Advertisement

ಮಹಿಳೆಯರ ಹಿತ ಕಾಯುವ ಬಿಜೆಪಿ

02:19 PM Dec 12, 2017 | Team Udayavani |

ಹಾನಗಲ್ಲ: ಬಿಜೆಪಿ ಸರಕಾರ ಸದಾ ಮಹಿಳೆಯರ ಹಿತ ಕಾಯುತ್ತಿದ್ದು, ದೇಶದಲ್ಲಿ ಮಹಿಳೆಯರಿಗೆ ಅತಿ ಹೆಚ್ಚು ಮೀಸಲಾತಿ ನೀಡಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದರು.

Advertisement

ಸೋಮವಾರ ಪಟ್ಟಣದ ಉದಾಸಿ ಸಾವಿತ್ರಮ್ಮ ಕಲ್ಯಾಣಮಂಟಪದಲ್ಲಿ ನಡೆದ ಬಿಜೆಪಿ ಮಹಿಳಾ ಸಮವೇಶದಲ್ಲಿ ಮಾತನಾಡಿದ ಅವರು, ಸ್ವಸಹಾಯ  ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದ ಮೊಟ್ಟ ಮೊದಲ ಸರಕಾರ ಬಿಜೆಪಿ ಸರ್ಕಾರ. ತ್ರಿವಳಿ ತಲಾಖ್‌ ನಿಷೇಧ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಲ್ಪಸಂಖ್ಯಾತ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬಿಜೆಪಿಯ ಕಾರ್ಯಕ್ರಮಗಳನ್ನು ತಮ್ಮವೆಂದು ಜನತೆಯ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮೋದಿ ಸರಕಾರ ಗರ್ಭಿಣಿಯರಿಗೆ ಉತ್ತಮ ಪೋಶಕಾಂಶವುಳ್ಳ ಆಹಾರ ಒದಗಿಸುವ ನಿಟ್ಟಿನಲ್ಲಿ 6000 ರೂ. ನೀಡುತ್ತಿದೆ. ಆದರೆ ರಾಜ್ಯ ಕಾಂಗ್ರೆಸ್‌ ಸರಕಾರ ಗರ್ಭಿಣಿಯರನ್ನು ಅಂಗನವಾಡಿಗೆ ಬರುವ ಯೋಜನೆ ಮಾಡಿದ್ದು ಹಾಸ್ಯಾಸ್ಪದ
ಎಂದರು.

ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಪ್ರಧಾನಿ ಮೋದಿ ಅವರ ಬದ್ಧತೆಯ ಆಡಳಿತ ಹಾಗೂ ಅಮಿತ ಶಾ ಅವರ ದೂರದೃಷ್ಟಿ
ದೇಶಕ್ಕೆ ಉಪಕಾರಿಯಾಗಿದೆ. ದೇಶದ ಬಡವ, ದೀನ-ದಲಿತರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಲ್ಲರ ಮನಸ್ಸಿನಲ್ಲಿ ಅಭಿವೃದ್ಧಿಯ ಅಚ್ಚೋತ್ತಿದೆ. ದೇಶದ ಜನತೆ ಯಾವುದೇ ಆತಂಕವಿಲ್ಲದೆ ನೆಮ್ಮದಿಯಿಂದ ಬದುಕು ಸಾಗಿಸಲು ಅನುಕೂಲ ಮಾಡಿಕೊಟ್ಟಿದೆ. ಕಾಂಗ್ರೆಸ್‌ ಮುಕ್ತ ಭಾರತ ಈಗ ಸನ್ನಿಹಿತವಾಗಿದೆ ಎಂದರು.

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಮಹಿಳಾ ಸಬಲೀಕರಣ ಹಾಗೂ ಸಶಕ್ತೀಕರಣ ಪ್ರಮುಖವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹಿಳೆಯರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗಾಗಿ 11ರಿಂದ 16 ಯೋಜನೆಗಳನ್ನು ಮಹಿಳೆಯರಿಗೆ ನೀಡಿದ್ದಾರೆ. ಆದರೆ ರಾಜ್ಯ ಸರಕಾರದ ದೋಷದಿಂದ ಕಾರ್ಯಕ್ರಮಗಳು ಅನುಷ್ಠಾನಗೊಳ್ಳುತ್ತಿಲ್ಲ. ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಪರಿವರ್ತನೆಯಾದಾಗ ನವಕರ್ನಾಟಕ ನಿರ್ಮಾಣ ಸಾಧ್ಯ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೋಭಾ ನಿಸ್ಸಿಮಗೌಡ್ರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿದರು. ತಾಲೂಕು
ಘಟಕದ ಅಧ್ಯಕ್ಷೆ ಅನುಪಮಾ ಚನ್ನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಗೊಬ್ಬೇರ, ನೀಲಮ್ಮ ಉದಾಸಿ, ಕಲ್ಯಾಣಕುಮಾರ ಶೆಟ್ಟರ, ಎ.ಎಸ್‌. ಬಳ್ಳಾರಿ, ಬಿ.ಎಸ್‌. ಅಕ್ಕಿವಳ್ಳಿ, ಪದ್ಮನಾಭ ಕುಂದಾಪುರ, ರತ್ನವ್ವ ಗುಡ್ಡದಮತ್ತಳ್ಳಿ, ಹಸೀನಾಬಿ ನಾಯ್ಕನವರ, ಕ್ಷ್ಮೀ ಹರಿಜನ, ಅನಿತಾ ಶಿವೂರ, ಯಲ್ಲವ್ವ ಕಂಚಿಗೊಲ್ಲರ, ಲಕ್ಷ ವ್ವ ಹಳಕೋಟಿ, ಶಕುಂತಲಾ ಪವಾಡಿ ಇದ್ದರು. ಅಬಿದಾಬಿ ನದಾಫ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next