತ ಕೆಟ್ಟ ನಡವಳಿಕೆಯ ಮುಖ್ಯಮಂತ್ರಿ. ಭ್ರಷ್ಟ, ಅಹಂಕಾರಿ ಮತ್ತು ದುರಹಂಕಾರಿ ಮುಖ್ಯಮಂತ್ರಿಯಾಗಿದ್ದು, ಇವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ, ಹಿಂದೂಗಳ ಹತ್ಯೆ, ಕ್ರಿಮಿನಲ್‌ ಚಟುವಟಿಕೆ ಮತ್ತು ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕಕ್ಕೆ ನಂ.1 ಎಂಬ ಹಣೆಪಟ್ಟಿ ಲಭಿಸಿದೆ. ಇದುವೇ ಸರಕಾರದ ದೊಡ್ಡ ಸಾಧನೆಯಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next