Advertisement
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಅವರ ನಡುವಣ ಸಮನ್ವಯದ ಕೊರತೆ ಗುರುವಾರ ವಿಧಾನಸಭೆ ಕಲಾಪ ಸಂದರ್ಭ ಸಭಾತ್ಯಾಗ ಹಾಗೂ ಧರಣಿ ಗಲಿಬಿಲಿಯ ಮೂಲಕ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಈ ಎರಡು ಕಾರ್ಯಕ್ರಮ ಮಹತ್ವ ಪಡೆದಿವೆ.
Related Articles
Advertisement
ಇನ್ನೊಂದೆಡೆ ಬಿಜೆಪಿಯ ನಾಯಕರ ನಡುವಣ ಗೊಂದಲದ ಕುರಿತು ವಿಧಾನಸಭೆಯ ಮೊಗಸಾಲೆಯಲ್ಲಿ ಶಾಸಕರ ಗುಸುಗುಸು ಹಾಗೂ ಬಹಿರಂಗ ಹೇಳಿಕೆಗಳು ಮುಂದುವರಿದಿವೆ. ಸಿ.ಸಿ. ಪಾಟೀಲ್, ಯತ್ನಾಳ್, ಆರಗ ಜ್ಞಾನೇಂದ್ರ, ಅಶ್ವತ್ಥನಾರಾಯಣ, ಸುನಿಲ್ ಕುಮಾರ್, ಸುರೇಶ್ ಕುಮಾರ್ ಸಹಿತ ಬಹುತೇಕ ಹಿರಿಯ ನಾಯಕರು ಅಶೋಕ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವಿಜಯೇಂದ್ರ ಅವರ ಜತೆಗೆ ಚರ್ಚಿಸಿ ಸಭಾತ್ಯಾಗದ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಸಭಾತ್ಯಾಗ ಆ ಕ್ಷಣದ ಉತ್ತಮ ನಿರ್ಧಾರ ವಾಗಿತ್ತು ಎಂದು ಹಿರಿಯ ಶಾಸಕರೊಬ್ಬರು “ಉದಯವಾಣಿ”ಗೆ ತಿಳಿಸಿದರು.ಶಾಸಕ ಎಸ್.ಆರ್. ವಿಶ್ವನಾಥ್ ಬೇಸರಕ್ಕೂ ಅರ್ಥವಿದೆ; ಹಿಂದಿನ ಸಾಲಿನ ಶಾಸಕರಿಗೆ ಈ ಮಾಹಿತಿ ರವಾನೆ ಯಾಗಿರಲಿಲ್ಲ. ಮುಖ್ಯ ಸಚೇತಕರ ನೇಮಕವಾಗಿದ್ದರೆ ಈ ಸಮನ್ವಯದ ಕೊರತೆ ಸೃಷ್ಟಿಯಾಗುತ್ತಿರಲಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಒಟ್ಟಾರೆ ಯಾಗಿ ಈ ಬೆಳವಣಿಗೆಯಿಂದ ಅಶೋಕ್ ಸ್ವಲ್ಪ ಕಳೆಗುಂದಿದಂತೆ ಕಂಡು ಬಂದಿದ್ದರೆ ಮಾಜಿ ಸಚಿವ ಬೈರತಿ ಬಸವರಾಜ್ ಹೊರತುಪಡಿಸಿ ಬೆಂಗಳೂರಿನ ಬಹುತೇಕ ಶಾಸಕರು ಶುಕ್ರ ವಾರ ಸದನಕ್ಕೆ ಗೈರು ಹಾಜರಾಗಿದ್ದರು. ಎಸ್.ಆರ್. ವಿಶ್ವನಾಥ ನೇತೃತ್ವದಲ್ಲಿ ಬಿಜೆಪಿಯ ಬೆಂಗಳೂರು ಶಾಸಕರು ಸಭೆ ನಡೆಸುವ ಸಾಧ್ಯತೆ ಇದ್ದು, ಯಲಹಂಕ ಉಪನಗರದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿರುವ ವಿಶ್ವನಾಥ್ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ. ಈ ಘಟನೆಗೆ ಸಂಬಂಧಪಟ್ಟಂತೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ಎಲ್ಲ ನಾಯಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡಿದ್ದೆವು. ಬೆಳಗಾವಿ ಪೊಲೀಸರ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿದ್ದೇವೆ. ಉತ್ತರ ಕರ್ನಾಟಕ ಬಗ್ಗೆಯೂ ಚರ್ಚೆ ನಡೆಯಬೇಕು. ಯತ್ನಾಳ್ ಈ ಬಗ್ಗೆ ನನ್ನ ಬಳಿ ಚರ್ಚಿಸಿದ್ದರು. ಸುಮ್ಮನೆ ಸಮಯ ವ್ಯರ್ಥ ಮಾಡುವುದು ಬೇಡ ಎಂದು ಎಲ್ಲರೂ ಹೇಳಿದ್ದರು ಎಂದಿದ್ದಾರೆ. ನಾನು, ಯತ್ನಾಳ್, ವಿಜಯೇಂದ್ರ, ಅಶ್ವತ್ಥ ನಾರಾಯಣ ಸೇರಿ ಸಭಾತ್ಯಾಗದ ತೀರ್ಮಾನ ಕೈಗೊಂಡಿದ್ದೆವು. ಆದರೆ ನಮ್ಮ ತೀರ್ಮಾನ ಹಿಂದಿನ ಸಾಲಿನ ಕುಳಿತಿದ್ದವರಿಗೆ ತಲುಪಿರಲಿಲ್ಲ. ಸಮನ್ವಯದ ಕೊರತೆ ಇರುವು ದರಿಂದ ಈ ರೀತಿ ಆಗಿದೆ. ಯಾರು ಏನೇ ಹೇಳಿದರೂ ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರನ್ನು ಕರೆಸಿ ನಾನು ಮಾತನಾಡುತ್ತೇನೆ
-ಆರ್. ಅಶೋಕ್, ವಿಪಕ್ಷ ನಾಯಕ