ಗದಗ: “ಬಿಜೆಪಿ ಬಿತ್ತನೆಯೇ ಸರಿಯಿಲ್ಲ. ಬೀಜ ಸರಿಯಿಲ್ಲದ ಪಕ್ಷದಲ್ಲಿ ಎಂಥ ಸಸಿ ಹುಟ್ಟಲು ಸಾಧ್ಯ?’ ಎಂದು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ತಾತ್ವಿಕ ಸಿದ್ಧಾಂತದ ಮೇಲೆ ಬೆಳೆದು ಬಂದ ಪಕ್ಷವಲ್ಲ. ಕೇವಲ ಭಾವನಾತ್ಮಕ ವಿಚಾರದಲ್ಲಿ ಕೆರಳಿಸುವ ಬೀಜ ಹೊಂದಿರುವ ಪಕ್ಷ. ಹೀಗಾಗಿ ಬಿಜೆಪಿಯಲ್ಲಿ ಆಂತರಿಕ ಕಲಹ ಸಾಮಾನ್ಯ ಎಂದರು. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂ. 1 ಎಂದಿರುವ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಅಧಿಧಿಕಾರಾವಧಿಧಿಯಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ರಾಜ್ಯಕ್ಕೆ ಭ್ರಷ್ಟಾಚಾರ ಪರಿಚಯಿಸಿದ್ದೇ ಬಿಜೆಪಿ ನಾಯಕರು. ಹೀಗಾಗಿ ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ
ಅವರಿಗಿಲ್ಲ. ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಆಡಳಿತದಲ್ಲಿ ಪಾರದರ್ಶಕತೆ
ಹೆಚ್ಚಿದೆ. ರಾಜ್ಯದ ಆಡಳಿತದ ಬಗ್ಗೆ ಇತ್ತೀಚೆಗೆ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲಿ ಜನರೇ ತೀರ್ಪು ನೀಡಿದ್ದು, ಯಾವುದೇ ಸಂಸ್ಥೆಗಳ ಸಮೀಕ್ಷೆಗಳ ಪ್ರಮಾಣಪತ್ರ ಬೇಕಿಲ್ಲ ಎಂದು ಹೇಳಿದರು.